ವೇಶ್ಯೆ ಪಾತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್​ ಅಂಗಳಕ್ಕೆ ಆಲಿಯಾ: 'ವಂಡರ್​ ವುಮೆನ್​’ ಜತೆ ಟನೆ

aliabhat
Published on

ಮುಂಬೈ: ಗಂಗೂಬಾಯಿ ಕಥಿಯಾವಾಡಿ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್​ ನಟಿ ಆಲಿಯಾ ಭಟ್​ ಭಾರಿ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಅದ್ಭುತ ಅಭಿನಯದ ನಂತರ ಆಲಿಯಾಗೆ ಹಲವಾರು ಅವಕಾಶಗಳು ಅರಸಿ ಬರುತ್ತಿವೆ.

ಬಾಲಿವುಡ್ ನಟಿ ಆಲಿಯಾ ಭಟ್​ ಅಭಿನಯಕ್ಕೆ ಮನಸೋತು ವಿದೇಶದ ಸಿನಿಮಾ ಪ್ರೇಕ್ಷಕರು ಕೂಡ ಗಂಗೂಬಾಯಿ ಚಿತ್ರ ನೋಡಿದ ನಂತರ ಚಿತ್ರಮಂದಿರದಲ್ಲೇ ಸರಿ ಸುಮಾರು ಎಂಟು ನಿಮಿಷಗಳ ಕಾಲ ನಿರಂತರವಾಗಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಯಾಗಿದೆ. ಜರ್ಮನ್​ ದೇಶದ ಬೆರ್ಲಿನ್​ ನಗರದ ಚಿತ್ರಮಂದಿರದಲ್ಲಿ ಯಾವ ಸ್ಟಾರ್​ ನಟನಿಗೂ ಸಿಗದ ಮೆಚ್ಚುಗೆ ಆಲಿಯಾ ಭಟ್​ಗೆ ವ್ಯಕ್ತವಾಗಿದೆ.

ಚಿಕ್ಕವಯಸ್ಸಿನಲ್ಲಿಯೇ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದು ಬೀಗುತ್ತಿರುವ ಆಲಿಯಾ ಇದೀಗ ಹಾಲಿವುಡ್​ಗೆ ಹಾರುವ ತಯಾರಿ ನಡೆಸಿದ್ದಾರೆ. . ‘ವಂಡರ್​ ವುಮೆನ್​’ ಸಿನಿಮಾಗಳಲ್ಲಿ ನಟಿಸಿರುವ ಗಾಲ್​ ಗಡೋಟ್​ ಅವರೊಂದಿಗೆ ಆಲಿಯಾ ನಟಿಸಿಲಿದ್ದಾರೆ. ಓಟಿಟಿಯ ದೈತ್ಯ ಸಂಸ್ಥೆ ನೆಟ್​​ಫ್ಲಿಕ್ಸ್​​ ನಿರ್ಮಾಣ ಮಾಡುತ್ತಿದೆ.

ನೆಟ್‌ಫ್ಲಿಕ್ಸ್‌ನ ‘ಹಾರ್ಟ್ ಆಫ್ ಸ್ಟೋನ್‌’ ತಂಡ ಸೇರಲಿದ್ದಾರೆ. ಜೋಯಾ ಅಖ್ತರ್ ನಿರ್ದೇಶಿಸಿದ ಅವರ 2019 ರ ಚಲನಚಿತ್ರ ‘ಗಲ್ಲಿ ಬಾಯ್’ ಆ ವರ್ಷದ ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತ್ತು.ಈ ಸಿನಿಮಾ ವಿಶ್ವದಾದ್ಯಂತ $25M (ಸುಮಾರು 193 ಸಾವಿರ ಕೋಟಿ ರೂ) ಗಳಿಸಿದೆ. ಈ ಚಲನಚಿತ್ರವು ಈಗ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿದೆ. ಇದೀಗ ಆಲಿಯಾ ಹಾಲಿವುಡ್​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಅಂದಹಾಗೆ 'ಗಂಗೂಬಾಯಿ ಕಥಿಯಾವಾಡಿ ಬಿಡುಗಡೆಯಾದಾಗಿನಿಂದ ಬಾಕ್ಸ್ ಆಫೀಸ್​ನಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಶ್ವಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net