

ಮುಂಬೈ: ಕೆಲವೊಬ್ಬರಿಗೆ ಸದಾ ಸುದ್ದಿಯಲ್ಲಿ ಇರಬೇಕು ಎಂಬ ಹುಚ್ಚು. ಅದು ಟ್ರೋಲ್ ಆಗಿಯಾದರೂ ಸರಿ, ಒಟ್ಟಿನಲ್ಲಿ ಸುದ್ದಿಯಲ್ಲಿ ಇರಬೇಕು. ಇಂಥ ಮನಸ್ಥಿತಿ ಇರುವವರಲ್ಲಿ ಹೆಚ್ಚಿನವರು ಸಿನಿ ತಾರೆಯರು, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಇಲ್ಲವೇ ಸಮಾಜಸೇವೆಯ ಹೆಸರಿನಲ್ಲಿ ಕೆಲಸ ಕಾರ್ಯ ಮಾಡುತ್ತಾ ಪ್ರಚಾರದಲ್ಲಿ ಇರಬೇಕು ಎಂದು ಬಯಸುವ ಕೆಲ ವ್ಯಕ್ತಿಗಳು.
ಸಿನಿಮಾದವರ ವಿಷಯಕ್ಕೆ ಬರುವುದಾದರೆ, ಅರ್ಧಂಬರ್ಧ ಡ್ರೆಸ್ಗಳಿಂದಲೇ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿ ಮಾಡುತ್ತಿರುವ ನಟಿಯೆಂದರೆ ಉರ್ಫಿ ಜಾವೇದ್. ಈಕೆಯ ಹೆಸರು ಹೇಳಿದರೆ ಕಣ್ಮುಂದೆ ಬರುವುದು ಅರೆಬರೆ ಡ್ರೆಸ್ಗಳೇ. ಇದನ್ನು ಆಕೆ ಕೂಡ ತುಂಬಾ ಖುಷಿಯಿಂದಲೇ ಹೇಳಿಕೊಳ್ಳುತ್ತಾಳೆ. ತಾನು ಡ್ರೆಸ್ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಈಚೆಗೆ ಸಂದರ್ಶನವೊಂದರಲ್ಲಿ ಈಕೆ ಹೇಳಿಕೊಂಡಿದ್ದಳು. ಇದಕ್ಕಾಗಿಯೇ ಈಕೆಯನ್ನು ಫ್ಯಾಷನ್ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.
ಇದೀಗ ಉರ್ಫಿಯ ಇಂಥದ್ದೇ ಒಂದು ಬಟ್ಟೆ ಮತ್ತೆ ಮುನ್ನೆಲೆಗೆ ಬಂದಿದೆ. ಸೊಳ್ಳೆಬತ್ತಿ ಎನ್ನುತ್ತೀರೋ, ಚಕ್ಕುಲಿ ಎನ್ನುತ್ತೀರೋ ಗೊತ್ತಿಲ್ಲ. ಒಟ್ಟಿನಲ್ಲಿ ಅಭಿಮಾನಿಗಳ ಅಪೇಕ್ಷೆ ಮೇರೆಗೆ ತಾವು ಈ ರೀತಿಯ ಡ್ರೆಸ್ ಹಾಕಿಕೊಂಡು ಬಂದಿರುವುದಾಗಿ ಉರ್ಫಿ ಹೇಳಿಕೊಂಡಿದ್ದು, ಅದನ್ನು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಎರಡು ನಿಕ್ಕರ್‌ಗಳಲ್ಲಿ ಕಾಣಿಸಿಕೊಂಡಿದ್ದ ಉರ್ಫಿಗೆ ಥಹರೇವಾರಿ ಕಮೆಂಟ್ಗಳು ಬಂದಿದ್ದವು. ಅದನ್ನು ನೋಡಿ ಗರಂ ಆಗಿದ್ದ ನಟಿ, ನಾನು ನಡೆಯುತ್ತೇನೆ, ನಾನು ಜಿಗಿಯುತ್ತೇನೆ, ನಾನು ಯಾರೊಂದಿಗಾದರೂ ಎಲ್ಲಿಯಾದರೂ ಹೋಗುತ್ತೇನೆ, ಅಥವಾ ನಾನು ಒಬ್ಬಂಟಿಯಾಗಿರುತ್ತೇನೆ.. ನಾನು ಆಡುತ್ತೇನೆ, ನಾನು ಹಾಡುತ್ತೇನೆ, ನಾನು ಪ್ರೀತಿಸುತ್ತೇನೆ, ನಿಮಗೆ ಏನು ಕಷ್ಟ ಎಂದು ಬರೆದುಕೊಂಡಿದ್ದರು.
ಆದರೂ ಆಕೆಯ ಅಭಿಮಾನಿಗಳು ಈ ಡ್ರೆಸ್ಗೆ ಮತ್ತಿಷ್ಟು ಕಮೆಂಟ್ ಮಾಡಿದ್ದಾರೆ. ಈ ಚಕ್ಕುಲಿ ಕಳಚಿದ್ರೆ ನಿನ್ನ ಕಥೆ ಗೋವಿಂದಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚಕ್ಕುಲಿಯ ಬೆಲೆ ಎಷ್ಟು ಎಂದು ಕಿಂಡಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸಾಕಮ್ಮ , ನಿನ್ನ ಅವತಾರ. ನಮ್ಮ ಕಣ್ಣುಗಳನ್ನು ನಾವು ದಾನ ಮಾಡಲು ರೆಡಿಯಾಗಿದ್ದೆವೆ ಎಂದು ಕಮೆಂಟ್ ಮಾಡಿದ್ದಾರೆ.
ಇಲ್ಲಿದೆ ನೋಡಿ ಉರ್ಫಿಯ ಹೊಸ ವೇಷ: