ಬಜರಂಗದಳ ಸಂಯೋಜಕರಾಗಿ ನೇಮಕ

Kdb_Ashwith
Published on

ಕಡಬ: ಪ್ರಖಂಡ ಬಜರಂಗದಳದ ಸಂಯೋಜಕರಾಗಿ ವಕೀಲ ಅಶ್ವಿತ್ ಕಂಡಿಗ ಹಾಗೂ ಸಹ ಸಂಯೋಜಕರಾಗಿ ದಯಾನಂದ ಅಡ್ಡಹೊಳೆ ಆಯ್ಕೆಯಾಗಿದ್ದಾರೆ.

ಈ ಆಯ್ಕೆ ಪ್ರಕ್ರಿಯೆ ಶುಕ್ರವಾರ ಪುತ್ತೂರಿನ ಶ್ರೀ ಗುರು ರಾಘವೇಂದ್ರ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್‌ನ ಜಿಲ್ಲಾ ಬೈಠಕ್‌ನಲ್ಲಿ ನಡೆಯಿತು. ವಿಶ್ವ ಹಿಂದು ಪರಿಷತ್ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಜವಾಬ್ದಾರಿಗಳನ್ನು ಘೋಷಿಸಿದರು. ವಿಹಿಂಪ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಬಜರಂಗದಳದ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net