More

    ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

    ಲಖನೌ: ಉತ್ತರ ಪ್ರದೇಶದ ಹಾಥರಸ್​ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ಲಾಭ ಪಡೆಯುತ್ತಿರುವ ಕೆಲ ರಾಜಕೀಯ ಪಕ್ಷಗಳು ಮಾಡಿರುವ ಆಘಾತಕಾರಿ ಅಂಶವೊಂದನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪತ್ತೆಹಚ್ಚಿದೆ.

    ಯುವತಿಗೆ ನ್ಯಾಯ ದೊರಕಿಸಿಕೊಡುವೆವು ಎಂದು ಹೇಳುವ ನೆಪದಲ್ಲಿ ಕೋಮು ಸಂಘರ್ಷವನ್ನು ಹುಟ್ಟುಹಾಕಲು ಹಣದ ಹೊಳೆಯೇ ಹರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದಾಗಲೇ ಸಿಎಎ ಮಾದರಿಯ ಪ್ರತಿಭಟನೆ ನಡೆಸಲು ತಯಾರಿ ಮಾಡಲಾಗಿತ್ತು ಎಂಬ ಅಂಶವನ್ನು ಕೆಲ ದಿನಗಳ ಹಿಂದಷ್ಟೇ ಅಧಿಕಾರಿಗಳು ಹೇಳಿದ್ದರು. ಆದರೆ ಇದಕ್ಕೀಗ ಬಲವಾದ ಸಾಕ್ಷ್ಯಾಧಾರಗಳು ನಿರ್ದೇಶನಾಲಯದ ಅಧಿಕಾರಿಗಳಿಗೆ ಸಿಕ್ಕಿದೆ.

    ಉತ್ತರ ಪ್ರದೇಶಕ್ಕೆ ಕನಿಷ್ಠ 100 ಕೋಟಿ ಹವಾಲಾ ಹಣ ಬಂದಿರುವ ಬಗ್ಗೆ ತಮಗೆ ಸಾಕ್ಷ್ಯ ಸಿಕ್ಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪೈಕಿ 50 ಕೋಟಿ ರೂ. ಮಾರಿಷಸ್ ದೇಶದಿಂದ ಬಂದಿದೆಯಂತೆ! ಸಿಎಎ ಪ್ರತಿಭಟನೆ ವೇಳೆ ಪಿಎಫ್‌ಐ ಸಂಘಟನೆಗೆ ವಿದೇಶದಿಂದ 120 ಕೋಟಿ ಬಂದಿರುವುದು ಬೆಳಕಿಗೆ ಬಂದಿತ್ತು. ಇದೇ ಮಾದರಿಯಲ್ಲಿ ಈಗಲೂ ಪ್ರತಿಭಟನೆ ನಡೆಯುವ ಶಂಕೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಳೆದ ಕೆಲ ದಿನಗಳ ಹಿಂದೆಯೇ ಹೇಳಿದ್ದೀಗ ಸತ್ಯವಾಗಿದೆ!

    ಇದನ್ನೂ ಓದಿ: ತಂದೆ ಮೃತಪಟ್ಟನಂತರ ತನ್ನಿಚ್ಛೆಯಂತೆ ತಾಯಿ ಆಸ್ತಿಯಲ್ಲಿ ಪಾಲು ಮಾಡಬಹುದಾ?

    ಸದ್ಯ ಪ್ರಕರಣದ ಆಳಕ್ಕೆ ಹೋಗಿರುವ ಇ.ಡಿ ಅಧಿಕಾರಿಗಳು ಇದರ ಹಿಂದಿರುವ ಶಕ್ತಿಯ ಬಗ್ಗೆ ಪತ್ತೆ ಹಚ್ಚುತ್ತಿದ್ದಾರೆ. ಜಸ್ಟಿಸ್ ಫಾರ್ ಹಾಥರಸ್​ ಹೆಸರಿನಲ್ಲಿ ವೆಬ್​ಸೈಟ್​ ರೂಪಿಸಿರುವ ಹಿಂದಿನ ಶಕ್ತಿ ಯಾವುದು ಎಂಬ ಬಗ್ಗೆಯೂ ದತ್ತಾಂಶ ಸಂಗ್ರಹ ಕಾರ್ಯ ನಡೆದಿದೆ. ಈ ವೆಬ್​ಸೈಟ್​ ಮೂಲಕ ವಿದೇಶಿ ಧನಸಹಾಯಕ್ಕಾಗಿ ಬಳಸಲಾಗಿದೆಯೇ ಎಂದು ಕಂಡುಹಿಡಿಯಲು ಕಾರ್ಯತಂತ್ರ ರೂಪಿಸಲಾಗಿದೆ.

    ವೆಬ್‌ಸೈಟ್‌ನ ನಿರ್ವಾಹಕರ ವಿರುದ್ಧ ಮನಿ ಲಾಂಡರಿಂಗ್ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಹಣವನ್ನು ವರ್ಗಾಯಿಸಿದ ಖಾತೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ವೆಬ್​ಸೈಟ್​ ಅನ್ನು ಇದಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ.

    ಅಂದಹಾಗೆ ಹವಾಲಾ ಹಣ ಎಂದರೆ ಅಕ್ರಮ ಹಣ ಎಂದು ಅರ್ಥ. ಇದರ ಮೂಲದ ಕುರಿತು ಯಾವುದೇ ದಾಖಲೆಗಳು ಇರುವುದಿಲ್ಲ. ಇದಕ್ಕೆ ತೆರಿಗೆಯನ್ನೂ ಕಟ್ಟಿರುವುದಿಲ್ಲ. ಹವಾಲಾ ಹಣ ಒಂದು ಪ್ರದೇಶದಿಂದ ಇನ್ನೊಂದು ಸ್ಥಳಕ್ಕೆ ಬರುವಾಗ ಯಾವುದೇ ಬ್ಯಾಂಕ್​ ಮೂಲಕ ವ್ಯವಹಾರ ನಡೆಸುವುದಿಲ್ಲ. ಬದಲಿಗೆ ಹವಾಲಾ ಆಪರೇಟರ್​ಗಳು ಈ ಅಕ್ರಮ ಹಣವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ರೂಪುರೇಷೆ ತಯಾರಿಸುತ್ತಾರೆ.

    ಹವಾಲಾದ ನಿಜವಾದ ಅರ್ಥ ನಂಬಿಕೆ ಎಂದು. ಆದರೆ ಇಲ್ಲಿ ಹವಾಲಾ ಆಪರೇಟರ್​ಗಳು ಒಬ್ಬರನ್ನೊಬ್ಬರ ಮೇಲೆ ನಂಬಿಕೆ ಇಟ್ಟು ಅಕ್ರಮ ಹಣದ ಸರಬರಾಜು ಮಾಡುತ್ತಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಇದೊಂದು ರೀತಿಯ ಕಪ್ಪುಹಣ. ಇಲ್ಲಿ ಎಲ್ಲವೂ ಗುಟ್ಟುಗುಟ್ಟಾಗಿ ನಡೆಯುತ್ತವೆ.

    ಹಾಥರಸ್​ ರೇಪ್​ ಕೇಸ್​ಗೆ ಭಾರಿ ಟ್ವಿಸ್ಟ್​: ಆರೋಪಿಯೊಂದಿಗೆ 104 ಬಾರಿ ಫೋನ್​ಕಾಲ್​ ಮಾಡಿದ್ದ ಯುವತಿ!

    ಹಾಥರಸ್​ ರೇಪ್​ ಕೇಸ್​: ಸರ್ಕಾರದ ವಿರುದ್ಧ ನುಡಿದರೆ ₹50 ಲಕ್ಷ ಗಿಫ್ಟ್​! ಪತ್ರಕರ್ತೆಯಿಂದಲೂ ಪಿತೂರಿ?

    ಶಾಹೀನ್​ಬಾಗ್​ನಂಥ ಸ್ಥಳದಲ್ಲಿ ಪ್ರತಿಭಟನೆ ಸಹಿಸಲ್ಲ- ಕೋರ್ಟ್​ ಆದೇಶ ಕಾಯದೇ ಕ್ರಮ ತೆಗೆದುಕೊಳ್ಳಿ: ಸುಪ್ರೀಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts