

ಬೆಳ್ತಂಗಡಿ: ತುಳುನಾಡ ಸಂಸ್ಕೃತಿ ಉಳಿವಿಗಾಗಿ ಗ್ರಾಮೀಣ ಕ್ರೀಡಾಕೂಟ ಅಗತ್ಯ. ಹಿರಿಯರು ಹಿಂದಿನ ಕಾಲದಿಂದ ಆಚರಿಸಿಕೊಂಡಿ ಬಂದಿರುವ ತುಳುನಾಡ ಸಂಸ್ಕೃತಿ ಆಚರಣೆಗಳು ಮುಂದಿನ ಜನಾಂಗಕ್ಕೆ ತಿಳಿಸಲು ಹಾಗೂ ಉಳಿಸಲು ಗ್ರಾಮೀಣ ಕ್ರೀಡಾಕೂಟ ಪ್ರೇರಣೆಯಾಗುತ್ತದೆ ಎಂದು ರಂಗ ಕಲಾವಿದ, ಸಿನಿಮಾ ನಿರ್ದೇಶಕ ಸುಂದರ್ ರೈ ಮಂದಾರ ಹೇಳಿದರು.
ಬೆಳಾಲು ಮಾಯ ಕುದುರೆಬೈಲು ನಲ್ಕೆತ್ಯಾರ್ ಗದ್ದೆಯಲ್ಲಿ ಮಾಯದ ನಮನ ಯುವ ಬಾಂಧವೆರ್ ಆಶ್ರಯದಲ್ಲಿ ಕೆಸರ‌್ದ ಲೇಸ್ ಬಲೇ ಗೊಬ್ಬುಗ ಕಾರ್ಯಕ್ರಮದಲ್ಲಿ ಗದ್ದೆಗೆ ಕೋಣಗಳನ್ನು ಇಳಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಯ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಶಿವಕುಮಾರ್ ಬಾರಿತ್ತಾಯ ಪಾರಳ ಉದ್ಘಾಟಿಸಿದರು. ಮಾಯ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಜ್ಯೋತಿ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ, ವಸಂತ ಆಚಾರ್ಯ ಆಲಡ್ಕ, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು, ಜಗದೀಶ್ ಆಚಾರ್ಯ ಕಾವಳಕಟ್ಟೆ, ವಿನ್ಸೆಂಟ್ ಮಾಯ ಭಾಗವಹಿಸಿದ್ದರು.
ವಿವಿಧ ಕೆಸರು ಗದ್ದೆ ಆಟೋಟ ಸ್ಪರ್ಧೆಗಳು ನಡೆದವು. ನಮನ ಯುವ ಬಾಂಧವೆರ್ ಸದಸ್ಯರಾದ ಹರೀಶ್ ಆಚಾರ್ಯ, ಆಶ್ಲೇಷ್ ನಾವಳೆ, ವಿಘ್ನೇಶ್ ಕುದ್ರಾಲು, ಪ್ರವೀಣ್ ಕೊಯ್ಯೂರು, ರಂಜನ್ ಮಾಯ, ಗ್ರಾಮಸ್ಥರು ಉಪಸ್ಥಿತರಿದ್ದರು. ಪೋಷಿತ್ ಕೊಕ್ಕಡ ಸ್ವಾಗತಿಸಿ, ನಿರೂಪಿಸಿ, ಶಿವಪ್ರಸಾದ್ ಕಪ್ಪೆಹಳ್ಳ ವಂದಿಸಿದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಗತಿಪರ ಕೃಷಿಕ ಬಾಲಮುಕುಂದ ಭಟ್ ವಳಂಬಲ, ಮಾಯ ಮಹಾದೇವ ದೇವಸ್ಥಾನ ವ್ಯವಸ್ಥಾಪಕ ಶೇಖರ ಗೌಡ ಕೊಲ್ಲಿಮಾರು, ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಅಧ್ಯಕ್ಷ ಕೃಷ್ಣಯ ಆಚಾರ್ಯ, ಭವಾನಿ ಮಾರ್ಪಲು, ರಮೇಶ್ ಆಚಾರ್ಯ ವೇಣೂರು, ರಾಧಾಕೃಷ್ಣ ಮಾಯ ಇದ್ದರು. ಯಕ್ಷಗಾನ ಕಲಾವಿದ ದಿನೇಶ್ ಗೌಡ ಹಿಮರಡ್ಡ, ನಾಟಿ ವೈದ್ಯರಾದ ಬಾಬು ಆಚಾರ್ಯ ನಡು ಉಬರ, ಉಮಾವತಿ ಕಲ್ಲಗುಡ್ಡೆ ಅವರನ್ನು ಗೌರವಿಸಲಾಯಿತು.
------ ಫೋಟೊ-----
ಬಿಇಎಲ್-ಆ-03-ಫೈಲ್-03(1,2):
ಕೆಸರ‌್ದ ಲೇಸ್ ಬಲೇ ಗೊಬ್ಬುಗ ಕಾರ್ಯಕ್ರಮದಲ್ಲಿ ಸಾಧಕರನ್ನು ಗೌರವಿಸಲಾಯಿತು. ಮಾಯ ಮಹಾದೇವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಶಿವಕುಮಾರ್ ಬಾರಿತ್ತಾಯ ಪಾರಳ, ಸಿನಿಮಾ ನಿರ್ದೇಶಕ ಸುಂದರ್ ರೈ ಮಂದಾರ, ಶಿಕ್ಷಕಿ ಜ್ಯೋತಿ, ಮಾಯ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ ಮಾಯ ಇದ್ದರು.