ಅಪ್ಪು ನಡೆಸುತ್ತಿದ್ದ ಶಾಲೆಯ ಹೊಣೆ ಹೊತ್ತ ನಟ ವಿಶಾಲ್​ಗೆ ಭಾರಿ ಆಘಾತ: ಚಿತ್ರೀಕರಣದ ವೇಳೆ ಮತ್ತೊಮ್ಮೆ ಅನಾಹುತ

vishal
Published on

ಚೆನ್ನೈ: ನಟ ಪುನೀತ್​ ರಾಜ್​ಕುಮಾರ್​ ಅವರ ಅಕಾಲಿನ ಸಾವಿನ ನಂತರ ಅವರು ನಡೆಸುತ್ತಿದ್ದ ಶಾಲೆಗಳ ಸುಮಾರು 1800 ಮಕ್ಕಳ ಜವಾಬ್ದಾರಿಯನ್ನು ತಾನು ಹೊರುವುದಾಗಿ ಹೇಳಿ ಕನ್ನಡದ ಭಾರಿ ಅಭಿಮಾನಿಗಳನ್ನು ಗಳಿಸಿರುವ ತಮಿಳು ನಟ ವಿಶಾಲ್​ಗೆ ಮತ್ತೊಮ್ಮೆ ಭಾರಿ ಆಘಾತ ಉಂಟಾಗಿದೆ.

ಸಾಹಸ ದೃಶ್ಯಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿರುವ ನಟ ವಿಶಾಲ್​ಗೆ ಇದೀಗ ಮತ್ತೆ ಅದೇ ದೃಶ್ಯ ಕೈಕೊಟ್ಟಿದೆ. ಕಳೆದ ಫೆಬ್ರುವರಿಯಲ್ಲಿ ಲಾಠಿ ಚಿತ್ರೀಕರಣದ ವೇಳೆ ಹೇರ್​ಲೈನ್​ ಫ್ರ್ಯಾಕ್ಚರ್​ ಆಗಿತ್ತು. ಲಾಠಿ ಚಿತ್ರದಲ್ಲಿ ಇವರು ಪೊಲೀಸ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿದ್ದರು. ಮಗುವೊಂದನ್ನು ಎತ್ತಿಕೊಂಡು ಆಳವಾದ ಜಾಗಕ್ಕೆ ಧುಮುಕುವ ಸಂದರ್ಭದಲ್ಲಿ ಅನಾಹುತ ಸಂಭವಿಸಿತ್ತು. ಇದರ ಬೆನ್ನಲ್ಲೇ ಇದೀಗ `ಲತ್ತಿಯ’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ವೇಳೆ ಗಾಯಗೊಂಡಿದ್ದಾರೆ. ಫೈಟ್‌ ಸೀನ್‌ ಚಿತ್ರೀಕರಿಸುವಾಗ ಗಾಯಗಳಾಗಿದ್ದು, ಸದ್ಯ ಚಿತ್ರೀಕರಣಕ್ಕೆ ಬ್ರೇಕ್‌ ಹಾಕಲಾಗಿದೆ.

ಲತ್ತಿಯ ಚಿತ್ರದಲ್ಲಿ ಕೂಡ ವಿಶಾಲ್​ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದೆ. ಆ್ಯಕ್ಷನ್ ಸೀನ್ಸ್ ಶೂಟಿಂಗ್‌ ಮಾಡುವಾಗ ಗಾಯಗೊಂಡಿದ್ದಾರೆ. ಈ ಸಿನಿಮಾಗಾಗಿ ವಿಶಾಲ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net