More

    ಈ ಧರ್ಮದಲ್ಲಿದೆ ಒತ್ತಡ ನಿವಾರಣೆಗೆ ಮದ್ದು! ಖ್ಯಾತ ಪಾಪ್ ತಾರೆ ಕ್ಯಾಮಿಲಾ ಕ್ಯಾಬೆಲ್ಲೊ ಹೇಳಿಕೆ ವೈರಲ್​​​​

    ಮುಂಬೈ: ಭಾಷೆಯಿಂದ ಹಿಡಿದು ಉಡುಗೆ, ತೊಡುಗೆ, ಮನರಂಜನೆಅಷ್ಟೇಕೆ ಧರ್ಮ ಅನುಸರಣೆ ತನಕ ಪಾಶ್ಚಿಮಾತ್ಯರನ್ನು ಭಾರತೀಯರಾದ ನಾವು ಅನುಸರಿಸುತ್ತ ಬರುತ್ತಿದ್ದೇವೆ. ಆದರೆ ನಾವು ಯಾರನ್ನು ಅನುಸರಿಸುತ್ತೇವೆಯೋ ಅದೇ ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಮಾರುಹೋಗುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನವಾಗಿ ಖ್ಯಾತ ಪಾಪ್ ತಾರೆ ಕ್ಯಾಮಿಲಾ ಕ್ಯಾಬೆಲ್ಲೊ ನಿಲ್ಲುತ್ತಾರೆ.

    ಇದನ್ನೂ ಓದಿ: ಮಹಾನಟಿ ನಂತರ ಲೆಜೆಂಡರಿ ಸಿಂಗರ್ ಬಯೋಪಿಕ್ ನಲ್ಲಿ ಕೀರ್ತಿ ಸುರೇಶ್?

    ಅವರ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿದೆ. ಇಷ್ಟಕ್ಕೂ ಅವರು ಏನು ಹೇಳಿದ್ದಾರೆಂದು ನೋಡುವುದಾದರೆ, ತಾತ್ವಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ ಖ್ಯಾತಿಯ ಒತ್ತಡವನ್ನು ನಿಭಾಯಿಸಲು ನಾನು ಹಲವಾರು “ಮೆಕ್ಯಾನಿಸಂ”ಗಳನ್ನು ಕಂಡುಕೊಂಡಿದ್ದೇನೆ. ಅದರಲ್ಲಿ ಭೌದ್ಧ ಧರ್ಮ ದ ಅಂಶಗಳೂ ಸೇರಿವೆ ಎಂದು ಪಾಪ್ ತಾರೆ ಕ್ಯಾಮಿಲಾ ಕ್ಯಾಬೆಲ್ಲೊ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

    “ನಾನು ಸಂಗೀತ ಕ್ಷೇತ್ರಕ್ಕೆ ಕಾಲಿರಿಸಿದಾಗ ಎಲ್ಲಿ ತಪ್ಪಾಗುತ್ತದೆಯೋ, ಯಾವ ರೀತಿ ನಡೆದುಕೊಳ್ಳಬೇಕು? ಯಾರನ್ನು ನಂಬುವುದು? ಹೇಗೆ? ಏನೋ ಎಂಬ ಬಗ್ಗೆ ಗೊಂದಲ ಮೂಡುತ್ತಿತ್ತು. ನನ್ನ ವ್ಯಕ್ತಿತ್ವ, ಕೌಶಲ್ಯ ಹೊಂದಾಣಿಕೆಯಾಗದೆ ಅಸಮರ್ಪಕ ಕಾರ್ಯವಿಧಾನಗಳಿಂದಾಗಿ. ಬದುಕಲು ಮತ್ತು ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ತೊಂದರೆ ಅನುಭವಿಸುತ್ತಿದ್ದೆ. ತುಂಬಾ ಅಭಿವೃದ್ಧಿಹೊಂದಬೇಕು ಎಂದೆಲ್ಲ ಯೋಚಿಸುತ್ತಿದ್ದೆ. ಆದರೆ ನನಗಾಗ ನೆರವಿಗೆ ಬಂದಿದ್ದೇ ಬೌದ್ಧಧರ್ಮ ಎಂದು ಕ್ಯಾಬೆಲ್ಲೊ ‘ಆರ್ಮ್‌ಚೇರ್ ಎಕ್ಸ್‌ಪರ್ಟ್’ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದರು.

    “ಉದಾಹರಣೆಗೆ, ನಾನು ನಿಜವಾಗಿಯೂ ಬೌದ್ಧಧರ್ಮದವಳಾಗಿದ್ದರೆ ಇಂತಹ ಗೊಂದಲ ಎಂದಿಗೂ ಸಂಭವಿಸುತ್ತಿರಲಿಲ್ಲ, ಏಕೆಂದರೆ ನನಗೆ ಆ ಸಾಧನಗಳು ಬೇಕಾಗುತ್ತವೆ. ಶಾಂತವಾಗಿರುವುದು ಮತ್ತು ಅತಿಆಸೆ ಪಡದೆ ಮುಂದೆ ಸಾಗಲು ಬೌದ್ಧ ತತ್ವದಿಂದ ಸಾಧ್ಯವಾಗುತ್ತದೆ. ಜೀವನದಲ್ಲಿ ಆದರ್ಶ, ಸಮತೋಲನವನ್ನು ಕಂಡುಕೊಳ್ಳಲು ಸಣ್ಣ ಬದಲಾವಣೆಗಳಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.

    “ಜೀವನವು ಬೈಕು ಸವಾರಿ ಮಾಡುವಂತಿದೆ. ನೀವು ನಿರಂತರವಾಗಿ ಬ್ಯಾಲೆನ್ಸ್ ಮಾಡುತ್ತಿದ್ದೀರಿ. ಅದು ಸ್ವಲ್ಪ ಹೆಚ್ಚುಕಡಿಮೆಯಾದರೂ ಬ್ಯಾಲೆನ್ಸ್​ ತಪ್ಪುತ್ತದೆ. ಕೋವಿಡ್​ -19 ಸಾಂಕ್ರಾಮಿಕವು ಅಡುಗೆ ತಯಾರಿ ಸೇರಿದಂತೆ ಹಲವು ಹೊಸ ಕೌಶಲ್ಯಗಳನ್ನು ಕಲಿಸಿದೆ ನಾನೀಗ ಅತ್ಯಂತ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದೇನೆ. ಇದರಲ್ಲಿ ಅತ್ಯಂತ ಎತ್ತರದ ಸಂತೃಪ್ತಿ ಇದೆ” ಎಂದು ಕ್ಯಾಮಿಲಾ ಕ್ಯಾಬೆಲ್ಲೊ ಹೇಳಿದ್ದಾರೆ.

    ಪ್ರಸಿದ್ಧ ರಾಪ್ ಗಾಯಕ ಎಮಿನೆಮ್ ಪುತ್ರಿ ಅಲೈನಾ ವಿವಾಹ..ಕಾರ್​ ಮೇಲೇರಿ ಚುಂಬಿಸುತ್ತ ಸಾಗುವ ಫೋಟೋಗಳು ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts