More

    ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

    ಮುಂಬೈ: ನಿಮ್ಮ ಎಕ್ಸ್​ಗಳ ಜತೆ ಸೆಕ್ಸ್​ ಮಾಡುವಿರಾ? ಹೀಗೆಂದು ಬಾಲಿವುಡ್​ ತಾರೆಯರಾದ ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್​ಗೆ ಪ್ರಶ್ನೆ ಕೇಳಿದವರು ನಟ, ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್​!

    ಪ್ರತಿವಾರ ಕರಣ್​ “ಕಾಫಿ ವಿತ್ ಕರಣ್” ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಈ ಸಲ ಅದರಲ್ಲಿ ಕಾಣಿಸಿಕೊಂಡವರು ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್. ಓಪನ್​ ಆಗಿಯೇ ಕೆಲವೊಂದು ಪ್ರಶ್ನೆಗಳನ್ನು ಹಿಂದೆ ಮುಂದೆ ಈ ಕಾರ್ಯಕ್ರಮದಲ್ಲಿ ಕೇಳುತ್ತಿದ್ದಾರೆ ಕರಣ್​. ಈ ಬಾರಿ ಈ ಇಬ್ಬರು ಹಾಟ್​ ತಾರೆಯರಿಗೆ ಹೀಗೆ ಪ್ರಶ್ನೆ ಕೇಳಿಬಿಟ್ಟರು!

    ಏಕಾಏಕಿ ಇಂಥದ್ದೊಂದು ಪ್ರಶ್ನೆ ಕೇಳಿಬಂದದ್ದು ಇಬ್ಬರೂ ನಟಿಯರನ್ನು ಕಕ್ಕಾಬಿಕ್ಕಿಯಾಗಿ ಮಾಡಿತು. ಸಾರಾ ಅಲಿಖಾನ್ ಮತ್ತು ಜಾಹ್ನವಿ ಕಪೂರ್ ಅವರ ಎಕ್ಸ್ ಬಾಯ್ ಫ್ರೆಂಡ್ಸ್​ಗಳ ಬಗ್ಗೆ ಮಾತನಾಡುತ್ತಾ ಕರಣ್, ಎಕ್ಸ್ ಬಾಯ್ ಫ್ರೆಂಡ್ ಜೊತೆ ಸೆಕ್ಸ್ ಮಾಡಲು ಆಸಕ್ತಿ ಹೊಂದಿದ್ದೀರಾ ಎಂದು ಕೇಳಿದರು.

    ಈ ಪ್ರಶ್ನೆಗೆ ಇಬ್ಬರೂ ಕೆಲ ಕ್ಷಣ ಮೌನಕ್ಕೆ ಜಾರಿಬಿಟ್ಟರು. ಸ್ವಲ್ಪ ಯೋಚಿಸಿದ ನಂತರ ಸಾರಾ ಅಲಿಖಾನ್​ ‘ನೋ ನೋ’ ಎಂದರೆ, ಜಾಹ್ನವಿ ಕಪೂರ್​ ಮಾತ್ರ ಏನೂ ಮಾತನಾಡದೇ ಸುಮ್ಮನಾಗಿ ಬಿಡುತ್ತಾರೆ. ಆದರೂ, ಕರಣ್ ಕೆದಕಿ ಕೆದಕಿ ಮತ್ತೆ ಇದೇ ಪ್ರಶ್ನೆ ಕೇಳಿದರು. ಆದರೂ ಜಾಹ್ನವಿಯದ್ದು ಮೌನವೇ ಉತ್ತರವಾಗಿತ್ತು! ವೀಕ್ಷಕರು ಈ ಮೌನಕ್ಕೆ ತಮ್ಮದೇ ಆದ ರೀತಿಯಲ್ಲಿ ಊಹಿಸಿಕೊಂಡದ್ದಂತೂ ಸುಳ್ಳಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts