More

    ಶೌಚಗೃಹದಲ್ಲಿ ಕಾಟಾಚಾರದ ನಿರ್ವಹಣೆ

    ಮಡಿಕೇರಿ:

    ಮಡಿಕೇರಿ ನಗರದಲ್ಲಿ ಶೌಚಗೃಹಗಳ ಕೊರತೆ ಮತ್ತು ಇರುವ ಶೌಚಗೃಹಗಳಲ್ಲಿ ನಿರ್ವಹಣೆ ಸಮಸ್ಯೆ ಬಗ್ಗೆ ಗುರುವಾರದ ವಿಜಯವಾಣಿಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಡಿಕೇರಿ ನಗರಸಭೆ ಕಾಟಾಚಾರಕ್ಕೆ ಎಂಬಂತೆ ಕೆಲವು ಶೌಚಗೃಹಗಳನ್ನು ಶುಕ್ರವಾರ ಸ್ವಚ್ಛಗೊಳಿಸುವ ಪ್ರಯತ್ನ ಮಾಡಿದೆ. ಜ. ತಿಮ್ಮಯ್ಯ ಸರ್ಕಲ್‌ನಲ್ಲಿ ಮೂರ್ನಾಡು ರಸ್ತೆಯಲ್ಲಿರುವ ಶೌಚಗೃಹಕ್ಕೆ ನಗರಸಭೆ ಸಿಬ್ಬಂದಿ ಕ್ಲೋರಿನ್ ಚೆಲ್ಲಿ ತೆರಳಿದ್ದಾರೆ. ಇದರಿಂದ ಈಗ ಇಲ್ಲಿ ಮೂತ್ರದ ದುರ್ವಾಸನೆ ಬದಲಿಗೆ ಕ್ಲೋರಿನ್ ವಾಸನೆ ಬರುತ್ತಿದೆಯೇ ಹೊರತು ಬೇರೆ ಏನೂ ಪ್ರಯೋಜನ ಆಗಿಲ್ಲ. ಇಲ್ಲಿ ಪಕ್ಕದಲ್ಲೇ ಹಾಕತ್ತೂರು, ಮೂರ್ನಾಡು, ವಿರಾಜಪೇಟೆ, ಗೋಣಿಕೊಪ್ಪಕ್ಕೆ ತೆರಳುವವರಿಗಾಗಿ ಬಸ್ ತಂಗುದಾಣ ಇದ್ದು, ಶೌಚಗೃಹದ ದುರವಸ್ಥೆಯಿಂದಾಗಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್‌ಗಾಗಿ ಕಾಯಬೇಕಾದ ಸ್ಥಿತಿ ಇದೆ.

    ಶೌಚಗೃಹಗಳ ಕೊರತೆ ಮತ್ತು ಇರುವ ಶೌಚಗೃಹಗಳಲ್ಲಿ ನಿರ್ವಹಣೆ ಸಮಸ್ಯೆ ಬಗ್ಗೆ ಸ್ಥಳೀಯ ಪ್ರಜ್ಞಾವಂತರು ಈಗಾಗಲೇ ನಗರಸಭೆ ಗಮನಕ್ಕೆ ತಂದಿದ್ದಾರೆ. ಆದರೆ ಜಡ್ಡಗಟ್ಟಿದ ವ್ಯವಸ್ಥೆಯಲ್ಲಿ ಈತನಕ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸಾರ್ವಜನಿಕರು. ಸ್ವಚ್ಛಭಾರತ ಪರಿಕಲ್ಪನೆಯನ್ನು ಸಂಪೂರ್ಣ ಮರೆತಂತೆ ಇರುವ ನಗರಸಭೆ ಆಡಳಿತ ಇನ್ನಾದರೂ ನಗರದಲ್ಲಿ ಇರುಇವ ಶೌಚಗೃಹಗಳ ದುರಸ್ಥಿ ಮಾಡುವುದರ ಜತೆಗೆ ತೀರಾ ಅಗತ್ಯ ಇರುವ ಕಡೆಗಳಲ್ಲಿ ನೂತನ ಶೌಚಗೃಹಗಳ ನಿರ್ಮಾಣಕ್ಕೆ ಮನಸ್ಸು ಮಾಡಲಿ ಎನ್ನುವ ಆಗ್ರಹ ಕೇಳಿಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts