More

    ಜಿಲ್ಲೆಯಲ್ಲಿ ಮುಂದುವರೆದ ವರ್ಷಧಾರೆ: ಬೆಳೆಗೆ ಜೀವಕಳೆ, ಕೆರೆ ಕಟ್ಟೆಗಳಿಗೆ ನೀರು

    ಮಂಡ್ಯ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿದ್ದು, ಬುಧವಾರ ನಗರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ.
    ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ಮೋಡ ಕವಿದಂತಾಗಿ ಜೋರು ಮಳೆ ಸುರಿಯಿತು. ಇನ್ನು ಮಂಗಳವಾರ ಜಿಲ್ಲೆಯಲ್ಲಿ 9.7 ಮಿ.ಮೀ ಮಳೆಯಾಗಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ 12.4 ಮಿ.ಮೀ, ಮದ್ದೂರಿನಲ್ಲಿ 11.2 ಮಿ.ಮೀ, ಮಳವಳ್ಳಿಯಲ್ಲಿ 2.4 ಮಿ.ಮೀ, ಮಂಡ್ಯದಲ್ಲಿ 15.6 ಮಿ.ಮೀ, ನಾಗಮಂಗಲದಲ್ಲಿ 13.6 ಮಿ.ಮೀ, ಪಾಂಡವಪುರದಲ್ಲಿ 5.5 ಮಿ.ಮೀ ಹಾಗೂ ಶ್ರೀರಂಗಪಟ್ಟಣದಲ್ಲಿ 0.5 ಮಿ.ಮೀ ಮಳೆ ದಾಖಲಾಗಿದೆ.
    ಕಳೆದ ಕೆಲ ದಿನದಿಂದ ಮಳೆಯಾಗುತ್ತಿರುವ ಪರಿಣಾಮ ಬಿಸಿಲಿಗೆ ಒಣಗಿ ಹೋಗಿದ್ದ ತೆಂಗು, ಅಡಿಕೆ ಸೇರಿದಂತೆ ಹಲವು ಬೆಳೆಗಳಿಗೆ ಮತ್ತೆ ಜೀವ ಬಂದಂತಾಗಿದೆ. ಮಾತ್ರವಲ್ಲದೆ ಕೆರೆ ಹಾಗೂ ಸಣ್ಣಪುಟ್ಟ ಕಟ್ಟೆಗಳಿಗೆ ನೀರು ಬರಲಾರಂಭಿಸಿದೆ. ಮಂಗಳವಾರ 81 ಅಡಿ ತಲುಪಿದ್ದ ಕೆಆರ್‌ಎಸ್ ನೀರಿನ ಮಟ್ಟ ಬುಧವಾರ 81.20 ಅಡಿಗೆ ಏರಿಕೆಯಾಗಿದೆ. 1,456 ಕ್ಯೂಸೆಕ್ ಒಳಹರಿವು ಹಾಗೂ 274 ಕ್ಯೂಸೆಕ್ ಹೊರಹರಿವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts