

Alternatives To Porn: ಪ್ರಸ್ತುತ ಉಕ್ರೇನ್ ವಿರುದ್ಧ ಯುದ್ಧ ಸಾರುವಲ್ಲಿ ನಿರತರಾಗಿರುವ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉತ್ತರ ಕೊರಿಯಾದ ಸಹಾಯದಿಂದ ಉಕ್ರೇನ್ನ ಬಗ್ಗುಬಡಿಯಲು ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದ್ದಾರೆ. ಈ ಮಧ್ಯೆ ದೇಶದಲ್ಲಿ ಪೋರ್ನ್ ವೀಕ್ಷಣೆ ಹೆಚ್ಚುತ್ತಿರುವ ಹಿನ್ನೆಲೆ ಅದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂಬ ಕೂಗಿಗೆ ಪ್ರತಿಕ್ರಿಯಿಸಿರುವ ಪುಟಿನ್, ಇಂತಹ ವಿಷಯವನ್ನು ನಿಷೇಧಿಸುವುದು ಒಂದು ಆಯ್ಕೆ ಆಗಿದೆ ಎಂದಿದ್ದಾರೆ.
ನಿನ್ನೆ (ಡಿ.19) ಮಾಸ್ಕೋದಲ್ಲಿ ನಾಲ್ಕು ಗಂಟೆಗಳ ಕಾಲ ನಡೆದ ತಮ್ಮ ವಾರ್ಷಿಕ 'ಡೈರೆಕ್ಟ್ ಲೈನ್' ಈವೆಂಟ್‌ನಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಪುಟಿನ್, "ಇಲ್ಲಿ ಜನರ ಗಮನವನ್ನು ಸೆಳೆಯಲು ಹೆಚ್ಚು ಆಸಕ್ತಿದಾಯಕ ಹಾಗೂ ಕುತೂಹಲಕಾರಿ ಪರ್ಯಾಯ ವಿಷಯಗಳನ್ನು ಜಾರಿಗೊಳಿಸಬೇಕು. ಪೋರ್ನ್ ಕಂಟೆಂಟ್ಗಳನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ ನಿಜ. ಆದರೆ, ಇದನ್ನು ನಿಷೇಧಿಸುವ ಜತೆಗೆ ಕುತೂಹಲಕಾರಿ ಪರ್ಯಾಯ ವ್ಯವಸ್ಥೆ ಒದಗಿಸುವುದು ಅತೀ ಮುಖ್ಯ. ಜನರ ಗಮನವನ್ನು ಸೆಳೆಯಲು ಹೊಸ ಹೊಸ ವಿಷಯಗಳನ್ನು ಮುನ್ನೆಲೆಗೆ ತರಬೇಕು" ಎಂದರು.
"ವಯಸ್ಕರು ನೋಡುವ ಅಶ್ಲೀಲ ವಿಡಿಯೋ ವಿಷಯವು ಕೇವಲ ರಷ್ಯಾದ ಸಮಸ್ಯೆ ಮಾತ್ರವಲ್ಲ. ಇದು ಜಾಗತಿಕ ಸಮಸ್ಯೆಯಾಗಿದೆ. ಹಲವು ದೇಶಗಳು ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಅಂತಹ ವಿಷಯವನ್ನು ನಿಷೇಧಿಸುವುದು ಒಂದು ಆಯ್ಕೆಯಷ್ಟೇ. ಪೋರ್ನ್ ಸೈಟ್ ಬ್ಯಾನ್ ಮಾಡುವುದು ಸುಲಭ. ಆದರೆ, ಅದಕ್ಕಿಂತಲೂ ಹೆಚ್ಚಿನ ಆಸಕ್ತಿದಾಯಕ ವಿಷಯ ಸಿಗುವಂತಹ ಪರ್ಯಾಯಗಳನ್ನು ಒದಗಿಸುವುದು ನಮ್ಮ ಮುಂದಿರುವ ಗುರಿ. ಆಗ ಒಬ್ಬ ವ್ಯಕ್ತಿಯು ಅಂತಹ ಸೈಟ್ಗಳಿಗೆ ಪ್ರವೇಶಿಸುವ ಬದಲಿಗೆ ಇದರತ್ತ ಗಮನಹರಿಸಲು ಪ್ರಾರಂಭಿಸುತ್ತಾನೆ" ಎಂದಿದ್ದಾರೆ.
ಈ ಹಿಂದೆ ರಷ್ಯಾದಲ್ಲಿ ಜನನ ಪ್ರಮಾಣ ದರ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಅಧ್ಯಕ್ಷ ಪುಟಿನ್, ತಮ್ಮ ಹೇಳಿಕೆಯ ಮೂಲಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದ್ದರು. ಲೈಂಗಿಕ ಸಚಿವಾಲಯ ತೆರೆಯುವ ಬಗ್ಗೆ ಪ್ರಸ್ತಾಪಿಸಿದ್ದ ಅವರು, ರಾಷ್ಟ್ರದಲ್ಲಿ ಜನನ ಪ್ರಮಾಣ ಏರಿಸಲು ಲೈಂಗಿಕತೆಯನ್ನು ಉತ್ತೇಜಿಸಲು ರಷ್ಯಾ ನಿರ್ಧರಿಸಿದೆ. ಮಕ್ಕಳು ಮಾಡಿಕೊಳ್ಳಲು ಇಚ್ಛಿಸುವ ಜೋಡಿಗಳಿಗೆ ಹಲವು ಆಫರ್ಗಳನ್ನು ಘೋಷಿಸಲಿದ್ದೇವೆ ಎಂದು ಹೇಳಿದ್ದರು,(ಏಜೆನ್ಸೀಸ್).