

ಗೋಕಾಕ (ಬೆಳಗಾವಿ): ಪೆಟ್ರೋಲ್ ಕದ್ದಿದ್ದು ನೋಡಿದ್ದರಿಂದ ಯುವಕನೊಬ್ಬನ ಬರ್ಬಲ ಕೊಲೆ ಮಾಡಿ ತಿಪ್ಪೆಗುಂಡಿಯಲ್ಲಿ ಹೂತಿಟ್ಟಿರುವ ಭಯಾನಕ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಮಹಾದೇವ ಕಿಚಡಿ(28) ಕೊಲೆಯಾದ ಯುವಕ.
ಊರಲ್ಲಿ ನಿಲ್ಲಿಸಿದ್ದ ವಾಹನಗಳ ಪೆಟ್ರೋಲ್ ರಾತ್ರೋ ರಾತ್ರಿ ಕದಿಯುತ್ತಿದ್ದ ಖದೀಮ ಪ್ರವೀಣ ಸುಣಧೋಳಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸುತ್ತಿದ್ದ ಗಾಡಿಗಳ ಪೆಟ್ರೋಲ್‌ಗಳನ್ನು ರಾತ್ರೋರಾತ್ರಿ ಬಂದು ಕದಿಯುತ್ತಿದ್ದ. ಈತ ನೋಡಿದ್ದನ್ನು ಪ್ರವೀಣ್ ನೋಡಿದ್ದಾನೆ. ಇದನ್ನು ಊರ ಜನರ ಮುಂದೆ ಹೇಳಿ ಮಾನ ಕಳೆಯುತ್ತಾನೆಂದು ರಾಡ್‌ನಿಂದ ಹೊಡೆದು ಕೊಲೆ ಮಾಡಿ ಶವ ತಿಪ್ಪೆಯಲ್ಲಿ ಹೂತಿಟ್ಟಿದ್ದ.
ನಾಲ್ಕು ದಿನಗಳ ಬಳಿಕ ಶವ ಕೊಳೆತಿದ್ದು ವಾಸನೆ ಊರಿಗೆ ಹಬ್ಬಿದೆ. ಆಗ ಜನರು ಬಂದು ನೋಡಿದಾಗ ಶವ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.