More

    24 ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಣೆ- ಪ್ರವೇಶ​ ಪಡೆಯುವಾಗ ಎಚ್ಚರ: ಇಲ್ಲಿದೆ ವಿವರ

    ನವದೆಹಲಿ: ಕರ್ನಾಟಕ ಸೇರಿದಂತೆ ದೇಶದಲ್ಲಿರುವ 24 ವಿಶ್ವವಿದ್ಯಾಲಯಗಳು ‘ನಕಲಿ’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಘೋಷಿಸಿದೆ. ಆದ್ದರಿಂದ ಈ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವಾಗ ವಿದ್ಯಾರ್ಥಿಗಳು ಹಾಗೂ ಪಾಲಕರು ಬಹು ಎಚ್ಚರಿಕೆ ವಹಿಸಬೇಕಾಗಿದೆ.

    ಯುಜಿಸಿ ಕಾಯ್ದೆಗೆ ವಿರುದ್ಧವಾಗಿ ಈ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಎಲ್ಲಾ ವಿಶ್ವವಿದ್ಯಾಲಯಗಳನ್ನು ಅಮಾನ್ಯವೆಂದು ಘೋಷಿಸಲಾಗಿದೆ. ಆದ್ದರಿಂದ ಯಾವುದೇ ಪದವಿಯನ್ನೂ ನೀಡುವ ಅಧಿಕಾರ ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.

    ‘ಕೆಲವು ಸಂಸ್ಥೆಗಳು ವಿವಿಧ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿರುವುದನ್ನು ಗಮನಿಸಲಾಗಿದೆ, ಅವು ಕೇಂದ್ರ ಅಥವಾ ರಾಜ್ಯ ಅಥವಾ ಯುಜಿಸಿ ಕಾಯಿದೆಯ ಅಡಿಯಲ್ಲಿ ಸ್ಥಾಪಿತವಾಗಿಲ್ಲ, ಆದ್ದರಿಂದ, ಈ ಸಂಸ್ಥೆಗಳು ನಕಲಿ ವಿಶ್ವವಿದ್ಯಾಲಯಗಳು ನೀಡುವ ಯಾವುದೇ ಹಕ್ಕನ್ನು ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

    ಇಂತಹ ಸ್ವಯಂ ಘೋಷಿತ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಕೋರ್ಸ್​ಗಳನ್ನು ಮುಂದುವರೆಸದಂತೆ ಸೂಚಿಸಲಾಗಿದೆ.
    ಉತ್ತರ ಪ್ರದೇಶದಲ್ಲಿ 8, ದೆಹಲಿಯಲ್ಲಿ 7, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ತಲಾ 2 ವಿವಿಗಳು ನಕಲಿಗಳೆಂದು ಯುಜಿಸಿ ಘೋಷಿಸಿದ್ದರೆ, ಕರ್ನಾಟಕ ಸೇರಿದಂತೆ ಕೇರಳ, ಮಹಾರಾಷ್ಟ್ರ, ಪಾಂಡಿಚೆರಿಗಳಲ್ಲಿ ತಲಾ ಒಂದು ನಕಲಿ ವಿವಿಗಳು ಕಾರ್ಯನಿರ್ವಹಿಸುತ್ತಿವೆ.

    ಯುಜಿಸಿ ಕಾಯಿದೆಯ ಸೆಕ್ಷನ್ 23ರ ಪ್ರಕಾರ ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯವನ್ನ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆ ‘ವಿಶ್ವವಿದ್ಯಾಲಯ’ ಪದ ಬಳಕೆಯನ್ನು ನಿಷೇಧಿಸಿದೆ.

    ದೇಶದ 24 ನಕಲಿ ವಿಶ್ವವಿದ್ಯಾಲಯಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ:

    ಕರ್ನಾಟಕ:
    * Badaganvi Sarkar World Open University Education Society, Gokak, Belgaum, Karnataka.

    ದೆಹಲಿ:
    * Commercial University Ltd., Daryaganj, Delhi.
    * United Nations University, Delhi.
    * Vocational University, Delhi.
    * ADR-Centric Juridical University, ADR House, 8J, Gopala Tower, 25 Rajendra Place, New Delhi – 110 008.
    * Indian Institute of Science and Engineering, New Delhi.
    * Viswakarma Open University for Self-Employment, Rozgar Sewasadan, 672, Sanjay Enclave, Opp. GTK Depot, Delhi-110033.
    * Adhyatmik Vishwavidyalaya (Spiritual University), 351-352, Phase-I, Block-A, Vijay Vihar, Rithala, Rohini, Delhi-110085
    ಆಂಧ್ರ ಪ್ರದೇಶ
    * Christ New Testament Deemed University, #32-32-2003, 7th Lane, Kakumanuvarithoto, Guntur, Andhra Pradesh-522002 and another address of Christ New Testament Deemed University, Fit No. 301, Grace Villa Apts., 7/5, Srinagar, Guntur, Andhra Pradesh-522002

    ಕೇರಳ
    * St. John’s University, Kishanattam, Kerala.
    ಮಹಾರಾಷ್ಟ್ರ
    * Raja Arabic University, Nagpur, Maharashtra.

    ಪಶ್ಚಿಮ ಬಂಗಾಳ
    * Indian Institute of Alternative Medicine, Kolkatta.
    * Institute of Alternative Medicine and Research,8-A, Diamond Harbour Road, Builtech inn, 2nd Floor, Thakurpurkur, Kolkatta – 700063

    ಉತ್ತರ ಪ್ರದೇಶ
    * Varanaseya Sanskrit Vishwavidyalaya, Varanasi (UP) Jagatpuri, Delhi.
    * Mahila Gram Vidyapith/Vishwavidyalaya, (Women’s University) Prayag, Allahabad, Uttar Pradesh.
    * Gandhi Hindi Vidyapith, Prayag, Allahabad, Uttar Pradesh.
    * National University of Electro Complex Homeopathy, Kanpur, Uttar Pradesh.
    * Netaji Subhash Chandra Bose University (Open University), Achaltal, Aligarh, Uttar Pradesh.
    * Uttar Pradesh Vishwavidyalaya, Kosi Kalan, Mathura, Uttar Pradesh.
    * Maharana Pratap Shiksha Niketan Vishwavidyalaya, Pratapgarh, Uttar Pradesh.
    * Indraprastha Shiksha Parishad, Institutional Area,Khoda,Makanpur,Noida Phase-II, Uttar Pradesh.

    ಒಡಿಶಾ
    * Nababharat Shiksha Parishad, Anupoorna Bhawan, Plot No. 242, Pani Tanki Road,Shaktinagar, Rourkela-769014.
    * North Orissa University of Agriculture & Technology, Odisha.

    ಪುದುಚೆರಿ
    * Sree Bodhi Academy of Higher Education, No. 186, Thilaspet, Vazhuthavoor Road, Puducherry-605009

    ಹಾಥರಸ್​ ರೇಪ್​ ಕೇಸ್​ಗೆ ಭಾರಿ ಟ್ವಿಸ್ಟ್​: ಆರೋಪಿಯೊಂದಿಗೆ 104 ಬಾರಿ ಫೋನ್​ಕಾಲ್​ ಮಾಡಿದ್ದ ಯುವತಿ!

    ಕೊನೆಗೂ ಘೋಷಣೆಯಾಯ್ತು ತಮಿಳುನಾಡು ಸಿಎಂ ಅಭ್ಯರ್ಥಿ ಹೆಸರು- ಕುತೂಹಲಕ್ಕೆ ತೆರೆ

    ಶಾಹೀನ್​ಬಾಗ್​ನಂಥ ಸ್ಥಳದಲ್ಲಿ ಪ್ರತಿಭಟನೆ ಸಹಿಸಲ್ಲ- ಕೋರ್ಟ್​ ಆದೇಶ ಕಾಯದೇ ಕ್ರಮ ತೆಗೆದುಕೊಳ್ಳಿ: ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts