ತೃಕ್ಕನ್ನಾಡ್ ಕ್ಷೇತ್ರದಲ್ಲಿ ಪಿತೃಬಲಿ ತರ್ಪಣ

Ksd_Tarpana
Published on

ಕಾಸರಗೋಡು: ಕರ್ಕಾಟಕ ಅಮವಾಸ್ಯೆ ಹಿನ್ನೆಲೆಯಲ್ಲಿ ಐತಿಹಾಸಿಕ ಬೇಕಲ ಸನಿಹದ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಪಿತೃಬಲಿ ತರ್ಪಣ ಶನಿವಾರ ಜರುಗಿತು.

ಕಾಸರಗೋಡು, ಕಣ್ಣೂರು ಅಲ್ಲದೆ ಇತರ ಜಿಲ್ಲೆಗಳಿಂದಲೂ ಪಿತೃಬಲಿ ತರ್ಪಣಕ್ಕಾಗಿ ತೃಕ್ಕನ್ನಾಡಿಗೆ ಜನರು ಆಗಮಿಸಿದ್ದರು. ಬೆಳಗ್ಗೆ ಉಷಾಪೂಜೆ ನಂತರ 5.30ರಿಂದ ಬಲಿತರ್ಪಣ ಆರಂಭಗೊಂಡಿತು. ದೇವಸ್ಥಾನ ಮುಖ್ಯ ಅರ್ಚಕ ಬ್ರಹ್ಮಶ್ರೀ ನವೀನಚಂದ್ರ ಕಾಯರ್ತಾಯ ಹಾಗೂ ಅರ್ಚಕ ರಾಜೇಂದ್ರ ಅರಳಿತ್ತಾಯ ನೇತೃತ್ವದಲ್ಲಿ ದೇವಸ್ಥಾನದ ಎದುರು ಭಾಗದ ಸಮುದ್ರ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ವಿಶಾಲ ಚಪ್ಪರದಲ್ಲಿ ಪಿತೃಬಲಿ ತರ್ಪಣ ನಡೆಯಿತು.

ಸಮುದ್ರ ಪ್ರಕ್ಷುಬ್ಧಗೊಂಡಿದ್ದ ಹಿನ್ನೆಲೆಯಲ್ಲಿ ರಕ್ಷಣಾಕಾರ್ಯ ಚುರುಕುಗೊಳಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸ್, ಅಗ್ನಿಶಾಮಕ ದಳ, ಕರಾವಳಿ ಪೊಲೀಸ್ ಹಾಗೂ ಸಂಘ ಸಂಸ್ಥೆಗಳ ಸ್ವಯಂಸೇವಕರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net