VIDEO: ಫಸ್ಟ್​ ನೈಟ್​ ಅನ್ನೋದೇ ಇಲ್ಲ- ನಟಿ ಆಲಿಯಾ ಭಟ್​ ಹೇಳಿಕೆಗೆ ಸುಸ್ತಾದ ಪತಿ ರಣಬೀರ್​ ಕಪೂರ್​

alia
Published on

ಮುಂಬೈ: ಸಿನಿಪ್ರಿಯರ ನೆಚ್ಚಿನ ಕಾಫಿ ವಿತ್ ಕರಣ್ ಷೋ ಪುನಃ ಆರಂಭವಾಗುತ್ತಿದೆ. ಬಾಲಿವುಡ್​ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಷೋನ ಆರು ಸೀಸನ್​ ಇದಾಗಲೇ ಮುಗಿದಿದ್ದು, ಇದು 7ನೇ ಸೀಸನ್​. ಆದರೆ ಈ ಬಾರಿಯ ವಿಶೇಷತೆ ಎಂದರೆ ಪ್ರತಿಸಲವೂ ಈ ಷೋ ಟಿ.ವಿಯಲ್ಲಿ ಬರುತ್ತಿತ್ತು. ಆದರೆ ಇದೀಗ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಡಿಸ್ನಿ ಫ್ಲಸ್ ಹಾಸ್ಟ್​ಸ್ಟಾರ್​ನಲ್ಲಿ 7ನೇ ಸೀಸನ್​ ನಾಳೆ (ಜುಲೈ 7ರಿಂದ) ಪ್ರಸಾರವಾಗಲಿದೆ.

ಏಳನೆ ಸೀಸನ್​ನ ಮೊದಲ ಎಪಿಸೋಡ್​ನಲ್ಲಿ ಈಚೆಗಷ್ಟೇ ಮದುವೆಯಾಗಿರುವ ಹಾಟ್​ ಬಾಲಿವುಡ್​ ಜೋಡಿಗಳಾದ ರಣಬೀರ್​ ಕಪೂರ್​ ಮತ್ತು ನಟಿ ಆಲಿಯಾ ಭಟ್​ ಅತಿಥಿಗಳು. ಇವರ ಸಂದರ್ಶನ ಇದಾಗಲೇ ಮಾಡಲಾಗಿದ್ದು, ಕರಣ್ ಜೋಹರ್​ ವಿಶೇಷ ಪ್ರೋಮೋವನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಪ್ರೋಮೋದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕರಣ್,​ ರಣಬೀರ್​ ಹಾಗೂ ಆಲಿಯಾ ದಂಪತಿಗೆ ಕೇಳಿದ್ದಾರೆ. ಅದರಲ್ಲಿ ಒಂದು ಫಸ್ಟ್​ನೈಟ್​ಗೆ (ಸುಹಾಗ್​ರಾತ್​) ಸಂಬಂಧಿಸಿದ್ದು, ಫಟಾಫಟ್​ ಎಂದು ಉತ್ತರಿಸಿದ ಆಲಿಯಾ ಹೇಳಿರುವ ಹೇಳಿಕೆ ಇದೀಗ ಭಾರಿ ವೈರಲ್​ ಆಗಿದೆ.

ಈ ಕಾರ್ಯಕ್ರಮದಲ್ಲಿ ಅನೇಕ ರೌಂಡ್ಸ್​ಗಳಿವೆ. ಅದರಲ್ಲಿ ಒಂದು ರ‍್ಯಾಪಿಡ್​ ಫೈಯರ್ ರೌಂಡ್​. ಕರಣ್​ ಕೇಳುವ ಪ್ರಶ್ನೆಗೆ ಇಬ್ಬರೂ ಫಟಾಫಟ್​ ಎಂದು ಉತ್ತರಿಸಬೇಕು. ಈ ರೌಂಡ್ಸ್​ನಲ್ಲಿ ಕರಣ್​ ಅಲಿಯಾಗೆ ‘ಮದುವೆಯ ನಂತರ ನಿಮಗೆ ಅರ್ಥವಾದ ಒಂದು ವಿಚಾರ ಯಾವುದು ಎಂದು ತಿಳಿಸಿ‘ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಲಿಯಾ, ‘ಮೊದಲ ರಾತ್ರಿ ಎನ್ನುವುದೇ ಇರುವುದಿಲ್ಲ. ನೀವು ಮದುವೆಯ ದಿನ ಸುಸ್ತಾಗಿರುತ್ತೀರಿ‘ ಎಂದು ಹೇಳಿದ್ದಾರೆ. ಇದಕ್ಕೆ ಕರಣ್ ಮತ್ತು ರಣಬೀರ್ ​ ಬಿದ್ದು ಬಿದ್ದು ನಕ್ಕಿದ್ದಾರೆ. ಇದರ ಪ್ರೋಮೋ ಇದೀಗ ಬಿಡುಗಡೆಯಾಗಿದೆ.

ಸದ್ಯ ಈ ಜೋಡಿ ಇದೇ ಕರಣ್​ ಜೋಹರ್​ ನಿರ್ದೇಶಿಸುತ್ತಿರುವ ‘ರಾಕಿ ಔರ್​ ರಾಣಿ ಪ್ರೇಮ್​ ಕಹಾನಿ‘ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net