More

    ರಿವೀಲ್​ ಆಯ್ತು ಬಹುನಿರೀಕ್ಷಿತ ‘ಲಿಯೋ’ ಚಿತ್ರದ ರನ್​ಟೈಮ್​

    ತಮಿಳುನಾಡು: ದಿನಗಳು ಕಳೆದಂತೆ ತಮಿಳು ಚಿತ್ರರಂಗದ ಸ್ಟಾರ್​ ನಟ ದಳಪತಿ ವಿಜಯ್​ ಮತ್ತು ತ್ರಿಶಾ ಕೃಷ್ಣನ್​ ಅಭಿನಯದ ಬಹುನಿರೀಕ್ಷಿತ ‘ಲಿಯೋ’ ಸಿನಿಮಾ ಸದ್ಯ ಹೊಚ್ಚ ಹೊಸ ಪೋಸ್ಟರ್​ಗಳ ಮುಖೇನ ಭಾರತೀಯ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಲಭಿಸಿದ್ದು, ಸಿನಿಮಾದ ರನ್​ಟೈಮ್​ ಅನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ.

    ಇದನ್ನೂ ಓದಿ: ಕಣ್ಣು ಮಿಟುಕಿಸುವಷ್ಟರಲ್ಲಿ ಗಣೇಶನ ಮುಂದಿಟ್ಟಿದ್ದ 11 ಕೆಜಿ ಲಾಡು ಮಾಯ: ಸಿಸಿಟಿವಿಯಲ್ಲಿ ಅಚ್ಚರಿಯ ದೃಶ್ಯ ಸೆರೆ

    ‘ಲಿಯೋ’ ಸಿನಿಮಾದ ಪ್ರಚಾರದ ಕೆಲಸಗಳು ಸದ್ಯ ಬಿರುಸಿನಿಂದ ಸಾಗುತ್ತಿದ್ದು, ವಿಜಯ್​ ಅವರ ಆಕರ್ಷಕ ಪೋಸ್ಟರ್​ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರವು ಇದೇ ಅಕ್ಟೋಬರ್ 19 ರಂದು ವಿಶ್ವದಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

    ಲಿಯೋ ಸಿನಿಮಾದ ರನ್‌ಟೈಮ್‌ 2 ಗಂಟೆ 39 ನಿಮಿಷಗಳ ಕಾಲ ಇರಲಿದೆ ಎಂದು ಚಿತ್ರತಂಡ ತಿಳಿಸಿದ್ದು, ಇದು ಪರಿಪೂರ್ಣ ಅವಧಿಯಾಗಿದೆ. ಸಿನಿಮಾ ಬಿಡುಗಡೆಗೊಂಡ ನಂತರ ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷೆಗಳಿಗೂ ಮೀರಿ ದಾಖಲೆಯನ್ನು ಬರೆಯಲಿದೆ ಎಂಬ ಸುದ್ದಿ ಸದ್ಯ ಕಾಲಿವುಡ್​ ಅಂಗಳದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ಇದನ್ನೂ ಓದಿ:  ತನಿಖಾ ಸಂಸ್ಥೆಗಳು ಈಗಾಗಲೇ ಉತ್ತರಿಸಿರುವ ಪ್ರಶ್ನೆಗಳನ್ನೇ ಪದೇ ಪದೇ ಕೇಳುತ್ತಿವೆ: ಅಭಿಷೇಕ್ ಬ್ಯಾನರ್ಜಿ ಗರಂ

    ಎಸ್.ಎಸ್. ಲಲಿತ್ ಕುಮಾರ್ ನಿರ್ಮಾಣದ ಈ ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್, ಸೂರ್ಯ, ಅರ್ಜುನ್​ ಸರ್ಜಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).

    ‘ನಾನು ಅವಳ ಜತೆಗೆ ಮೃತಪಟ್ಟಿದ್ದೇನೆ’; ಪುತ್ರಿಯ ಸಾವು ನೆನೆದು ವಿಜಯ್ ಭಾವನಾತ್ಮಕ ಪೋಸ್ಟ್​

    ರಾಜ್ಯೋತ್ಸವ ರಸಪ್ರಶ್ನೆ - 22

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts