More

    ಎಸ್​ಜೆವಿಎನ್​ನಲ್ಲಿ 129 ಫೀಲ್ಡ್ ಆಫೀಸರ್ ಹುದ್ದೆಗೆ ಆಹ್ವಾನ: ವಿದೇಶದಲ್ಲಿಯೂ ಅವಕಾಶ

    ಎಸ್​ಜೆವಿಎನ್ ಲಿಮಿಟೆಡ್ ಮಿನಿರತ್ನ ಸಂಸ್ಥೆಗಳಲ್ಲಿ ಒಂದಾಗಿದ್ದು, ವಿದ್ಯುತ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ತನ್ನ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸಲು ಎಸ್​ಜೆವಿಎನ್​ನ ಕೆಲ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಈ ಹುದ್ದೆಗಳು ತಾತ್ಕಾಲಿಕ ಮತ್ತು ಒಪ್ಪಂದದ ಆಧಾರದ ಮೇಲೆ 3 ವರ್ಷದ ಆರಂಭಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ನಂತರ ಅಭ್ಯರ್ಥಿಯ ಕಾರ್ಯಕ್ಷಮತೆ ಆಧರಿಸಿ 2 ವರ್ಷ ಅವಧಿ ವಿಸ್ತರಿಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶ ಅಥವಾ ವಿದೇಶದಲ್ಲಿರುವ ಎಸ್​ಜೆವಿಎನ್​ನ ಯಾವುದೇ ಘಟಕ/ ಕಚೇರಿಗೆ ಬೇಕಾದರೂ ನೇಮಕ ಮಾಡಬಹುದಾಗಿದೆ.

     ಒಟ್ಟು ಹುದ್ದೆಗಳು: 129


    ಯಾವೆಲ್ಲ ವಿಭಾಗದಲ್ಲಿ ನೇಮಕ?: ಹ್ಯೂಮನ್ ರಿಸೋರ್ಸ್, ಫೈನಾನ್ಸ್ ಆಂಡ್ ಅಕೌಂಟ್ಸ್, ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್, ಅಫಿಷಿಯಲ್ ಲಾಂಗ್ವೇಜ್ ವಿಭಾಗಗಳಲ್ಲಿ ಕೆಳಕಂಡ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಹುದ್ದೆ ವಿವರ

    * ಫೀಲ್ಡ್ ಆಫೀಸರ್ – 20

    * ಜೂನಿಯರ್ ಫೀಲ್ಡ್ ಇಂಜಿನಿಯರ್ – 75

    * ಜೂನಿಯರ್ ಫೀಲ್ಡ್ ಆಫೀಸರ್ – 34

    ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಸಿವಿಲ್, ಎಲೆಕ್ಟ್ರಿಕಲ್, ಮೆಕಾನಿಕಲ್ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ, ಪಸೋನಲ್ ಮ್ಯಾನೇಜ್​ವೆುಂಟ್/ ಸೋಷಿಯಲ್ ವರ್ಕ್/ ಲೇಬರ್ ವೆಲ್​ಫೇರ್/ ಬಿಜಿನೆಸ್ ಮ್ಯಾನೇಜ್​ವೆುಂಟ್/ ಆಫೀಸ್ ಮ್ಯಾನೇಜ್​ವೆುಂಟ್/ ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ನಲ್ಲಿ ಪದವಿ / ಡಿಪ್ಲೊಮಾ, ಎಂಬಿಎ/ ಸ್ನಾತಕೋತ್ತರ ಡಿಪ್ಲೊಮಾ, ಸಿಎ/ ಐಸಿಡಬ್ಲ್ಯುಎ-ಸಿಎಂಎ, ಇಂಟರ್ ಸಿಎಂಎ, ಹಿಂದಿ ಅಥವಾ ಇಂಗ್ಲಿಷ್ ಮುಖ್ಯ ವಿಷಯವಾಗಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಿಎ/ ಐಸಿಡಬ್ಲ್ಯುಎ-ಸಿಎಂಎ, ಇಂಟರ್ ಸಿಎಂಎನಲ್ಲಿ ಉತ್ತೀರ್ಣ ಅಂಕ ಪಡೆದಿದ್ದರೆ ಸಾಕು. ಉಳಿದ ಪದವಿಗಳಲ್ಲಿ ಕನಿಷ್ಠ ಶೇ.55 (ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು ಶೇ.50) ಅಂಕ ಪಡೆದಿರಬೇಕು.

    ವಯೋಮಿತಿ: ಅರ್ಜಿ ಸಲ್ಲಿಕೆ ಕೊನೇ ದಿನಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಫೀಲ್ಡ್ ಆಫೀಸರ್​ಗೆ ಮಾಸಿಕ 60,000 ರೂ. ಹಾಗೂ ಜೂನಿಯರ್ ಫೀಲ್ಡ್ ಇಂಜಿನಿಯರ್ ಹಾಗೂ ಅಧಿಕಾರಿ ಹುದ್ದೆಗಳಿಗೆ ಮಾಸಿಕ 45,000 ರೂ. ವೇತನ ಜತೆ ಇಪಿಎಫ್ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಫೀಲ್ಡ್ ಆಫೀಸರ್ ಹುದ್ದೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಉಳಿದ ಹುದ್ದೆಗಳಿಗೆ ಕೇವಲ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಆಹ್ವಾನಿಸಲಾಗುವುದು. ದೆಹಲಿ, ಚಂಡೀಗಢ, ಮೊಹಾಲಿ, ದೆಹ್ರಾಡೂನ್, ಹಿಮಾಚಲ ಪ್ರದೇಶದ ನಗರಗಳಲ್ಲಿ ಪರೀಕ್ಷಾ ಕೇಂದ್ರ ಇರಲಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 24.8.2021

    ಅಧಿಸೂಚನೆಗೆ: https://bit.ly/2VOZOKP

    ಮಾಹಿತಿಗೆ: http://sjvn.nic.in/

    ಕಲ್ಲಿದ್ದಲು ಸಂಸ್ಥೆಯಲ್ಲಿ ಮ್ಯಾನೇಜಿಂಗ್​ ಟ್ರೇನಿ ಹುದ್ದೆ- 588 ಪೋಸ್ಟ್‌, 1.60 ಲಕ್ಷ ರೂ.ವರೆಗೆ ಸಂಬಳ

    ವಿಜ್ಞಾನ ಪದವೀಧರರಿಗೆ ಭೂವಿಜ್ಞಾನ ಸಚಿವಾಲಯದಲ್ಲಿವೆ 50 ಹುದ್ದೆ: 1.25 ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts