ಶಿಸ್ತು ಅಳವಡಿಸಿಕೊಂಡರೆ ವೃತ್ತಿ ಯಶಸ್ಸು: ಸುಮಾ ಅಶೋಕ್ ಗಸ್ತಿ ಅಭಿಪ್ರಾಯ

rudset
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಪ್ರತಿಯೊಬ್ಬರು ವೃತಿ ಜೀವನದಲ್ಲಿ ತಮ್ಮದೇ ಆದ ಶಿಸ್ತು ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು. ದುರಭ್ಯಾಸಗಳಿಂದ ದೂರ ಇರಬೇಕು. ಕ್ಷೌರಿಕ ವೃತಿಯಲ್ಲಿ ಹೊಸ ಬದಲಾವಣೆಗಳು ಆಗುತ್ತಿವೆ. ಅದನ್ನು ಅಳವಡಿಸಿಕೊಂಡು ನಮ್ಮ ವೃತ್ತಿ ಬಗ್ಗೆ ಹೆಮ್ಮೆ ಇರಬೇಕು. ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರುಡ್‌ಸೆಟ್ ಸಂಸ್ಥೆಯಲ್ಲಿ ಅತ್ಯತ್ತಮ ಸೌಲಭ್ಯಗಳೊಂದಿಗೆ ಉಚಿತ ತರಬೇತಿ ನೀಡಿ ಸವಿತಾ ಸಮಾಜದ ಹುಡುಗರಿಗೆ ಅನುಕೂಲ ಮಾಡಿದ್ದಾರೆ. ಅವರಿಗೆ ಕೃತಜ್ಞತೆಯನ್ನು ನೀವೇ ಸ್ವ-ಉದ್ಯೋಗಿಗಳಾಗಿ ಯಶಸ್ಸು ಕಾಣುವುದರ ಮೂಲಕ ಸಲ್ಲಿಸಬೇಕು ಎಂದು ರಾಜ್ಯಸಭಾ ಮಾಜಿ ಸದಸ್ಯ ರಾಯಚೂರಿನ ದಿ.ಅಶೋಕ್ ಗಸ್ತಿಯವರ ಪತ್ನಿ ಸುಮಾ ಅಶೋಕ್ ಗಸ್ತಿ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನ ನಡೆದ ಮೆನ್ಸ್ ಪಾರ್ಲರ್ ಸಲೂನ್ ಉದ್ಯಮ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತ್ತರಿಸಿ ಮಾತನಾಡಿದರು.

ಅತಿಥಿಯಾಗಿದ್ದ ರಾಘವೇಂದ್ರ ಇಟಗಿ ಮಾತನಾಡಿ, ವೃತ್ತಿಯಲ್ಲಿ ಹೊಸತನ ಇಟ್ಟುಕೊಂಡು ಮುಂದುವರಿಯಿರಿ ಎಂದರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದರು.

ಅತಿಥಿ ಉಪನ್ಯಾಸಕ ರವಿ ಕುಮಾರ್ ಕಡೂರು ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿದರು ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. 32 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು, ಪ್ರಭಾಕರ್, ವರಪ್ರಸಾದ್ ತರಬೇತಿಯ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net