

ಮುಂಬೈ: ಜಿದ್ದಿಗೆ ಬಿದ್ದವರಂತೆ ದಿನದಿಂದ ದಿನಕ್ಕೆ ಕಡಿಮೆ ಬಟ್ಟೆ ತೊಟ್ಟು ಪೋಸ್ ಕೊಡುತ್ತಾ ಅದನ್ನು ಶೇರ್ ಮಾಡಿಕೊಳ್ಳುತ್ತಿರುವ ನಟಿ ಉರ್ಫಿ ಜಾವೇದ್ಗೆ ನಟ ರಣವೀರ್ ಸಿಂಗ್ ಹೊಸ ಅವತಾರ ನೋಡಿ ಫುಲ್ ಖುಷ್ ಆಗಿದೆ.
ಮ್ಯಾಗಜಿನ್ ಒಂದರ ಮುಖಪುಟಕ್ಕಾಗಿ ಸಂಪೂರ್ಣ ನಗ್ನವಾಗಿ ಕ್ಯಾಮೆರಾ ಕಣ್ಣಿಗೆ ರಣ್ವೀರ್ ಪೋಸ್ ನೀಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಪುರುಷರಂತೂ ಈ ಪೋಸ್ಗೆ ಕಿಡಿ ಕಿಡಿಯಾಗಿದ್ದು, ಪುರುಷರ ಮರ್ಯಾದೆ ತೆಗೆದಿರುವುದಾಗಿ ಹೇಳುತ್ತಿದ್ದಾರೆ.
ಆದರೆ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ನ ಈ ಅವತಾರ ನೋಡಿ ಉರ್ಫಿ ಜಾವೇದ್ ಬಹಳ ಖುಷಿಯಾಗಿದ್ದಾರಂತೆ. ಇದನ್ನು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಎಂದಿನಂತೆ ಕಡಿಮೆ ಬಟ್ಟೆ ಅದರಲ್ಲಿಯೂ ವಿಚಿತ್ರ ವೇಷ ತೊಟ್ಟು ಮಾಧ್ಯಮಗಳ ಎದುರು ಪೋಸ್ ಕೊಟ್ಟಿರುವ ಉರ್ಫಿ, ನನಗೆ ನಾಲ್ವರು ಸಹೋದರಿಯರು ಇದ್ದಾರೆ. ಎಲ್ಲರೂ ಹಾಟ್ ಇದ್ದಾರೆ. ಎಲ್ಲರನ್ನೂ ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ. ಕೊನೆಗೆ ನಟ ರಣವೀರ್ ಸಿಂಗ್ ಹೊಸ ಅವತಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಣವೀರ್ ಸಿಂಗ್ರನ್ನು ತುಂಬಾ ಪ್ರೀತಿಸುತ್ತೇನೆ. ಒಂದು ವೇಳೆ ಅವರಿಗೆ ಏನಾದರೂ ಎರಡನೆಯವಳು ಬೇಕು ಎನ್ನಿಸಿದರೆ ನಾನು ಇದ್ದೇನೆ. ನಾನು ಅವರಿಗಾಗಿ ರೆಡಿ ಇದ್ದೇನೆ ಎಂದಿದ್ದಾರೆ. ದೀಪಿಕಾ ಬಿಟ್ಟು ರಣವೀರ್ಗೆ ಬೇರೆ ಯಾರೂ ಬೇಡ ಎನ್ನುವುದು ಗೊತ್ತಿದೆ. ಆದರೂ ಒಮ್ಮೆ ಏನಾದರೂ ಅವರಿಗೆ ಅನ್ನಿಸಿದರೆ ನಾನು ಎರಡನೆಯವಳಾಗಲು ಸಿದ್ಧ ಎಂದಿದ್ದಾರೆ ಉರ್ಫಿ.
ಅವರು ಹೇಳಿರುವ ಮಾತು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ: