More

    ಪಾರ್ಟಿ ಮೂಡ್‌ನಲ್ಲಿ ನಟಿ ಸೋನಿಯಾಗೆ ಬೆಳ್ಳಂಬೆಳಗ್ಗೆ ಬಿಗ್‌ ಶಾಕ್‌! ಮನೆ ಮೇಲೆ ದಾಳಿ- ಡ್ರಗ್ಸ್‌ ವಶಕ್ಕೆ

    ಬೆಂಗಳೂರು: ಸಿನಿರಂಗವನ್ನು ಬೆಂಬಡದೇ ಕಾಡುತ್ತಿರುವ ಡ್ರಗ್ಸ್‌ ಪ್ರಕರಣದಲ್ಲಿ ಅಗೆದಷ್ಟೂ, ಬಗೆದಷ್ಟೂ ಹುಳುಕುಗಳು ಪತ್ತೆಯಾಗುತ್ತಲೇ ಇವೆ. ಇದಾಗಲೇ ಹಲವಾರು ಸಿನಿ ತಾರೆಯರು ಈ ಜಾಲಕ್ಕೆ ಸಿಲುಕಿದ್ದು, ಪೊಲೀಸರ ಅತಿಥಿಯಾಗಿರುವ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ ನಟಿ, ಮಾಡೆಲ್ ಸೋನಿಯಾ ಅಗರ್ವಾಲ್ ಮನೆಯ ಮೇಲೆ ಬೆಂಗಳೂರು ಪೂರ್ವ ವಲಯದ ಪೊಲೀಸರು ದಾಳಿ ನಡೆಸಿದ್ದಾರೆ. 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.

    ಡಿಜೆ ವಚನ್​ ಚಿನ್ನಪ್ಪ, ಉದ್ಯಮಿ ಭರತ್​ ಮುಂತಾದವರ ಮನೆಯ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಇದೇ ವೇಳೆ ದಾಳಿ ಮಾಡಿದ್ದಾರೆ.

    ಸೋನಿಯಾ ನಿನ್ನೆ (ಭಾನುವಾರ) ರಾತ್ರಿ ಪಾರ್ಟಿಗೆ ಹೋಗಿದ್ದರು. ಅದೇ ಮೂಡ್‌ನಲ್ಲಿದ್ದ ಆಕೆ ಮನೆಗೆ ಬಂದಿರಲಿಲ್ಲ. ಪೊಲೀಸರು ಮೊದಲು ಕಾಲ‌ ಮಾಡಿದಾಗ ಸೋನಿಯಾ ಸ್ವೀಕರಿಸದ ಕಾರಣ, ತಂದೆಯಿಂದ ಕರೆ ಮಾಡಲಾಗಿದ್ದು, ನಂತರ ಅವರಿಂದಲೇ ಮನೆಯ ಕೀ ತೆಗೆಸಿದ್ದಾರೆ. ಸಂಪೂರ್ಣ ಶೋಧ ಮಾಡಿದ ಬಳಿಕ ಗಾಂಜಾ ಪತ್ತೆಯಾಗಿದೆ.

    ಡ್ರಗ್ ಪೆಡ್ಲರ್ ಥಾಮಸ್ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ರಾಜಾಜಿನಗರ, ಪದ್ಮನಾಭನಗರ, ಬೆನ್ಸೆನ್ ಟೌನ್ ಮುಂತಾದ ಕಡೆ ಇರುವ ಸೆಲೆಬ್ರಿಟಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಾದಕ ವಸ್ತುಗಳು ಪತ್ತೆ ಆಗಿದ್ದೇ ಹೌದಾದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು.

    ಆರ್ಗ್ಯಾನಿಕ್ ಕಾಸ್ಮೆಟಿಕ್ ಕಂಪನಿ ನಡೆಸುತ್ತಿದ್ದ ಸೋನಿಯಾ ಜತೆ ಡ್ರಗ್ಸ್‌ ದಂಧೆಯಲ್ಲಿ ಹಲವಾರು ಸೆಲೆಬ್ರಿಟಿಗಳ ಲಿಂಕ್ ಇರುವುದು ಪೊಲೀಸರಿಗೆ ತಿಳಿದುಬಂದಿದ್ದು ತನಿಖೆ ಜೋರಾಗಿದೆ. ಡ್ರಗ್ಸ್‌ ಪೆಡ್ಲರ್‌ ಥಾಮಸ್ ಎಂಬಾತನಿಂದ ಡ್ರಗ್ಸ್ ಪೂರೈಕೆ ಮಾಡಿಕೊಳ್ಳುತ್ತಿದ್ದ ಈಕೆ ಇದರ ಸಪ್ಲೈ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಕೆಲವೊಂದು ಸಾಕ್ಷ್ಯಗಳು ಸಿಕ್ಕಿದ್ದು, ತನಿಖೆ ನಡೆಸುತ್ತಿದ್ದಾರೆ. ಜತೆಗೆ ಕೆಲ ರಾಜಕಾರಣಿಗಳ ಮಕ್ಕಳು ಮತ್ತು ಸ್ಯಾಂಡಲ್‍ವುಡ್‍ನವರ ಜತೆಗಿನ ಸೋನಿಯಾ ಸಂಬಂಧದ ಬಗ್ಗೂ ವಿಚಾರಣೆ ನಡೆಸಲಾಗುತ್ತಿದೆ.

    VIDEO: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಐತಿಹಾಸಿಕ ದಾಖಲೆ: ಏಳು ಪದಕಗಳ ಬೇಟೆ

    ಪೆಟ್ರೋಲ್ ಕದ್ದಿದ್ದು ನೋಡಿದ್ದೇ ತಪ್ಪಾಯ್ತು: ಯುವಕನ ಕೊಲೆ ಮಾಡಿ ತಿಪ್ಪೆಯಲ್ಲಿ ಹೂತಿಟ್ಟ ಪಾಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts