ತುಳುನಾಡಿನ ಆಚರಣೆಯಲ್ಲಿ ವೈಜ್ಞಾನಿಕತೆ: ಮೀನಾಕ್ಷಿ ಅಭಿಮತ

Bel_Aati onji nenpu
Published on

ಬೆಳ್ತಂಗಡಿ: ವೈಚಾರಿಕ ಹಾಗೂ ವೈಜ್ಞಾನಿಕ ವಿಚಾರಗಳನ್ನು ಒಳಗೊಂಡ ತುಳುನಾಡಿನ ಆಚರಣೆಗಳು ಬಹು ವಿಶಿಷ್ಟವಾಗಿದೆ. ಇಂದಿನ ಕಾಲದ ಜನರು ತುಳುನಾಡಿನ ಆಚರಣೆಗಳ ಮಹತ್ವ ತಿಳಿದುಕೊಂಡು ಮುಂದಿನ ಪೀಳಿಗೆಗೆ ಹೇಳಿ ಕೊಡಬೇಕು ಎಂದು ವಾಣಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಮೀನಾಕ್ಷಿ ಹೇಳಿದರು.

ವಾಣಿ ಪದವಿ ಪೂರ್ವ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ನಡೆದ ಆಟಿ ಒಂಜಿ ನೆಂಪು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಣಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ ಚೆನ್ನೆಮಣೆ ಆಟ ಆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇವತ್ತಿನ ಜನರು ಪ್ರಕೃತಿದತ್ತ ಆಹಾರದ ಬದಲು ಹೆಚ್ಚಾಗಿ ರೆಸ್ಟೋರೆಂಟ್ ಆಹಾರವನ್ನು ತಿನ್ನುತ್ತಾರೆ. ಹಾಗಾಗಿ ಬೇರೆ ಬೇರೆ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಕಷ್ಟಪಟ್ಟು ದುಡಿದು ಉತ್ತಮ ಆಹಾರ ತಿಂದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಉಪಸ್ಥಿತರಿದ್ದರು. ತುಳು ಸಂಘದ ಸಂಯೋಜಕ ಮಹಾಬಲ ಗೌಡ ಸ್ವಾಗತಿಸಿದರು. ಉಪನ್ಯಾಸಕ ಬೆಳ್ಳಿಯಪ್ಪ ಕೆ. ವಂದಿಸಿದರು. ಅನುಕ್ಷಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net