ಇಸ್ಲಮಾಬಾದ್: ಭಾರತದ ಅವಿಭಾಜ್ಯ ಅಂಗವೆನಿಸಿದ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸುವುದನ್ನು ಭಾರತ ತೀವ್ರವಾಗಿ ವಿರೋಧಿಸಿದ್ದರೂ, ಅದನ್ನು ಕಡೆಗಣಿಸಿ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ ವಿಧಾನಸಭೆಗೆ ಚುನಾವಣೆಯನ್ನು ಪಾಕ್ ಸರ್ಕಾರ ನಿನ್ನೆ ನಡೆಸಿತ್ತು. ಇದರ ಫಲಿತಾಂಶ ಪ್ರಕಟವಾಗಿದ್ದು, ಇಮ್ರಾನ್ ಖಾನ್ ಅವರ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಾರ್ಟಿ (ಪಿಟಿಐ)ಗೆ ಭಾರಿ ಮುಖಭಂಗವಾಗಿದೆ.
ಈ ಪ್ರಾಂತ್ಯ ಬಹುತೇಕ ಮಿಲಿಟರಿ ಹಿಡಿತದಲ್ಲಿದ್ದು, 23 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿದೆ. ಇದು ಮೂರನೇ ಅವಧಿಯದಾಗಿದ್ದು, ಭಾನುವಾರ ಮತದಾನ ನಡೆದಿತ್ತು. ತೀವ್ರ ವಿರೋಧದ ನಡುವೆ ಚುನಾವಣೆ ನಡೆಸಿದರೂ, ಬಹುಮತ ಪ್ರಾಪ್ತಿಯಾಗದ ಕಾರಣ ಸರ್ಕಾರ ರಚನೆ ಕಷ್ಟವೆನಿಸಿದೆ.
ಇದನ್ನೂ ಓದಿ: ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನ; ಭಾರತ ಆಕ್ರೋಶ..
ಮಾಧ್ಯಮ ವರದಿಗಳ ಪ್ರಕಾರ, 23 ಸ್ಥಾನಗಳ ಪೈಕಿ 8 ರಿಂದ 9 ಸ್ಥಾನಗಳು ಪಿಟಿಐಗೆ ಸಿಕ್ಕರೆ, 6 ರಿಂದ 7 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಕಂಡಿದ್ದಾರೆ. ಹೀಗಾಗಿ ಸರ್ಕಾರ ರಚನೆಗೆ ಯಾವುದೇ ಪಕ್ಷಕ್ಕೂ ಅಲ್ಲಿ ಬಹುಮತ ಪ್ರಾಪ್ತವಾಗಿಲ್ಲ. ಜಿಯೋ ಟಿವಿ ವರದಿ ಪ್ರಕಾರ, ಪಿಟಿಐಗೆ 8, ಪಿಪಿಪಿಗೆ 5, ಪಿಎಂಎಲ್-ಎನ್ಗೆ 2, ಜೆಐಯು-ಎಫ್ಗೆ , ಎಂಡಬ್ಲ್ಯುಎಂಗೆ ತಲಾ ಒಂದು ಸ್ಥಾನ ಸಿಕ್ಕಿವೆ. (ಏಜೆನ್ಸೀಸ್)
ಬಿಹಾರ ವಿಧಾನಸಭೆಯ ನೂತನ್ ಸ್ಪೀಕರ್ ಆಗಲಿರುವ ನಂದ ಕಿಶೋರ್ ಯಾದವ್ ಯಾರು?