More

    ವಿವಿಧ ಪದವೀಧರರಿಗೆ ಯೂನಿಯನ್​ ಬ್ಯಾಂಕ್​ನಲ್ಲಿದೆ 347 ಹುದ್ದೆ- 80 ಸಾವಿರ ರೂ.ವರೆಗೆ ಸಂಬಳ

    ಯೂನಿಯನ್​ ಬ್ಯಾಂಕ್​ ಆಫ್‌​ ಇಂಡಿಯಾ ಸಾರ್ವಜನಿಕ ವಲಯ ಬ್ಯಾಂಕ್​ ಆಗಿದ್ದು, ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿದೆ. ವಿದೇಶದಲ್ಲೂ ಶಾಖೆಗಳನ್ನು ತೆರೆದಿದೆ. ಪ್ರಸ್ತುತ ಬ್ಯಾಂಕ್​ನಲ್ಲಿ ಸ್ಪೆಷಲಿಸ್ಟ್​ ಆಫೀಸರ್​ (ವಿಶೇಷ ಅಧಿಕಾರಿ) ಹುದ್ದೆಗೆ ನೇಮಕ ಮಾಡಿಕೊಳ್ಳಲು ಅರ್ಹ, ಪ್ರತಿಭಾವಂತ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಆನ್​ಲೈನ್​ ಪರೀಕ್ಷೆ, ಗುಂಪು ಚರ್ಚೆ, ವೈಯಕ್ತಿಕ ಸಂದರ್ಶನ ಮೂಲಕ ನೇಮಕ ಮಾಡಿಕೊಳ್ಳಲಾಗುವುದು. ತಪು$್ಪ ಉತ್ತರಗಳಿಗೆ ಋಣಾತ್ಮಕ ಅಂಕ ಇರುತ್ತದೆ. ಬೆಂಗಳೂರು ಸೇರಿ ಇತರ 12 ನಗರಗಳಲ್ಲಿ ಪರೀಾ ಕೇಂದ್ರ ಇರಲಿದೆ. ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಅರ್ಜಿಸಲ್ಲಿಸಬಹುದಾಗಿದೆ. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 850 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ.

    ಹುದ್ದೆ ವಿವರ
    * ಸೀನಿಯರ್​ ಮ್ಯಾನೇಜರ್​ (ರಿಸ್ಕ್​ ಮ್ಯಾನೇಜ್​ಮೆಂಟ್​) – 60
    * ಮ್ಯಾನೇಜರ್​ (141)
    – ರಿಸ್ಕ್​ – 60
    – ಸಿವಿಲ್​ ಇಂಜಿನಿಯರ್​ – 7
    – ಆಕಿರ್ಟೆಕ್ಟ್​ – 7
    – ಎಲೆಕ್ಟ್ರಿಕಲ್​ ಇಂಜಿನಿಯರ್​ – 2
    – ಪ್ರಿಂಟಿಂಗ್​ ಟೆಕ್ನಾಲಜಿಸ್ಟ್​ – 1
    – ಫೋರೆಕ್ಸ್​ – 50
    – ಚಾರ್ರ್ಟಡ್​ ಅಕೌಂಟೆಂಟ್​ – 14
    * ಅಸಿಸ್ಟೆಂಟ್​ ಮ್ಯಾನೇಜರ್​ (ಟೆಕ್ನಿಕಲ್​ ಆಫೀಸರ್​) – 26
    * ಅಸಿಸ್ಟೆಂಟ್​ ಮ್ಯಾನೇಜರ್​ (ೋರೆಕ್ಸ್​) – 120

    ವಿದ್ಯಾರ್ಹತೆ: ಸಿವಿಲ್​, ಎಲೆಕ್ಟ್ರಿಕಲ್​, ಪ್ರಿಂಟಿಂಗ್​ ಟೆಕ್ನಾಲಜಿ, ಟೆಕ್ನಿಕಲ್​ ಇಂಜಿನಿಯರಿಂಗ್​ನಲ್ಲಿ ಬಿಇ/ ಬಿಟೆಕ್​ ಪದವಿ, ಆಕಿರ್ಟೆಕ್ಚರ್​ ಪದವಿ, ಗ್ಲೋಬಲ್​ ಅಸೋಸಿಯೇಷನ್​ ಆ್​ ರಿಸ್ಕ್​ನಲ್ಲಿ (ಜಿಎಆರ್​ಪಿ) ಫೈನಾನ್ಷಿಯಲ್​ ರಿಸ್ಕ್​ ಮ್ಯಾನೇಜ್​ಮೆಂಟ್​ನಲ್ಲಿ ಪ್ರಮಾಣಪತ್ರ/ ಪಿಆರ್​ಐಎಂಎ ಸಂಸ್ಥೆಯಲ್ಲಿ ಪ್ರೊಫೆಷನಲ್​ ರಿಸ್ಕ್​ ಮ್ಯಾನೇಜ್​ಮೆಂಟ್​ ಪ್ರಮಾಣಪತ್ರ/ ಸಿಎಫ್‌​ಎ/ ಸಿಎ/ ಸಿಎಂಎ/ ಸಿಎಸ್​/ ಎಂಬಿಎ/ ಗಣಿತ/ ಸ್ಟಾಟಿಸ್ಟಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕನಿಷ್ಠ 2 ವರ್ಷದ ವೃತ್ತಿ ಅನುಭವ ಹೊಂದಿರಬೇಕು.

    ವಯೋಮಿತಿ: ಮ್ಯಾನೇಜರ್​ ಹುದ್ದೆಗೆ ಕನಿಷ್ಠ 25, ಗರಿಷ್ಠ 35 ವರ್ಷ, ಅಸಿಸ್ಟೆಂಟ್​ ಮ್ಯಾನೇಜರ್​ಗೆ ಕನಿಷ್ಠ 20 ವರ್ಷ, ಗರಿಷ್ಠ 30 ವರ್ಷ, ಸೀನಿಯರ್​ ಮ್ಯಾನೇಜರ್​ಗೆ ಕನಿಷ್ಠ 30, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

    ವೇತನ: ಸೀನಿಯರ್​ ಮ್ಯಾನೇಜರ್​ಗೆ ಮಾಸಿಕ 63,840-78,230 ರೂ., ಮ್ಯಾನೇಜರ್​ ಹುದ್ದೆಗೆ ಮಾಸಿಕ 48,170-69,810 ರೂ., ಅಸಿಸ್ಟೆಂಟ್​ ಮ್ಯಾನೇಜರ್​ಗೆ ಮಾಸಿಕ 36,000-63,840 ರೂ. ವೇತನ ಜತೆ ವಿಶೇಷ ಭತ್ಯೆ, ಡಿಎ, ಇತರ ಭತ್ಯೆಗಳನ್ನು ನೀಡಲಾಗುವುದು.

    ಸೇವಾ ಬಾಂಡ್​: ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್​ನಲ್ಲಿ ಕನಿಷ್ಠ 3ವರ್ಷ ಸೇವೆ ಸಲ್ಲಿಸುವುದಾಗಿ 2,50,000 ರೂ. ಸೇವಾ ಬಾಂಡ್​ ಅನ್ನು ನೀಡಬೇಕು.

    ಅರ್ಜಿಸಲ್ಲಿಸಲು ಕೊನೇ ದಿನ: 3.9.2021
    ಅಧಿಸೂಚನೆಗೆ: https://bit.ly/3iQZEeI
    ಮಾಹಿತಿಗೆ: http://www.unionbankofindia.co.in

    ಡಿಪ್ಲೋಮಾ ಪದವೀಧರರಿಗೆ ಇಂಡಿಯನ್ ಆಯಿಲ್‍ನಲ್ಲಿ ನೇಮಕ: 480 ಹುದ್ದೆಗಳಿಗೆ ಅಹ್ವಾನ

    ಮೆಸ್ಕಾಂನಲ್ಲಿ ಡಿಪ್ಲೊಮಾ, ಪದವೀಧರರಿಂದ 200 ಅಪ್ರೆಂಟೀಸ್​ಗಳಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts