More

    ಅಪ್ಪ-ಅಮ್ಮನ ಜತೆ ಜಗಳವಾಡಿ ಮನೆಬಿಟ್ಟ ಬಾಲಕಿಯ ಕೂಡಿಹಾಕಿ 22 ದಿನ ಗ್ಯಾಂಗ್​ರೇಪ್​!

    ಕಟಕ್​ (ಒಡಿಶಾ): ಅತ್ಯಂತ ಶಾಕಿಂಗ್​ ಎನ್ನುವ ಪ್ರಕರಣವೊಂದರಲ್ಲಿ 17 ವರ್ಷದ ಬಾಲಕಿಯನ್ನು ಕೋಳಿ ಫಾರಂನಲ್ಲಿ ಕೂಡಿಹಾಕಿ 22 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ಪೋಷಕರೊಂದಿಗೆ ಜಗಳವಾಡಿ ಮನೆಯಿಂದ ಓಡಿಹೋಗಿದ್ದ ಜಗತ್ ಸಿಂಗಪುರ್ ಜಿಲ್ಲೆಯ ಟಿರ್ಟಲ್​ ನಿವಾಸಿಯಾಗಿರುವ ಬಾಲಕಿಯ ಸ್ಥಿತಿ ಇದೀಗ ಚಿಂತಾಜನಕವಾಗಿದೆ.

    ಆಗಿದ್ದೇನು? ಕಳೆದ ತಿಂಗಳು ಈ ಬಾಲಕಿ ಅಪ್ಪ-ಅಮ್ಮನ ಜತೆ ಚಿಕ್ಕ ವಿಷಯಕ್ಕೆ ಜಗಳವಾಡಿದ್ದಾಳೆ. ಅದೇ ಸಿಟ್ಟಿನಿಂದ ಮನೆ ಬಿಟ್ಟು ಹೋಗಿದ್ದಾಳೆ. ಬಸ್​ನಿಲ್ದಾಣದ ಬಳಿ ಕುಳಿತುಕೊಂಡಿದ್ದಾಳೆ.

    ಸಿಟ್ಟಿನಲ್ಲಿದ್ದ ಆಕೆಯನ್ನು ವ್ಯಕ್ತಿಯೊಬ್ಬ ನೋಡಿ ಏನಾಗಿರಬಹುದು ಎಂದು ಊಹಿಸಿದ್ದಾನೆ. ನಂತರ ಆಕೆಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಅವಳೂ ನಂಬಿದ್ದಾಳೆ.

    ಇದನ್ನೂ ಓದಿ: ಕಟ್ಟಿಕೊಂಡವಳನ್ನೇ ವರ್ಷಗಳಿಂದ ಶೌಚಗೃಹದಲ್ಲಿ ಕೂಡಿಹಾಕಿದ ಪತಿ!

    ನಂತರ ವ್ಯಕ್ತಿ ಆಕೆಯನ್ನು ಚೌಲಿಯಾಗಂಜ್ ಪೊಲೀಸ್ ಠಾಣೆ ಪ್ರದೇಶದ ಗತಿರೌಟ್ ಪಾಟ್ನಾ ಗ್ರಾಮದಲ್ಲಿರುವ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ಕರೆದೊಯ್ದೊಯ್ದಿದ್ದಾನೆ. ಅಲ್ಲಿಯೇ ಆಕೆಯನ್ನು ಕೂಡಿ ಹಾಕಿದ್ದಾನೆ. ನಂತರ ತನ್ನ ಸ್ನೇಹಿತನನ್ನು ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ.

    ಕೋಳಿ ಫಾರ್ಮ್​ನಲ್ಲಿಯೇ 22 ದಿನ ಕೂಡಿ ಹಾಕಿ ಈ ಕೃತ್ಯ ಎಸಗಲಾಗಿದೆ. ಈ ಬಗ್ಗೆ ಅಕ್ಕಪಕ್ಕದವರಿಗೆ ಸಂದೇಹ ಬರುತ್ತಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
    ಪೊಲೀಸರು ದಿಢೀರ್ ದಾಳಿ ನಡೆಸಿ ಹುಡುಗಿಯನ್ನು ರಕ್ಷಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಆತನಿಗಾಗಿ ಬಲೆ ಬೀಸಲಾಗಿದೆ.

    ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಅನಾಥಾಶ್ರಮಕ್ಕೆ ಕಳುಹಿಸಲಾಗಿದೆ. ಇದೀಗ ರಾಜಕೀಯ ತಿರುವು ಕೂಡ ಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

    ರಾತ್ರಿಯಿಡೀ ಫ್ರೀಜರ್​ನಲ್ಲಿದ್ದ ‘ಮೃತ’ ವೃದ್ಧ ಬೆಳಗಾದಾಗ ಅಲುಗಾಡಿದ!

    ರಾತ್ರಿಪೂರ್ತಿ ಜೈಲಿನ ಅಧಿಕಾರಿಗಳ ನಿದ್ದೆಗೆಡಿಸಿದ ನಟಿ ರಾಗಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts