More

    ನನ್ನ ಕೆನ್ನೆಗೆ ಹೊಡೆಯಲು ಆಲಿಯಾ 20 ಸಲ ಟ್ರೈ ಮಾಡಬೇಕಾಯ್ತು! ಅನುಭವ ಬಿಚ್ಚಿಟ್ಟ ನಟ ಶಂತನು

    ಮುಂಬೈ: ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಚಿತ್ರದ ರಿಲೀಸ್‌ಗೂ ಮುನ್ನವೇ ವಿವಾದಗಳಿಂದ ತುಂಬಿಹೋಗಿದ್ದು, ಕೊನೆಗೂ ಚಿತ್ರ ಬಿಡುಗಡೆಗೊಂಡಿದೆ. ಮುಂಬೈನ ರೆಡ್‌ಲೈಟ್‌ ಏರಿಯಾ ಎಂದೇ ಬಿಂಬಿತವಾಗಿರುವ ಕಾಮಾಟಿಪುರ, ಕಾಠಿಯಾವಾಡಿ ನಿವಾಸಿಗಳು ಈ ಚಿತ್ರದ ವಿರುದ್ಧ ಭಾರಿ ಗರಂ ಆಗಿದ್ದರೂ, ಭರ್ಜರಿ ಯಶಸ್ಸಿನತ್ತ ಚಿತ್ರ ಸಾಗಿದೆ.

    ಇದೀಗ ಈ ಚಿತ್ರದ ಕೆಲವೊಂದು ಅನುಭವಗಳನ್ನು ಇದರ ನಾಯಕ ಶಂತನು ಮಹೇಶ್ವರಿ ಹಂಚಿಕೊಂಡಿದ್ದಾರೆ. ನೃತ್ಯಪಟುಗೂ ಆಗಿರುವ ಶಂತನು ಈ ಚಿತ್ರದಲ್ಲಿ ನೃತ್ಯ ಮಾಡದಿದ್ದರೂ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದಿದ್ದಾರೆ. ನಟಿ ಆಲಿಯಾ ಭಟ್‌ ಜತೆಗಿನ ತಮ್ಮ ‘ಗಂಗೂಬಾಯಿ ಕಾಠಿಯಾವಾಡಿ’ ಪಯಣವನ್ನು ಸಂದರ್ಶನವೊಂದರಲ್ಲಿ ಅವರು ಬಹಿರಂಗಪಡಿಸಿದ್ದಾರೆ.

    ಈ ಚಿತ್ರ ನನಗೆ ಬಹಳ ಖುಷಿ ಕೊಟ್ಟಿದೆ. ಜನ ಇದನ್ನು ಅತ್ಯಂತ ಖುಷಿಯಿಂದ ಸ್ವಾಗತಿಸಿದ್ದಾರೆ ಎಂದಿರುವ ಶಂತನು ಚಿತ್ರದಲ್ಲಿರುವ ‘ಮೇರಿ ಜಾನ್’ ಹಾಡಿನ ಸಮಯದ ಶೂಟಿಂಗ್‌ ಕುರಿತು ನೆನಪಿಸಿಕೊಂಡಿದ್ದಾರೆ, ’ಈ ಹಾಡಿನ ಸಂದರ್ಭದಲ್ಲಿ ಆಲಿಯಾ ಭಟ್‌ ನನ್ನ ಕೆನ್ನೆಗೆ ಜೋರಾಗಿ ಹೊಡೆಯಬೇಕಿತ್ತು. ಆದರೆ ನನ್ನನ್ನು ನೋಡಿ ಅವರಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ನನಗೆ ಹೊಡೆಯಲು ತುಂಬಾ ಕಷ್ಟಪಟ್ಟುಬಿಟ್ಟರು. ಬಲವಾಗಿ ಕಪಾಳಮೋಕ್ಷ ಮಾಡಲು ಅವರಿಗೆ ಸಾಧ್ಯವಾಗಲೇ ಇಲ್ಲ. 19 ಟೇಕ್‌ ಆಗಿ 20ನೇ ಟೇಕ್‌ ಬಂದರೂ ಅವರು ನನಗೆ ಬಲವಾಗಿ ಹೊಡೆಯಲಿಲ್ಲ. ಕೊನೆಗೆ ನಾನೇ ಅವರನ್ನು ಸಂತೈಸಿ, ‘ನೀವು ಏನೂ ತಲೆ ಕೆಡಿಸಿಕೊಳ್ಳಬೇಡಿ, ಜೋರಾಗಿ ಹೊಡೆಯಿರಿ, ಪರವಾಗಿಲ್ಲ’ ಎಂದೆ. ನಂತರ ಅವರು ಕೂಲ್‌ ಆಗಿ 20ನೇ ಟೇಕ್‌ಗೆ ಸರಿಯಾಗಿ ಹೊಡೆದರು’ ಎಂದಿದ್ದಾರೆ ಶಂತನು.

    ಈ ಚಿತ್ರದಲ್ಲಿ ಜನರು ನಮ್ಮಿಬ್ಬರ ಕೆಮಿಸ್ಟ್ರಿ ಒಪ್ಪಿಕೊಂಡಿದ್ದಾರೆ. ತುಂಬಾ ಉತ್ತಮ ಪ್ರತಿಕ್ರಿಯೆ ಬಂದಿದೆ. ಜನ ಈಗ ನನ್ನನ್ನು ಮಾತನಾಡಿಸುವ ರೀತಿಯೇ ಬದಲಾಗಿದ್ದು, ಹೀಗೆ ಎಂದು ನಾನು ಅಂದುಕೊಂಡಿರಲೇಇಲ್ಲ. ನನ್ನ ಪಾಲಕರಿಗೂ ತುಂಬಾ ಖುಷಿಯಾಗಿದೆ’ ಎಂದು ಹೇಳಿದರು.

    ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದ ಕಥೆಯನ್ನು ಹುಸೇನ್ ಜೈದಿ ಅವರ ಪುಸ್ತಕ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ನಿಂದ ತೆಗೆದುಕೊಳ್ಳಲಾಗಿದೆ.

    ಆಂಧ್ರದಲ್ಲಿ ಕ್ಷಾಮ ಬಂದಾಗ ಹುಟ್ಟಿಕೊಂಡದ್ದು ಮುಂಬೈನ ಕಾಮಾಟಿಪುರ! 200 ವರ್ಷಗಳ ಇತಿಹಾಸ ಇದಕ್ಕಿದೆ…

    ‘ಎಲ್ಲವೂ ಮಂಜುಗಡ್ಡೆಯಂತೆ ಕರಗುತ್ತೆ, ಒಬ್ಬ ಮಾತ್ರ ಗಟ್ಟಿಯಾಗಿದ್ದು, ವಿಶ್ವವನ್ನೇ ಆಳ್ತಾನೆ!’ ನಿಜವಾಗ್ತಿದ್ಯಾ ವಾಂಗಾ ಭವಿಷ್ಯ?

    ಕೊನೆಯ ಬಾರಿ ತಬ್ಬಿಕೊಳ್ಳುವೆ, ಮತ್ತೆ ತೊಂದ್ರೆ ಕೊಡಲ್ಲ ಎಂದ ಪತಿ: ಇಬ್ಬರ ದೇಹವೂ ಛಿದ್ರ ಛಿದ್ರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts