More

    ಪ್ರತಿ ಪ್ರವಾಸದಲ್ಲೂ ಹೊಸ ಅನುಭವ ಪ್ರಾಪ್ತಿ: ಯಡತೊರೆ ಶ್ರೀ

    ಸಾಗರ: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ಅತ್ಯಂತ ಶ್ರೇಷ್ಠ ಸಂದರ್ಭ. ನಾವು ಅಯೋಧ್ಯೆ ರಾಮನಮೂರ್ತಿ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಳ್ಳುವ ಜತೆಗೆ ಅನೇಕ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಶಂಕರಾಚಾರ್ಯರ ತತ್ವಾದರ್ಶವನ್ನು ಭಕ್ತರ ಮನಸ್ಸಿನಲ್ಲಿ ಬಿತ್ತುವ ಕೆಲಸ ಮಾಡಿದ್ದೇವೆ ಎಂದು ಯಡತೊರೆ ಮಠದ ಶ್ರೀ ಶಂಕರ ಭಾರತಿ ಸ್ವಾಮೀಜಿ ಹೇಳಿದರು.
    ನಗರದÀ ಭಾರತೀತೀರ್ಥ ಸಭಾಭವನದಲ್ಲಿ ಶನಿವಾರ ಸಂಜೆ ಅಯೋಧ್ಯೆ, ನೇಪಾಳ ಇತರ ಧಾರ್ಮಿಕ ಸ್ಥಳಗಳ ಪ್ರವಾಸ ಮುಗಿಸಿ, ಸಾಗರದಲ್ಲಿ ವಿಜಯಯಾತ್ರೆ ಸಮಾರೋಪದ ಹಿನ್ನೆಲೆಯಲ್ಲಿ ಶೃಂಗೇರಿ ಶಂಕರಮಠದಿAದ ನೀಡಲಾದ ಗುರುವಂದನೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.
    ಯಾತ್ರೆ ಸಂದರ್ಭದಲ್ಲಿ ಒಂದೊAದು ಕಡೆ ಒಂದೊAದು ಅನುಭವವಾಗಿದೆ. ಕಾಶ್ಮೀರ ಪ್ರವಾಸದಲ್ಲಿದ್ದಾಗ ನಮಗೆ ಅಂಗರಕ್ಷಕನಾಗಿ ಖಾನ್ ಶಬ್ಬಿರ್ ಎಂಬ ಒಬ್ಬ ಮುಸ್ಲಿಂ ವ್ಯಕ್ತಿಯನ್ನು ನೇಮಕ ಮಾಡಿದ್ದು ಸಹಜವಾಗಿ ನನ್ನ ಅನುಮಾನವನ್ನು ಆತನಲ್ಲಿ ಪ್ರಶ್ನೆ ಮಾಡಿದ್ದೇನೆ. ಆಗ ಆತ ನಾನು ಅಂಗರಕ್ಷಕನಾಗಿ ಬಂದಿಲ್ಲ. ಬದಲಾಗಿ ಯಾತ್ರಾರ್ಥಿಯಾಗಿ ನಿಮ್ಮ ಜತೆ ಬಂದಿದ್ದೇನೆ ಎಂದು ವಿಶಾಲ ಮನೋಭಾವ ತೋರಿಸಿದ್ದರು. ಇಂತಹ ವಿಶಾಲ ವ್ಯಕ್ತಿತ್ವದ ವ್ಯಕ್ತಿಗಳು ನನ್ನ ಪ್ರವಾಸದಲ್ಲಿ ಸಾಕಷ್ಟು ಜನರು ಸಿಕ್ಕಿದ್ದಾರೆ ಎಂದು ತಮ್ಮ ಅನುಭವವನ್ನು ಹಂಚಿಕೊAಡರು.
    ಸಹಜವಾಗಿ ನನ್ನ ವಿಜಯಯಾತ್ರೆ ಗಾಣಗಾಪುರದಲ್ಲಿ ಸಮಾಪ್ತಿಗೊಳ್ಳಬೇಕಿತ್ತು. ಆದರೆ ಬೇರೆ ಕಾರಣಗಳಿಂದ ಸಾಗರದಲ್ಲಿ ಸಮಾರೋಪಗೊಳ್ಳುತ್ತಿರುವುದು ಸಂತೋಷ ತಂದಿದೆ. ಸಾಗರ ಶಂಕರಾಚಾರ್ಯರ ಸೌಂದರ್ಯಲಹರಿ ಪಠಣ ಕಾರ್ಯಕ್ರಮ ಯಶಸ್ಸಿಗೆ ಹೆಚ್ಚಿನ ಸಹಕಾರ ನೀಡಿದ ಸ್ಥಳವಾಗಿದೆ. ಶಂಕರಮಠದ ಅಶ್ವಿನಿ ಕುಮಾರ್ ಇತರರು ಧಾರ್ಮಿಕ ಚಟುವಟಿಕೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ ಎಂದರು.
    ಶಂಕರಮಠದ ಅಶ್ವಿನಿಕುಮಾರ್, ಪ್ರಮುಖರಾದ ಮಾ.ಸ.ನಂಜುAಡಸ್ವಾಮಿ, ಎಸ್.ಎಚ್.ಸೊರಟೂರು, ಬದರಿನಾಥ್, ಎಚ್.ಕೆ.ಪರಮಾತ್ಮ, ದಿನೇಶಕುಮಾರ್ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts