More

    ಯುವಜನರು ದೇಶ ಸೇವೆ ಹುದ್ದೆಗೆ ಸೇರ್ಪಡೆಗೊಳ್ಳಬೇಕು

    ಬಾಳೆಹೊನ್ನೂರು: ಪಾಲಕರು ಮಕ್ಕಳನ್ನು ಕೇವಲ ಡಾಕ್ಟರ್, ಇಂಜಿನಿಯರ್‌ಗಳನ್ನಾಗಿಸುವ ವ್ಯಾಮೋಹ ಬಿಟ್ಟು ಭಾರತೀಯ ಸೈನ್ಯಕ್ಕೆ ಸೇರಿಸುವ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರುಗೊಳಿಸಿ ದೇಶ ಸೇವೆಗೆ ಸಿದ್ಧಗೊಳಿಸಬೇಕು ಎಂದು ಥಟ್ ಅಂತ ಹೇಳಿ ಕಾರ್ಯಕ್ರಮದ ಕ್ವಿಜ್ ಮಾಸ್ಟರ್ ಡಾ. ನಾ.ಸೋಮೇಶ್ವರ್ ಹೇಳಿದರು.

    ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್‌ನಿಂದ ಬುಧವಾರ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ 18-35 ವಯಸ್ಸಿನ ಯುವಜನರ ಸಂಖ್ಯೆ ಶೇ.40 ಇದ್ದು, ಈ ಪ್ರಮಾಣ ಬೇರೆ ಯಾವ ದೇಶದಲ್ಲೂ ಇಲ್ಲ. ಪ್ರತಿ ವರ್ಷ 16 ಲಕ್ಷ ಮಂದಿ ಇಂಜಿನಿಯರ್ ಪದವೀಧರರಾಗುತ್ತಿದ್ದಾರೆ. ಇದರಲ್ಲಿ ಕೇವಲ 1 ಲಕ್ಷ ಜನರು ಮಾತ್ರ ಉದ್ಯೋಗ ಪಡೆಯುತ್ತಿದ್ದಾರೆ. ಇದರಿಂದ ಮುಂದೆ ನಿರುದ್ಯೋಗ ಸಮಸ್ಯೆ ಕಾಡಬಹುದು ಎಂದರು.
    ಯುವಜನರು ಸೇನೆಗೆ ಸೇರ್ಪಡೆಗೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ದೇಶ ಸೇವೆ ಮಾಡಿದ ತೃಪ್ತಿ ಹಣ ಸಂಪಾದನೆಯಿಂದ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಜೇಸಿ ಸಂಸ್ಥೆ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉಚಿತವಾಗಿ ಕೊಡಿಸಿ ಯುವಪಡೆಯನ್ನು ಸಿದ್ಧಗೊಳಿಸಬೇಕು ಎಂದು ಸಲಹೆ ನೀಡಿದರು.
    ಮೊಬೈಲ್ ಮಿತಿಯಲ್ಲಿ ಬಳಸುವ ಕ್ರಮದ ಬಗ್ಗೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ತಜ್ಞರು ತರಬೇತಿ ನೀಡುತ್ತಾರೆ. ಜೇಸಿ ಸಂಸ್ಥೆ ಪ್ರತಿ ಕಾಲೇಜಿನಲ್ಲೂ ಈ ಕಾರ್ಯಕ್ರಮ ನಡೆಸಬೇಕು ಎಂದರು.
    ಜೇಸಿ ವಲಯಾಧ್ಯಕ್ಷೆ ಆಶಾ ಜೈನ್ ಮಾತನಾಡಿ, ಜೇಸಿ ಸದಸ್ಯರು ಪ್ರತಿ ಕಾರ್ಯದಲ್ಲಿ ಸಕ್ರಿಯವಾಗಿದ್ದುಕೊಂಡು ಸಮಾಜ ಸೇವೆ ಮಾಡಬೇಕು. ಯುವಜನರೇ ಸಂಪತ್ತು. ಪರಿವರ್ತನೆ ಜಗದ ನಿಯಮವಾಗಿದ್ದು, ಅದಕ್ಕೆ ಸರಿಯಾಗಿ ಮುನ್ನಡೆಯಬೇಕು ಎಂದರು.
    ಜೇಸಿ ವಲಯ ಉಪಾಧ್ಯಕ್ಷೆ ವಿದ್ಯಾರಾಜು ಮಾತನಾಡಿ, ಜೇಸಿ ಆತ್ಮವಿಶ್ವಾಸ, ಧೈರ್ಯ, ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ ಬೆಳೆಸಲಿದೆ ಎಂದು ಹೇಳಿದರು.
    ನೂತನ ಅಧ್ಯಕ್ಷರಾಗಿ ಎನ್.ಶಶಿಧರ್, ಕಾರ್ಯದರ್ಶಿಯಾಗಿ ಎಚ್.ಆರ್.ಶೃಜಿತ್ ಅಧಿಕಾರ ಸ್ವೀಕರಿಸಿದರು. ಲೇಡಿ ಜೇಸಿ ಅಧ್ಯಕ್ಷೆಯಾಗಿ ಎಂ.ಆರ್.ಬಿಂದು, ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ ಅಂಕುಶ್ ಪೂಜಾರಿ ಅಧಿಕಾರ ಸ್ವೀಕರಿಸಿದರು.
    ಸ್ಥಾಪಕ ಅಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್, ನಿಕಟಪೂರ್ವ ಅಧ್ಯಕ್ಷ ರಚನ್ ಜೆ.ಹುಯಿಗೆರೆ, ಯಶ್‌ಪಾಲ್, ಬಿ.ಎಸ್.ಅಜಿತ್, ನಿಖಿಲ್ ಕಾನ್ಕೆರೆ, ಕೆ.ಎಚ್.ರಮ್ಯಾ, ಕೆ.ಆರ್.ಲಿಖಿತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts