ಮುಂಬೈ: ಅಲ್ಕೆಮ್ ಲ್ಯಾಬರೋಟರೀಸ್ ಲಿಮಿಟೆಡ್ (Alkem Laboratories Ltd.) ಕಂಪನಿ ವಿರುದ್ಧ 1000 ಕೋಟಿ ರೂಪಾಯಿಗೂ ಅಧಿಕ ಮೊತ್ತದ ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೆ, ಈ ಕಂಪನಿಯು ವೈದ್ಯರಿಗೆ ಹಣ ಪಾವತಿಸಿ ತನ್ನ ಔಷಧಿಗಳನ್ನು ಖರೀದಿಸಲು ಶಿಫಾರಸು ಮಾಡಲು ಹೇಳುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಈ ಕಂಪನಿಯ ಷೇರುಗಳು ಕುಸಿತ ಕಂಡಿವೆ.
ಕಂಪನಿಯು ಬೋಗಸ್ ಕ್ಲೇಮ್ ಮಾಡುವ ಮೂಲಕ 1,000 ಕೋಟಿ ರೂ.ಗೂ ಹೆಚ್ಚು ತೆರಿಗೆಯನ್ನು ವಂಚಿಸಿದೆ. ವೈದ್ಯರಿಗೆ ಹಣ ಪಾವತಿಸಿ ತನ್ನ ಕಂಪನಿಯ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆಯುವಂತೆ ಹೇಳುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ ಎನ್ನಲಾಗಿದೆ.
1000 ಕೋಟಿ ರೂ. ತೆರಿಗೆ ವಂಚನೆ ಆರೋಪದಿಂದಾಗಿ ಫಾರ್ಮಾ ಕಂಪನಿಯ ಹೂಡಿಕೆದಾರರಲ್ಲಿ ಆತಂಕ ಮೂಡಿದೆ. ಈ ಕಂಪನಿಯ ಷೇರುಗಳ ಬೆಲೆ ಸೋಮವಾರ 10% ಕುಸಿದವು. ಈ ಕಂಪನಿಯಲ್ಲಿ ಆದಾಯ ತೆರಿಗೆ ಇಲಾಖೆಯು 1000 ಕೋಟಿ ರೂ. ತೆರಿಗೆ ವಂಚನೆಯನ್ನು ಪತ್ತೆ ಮಾಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಮಧ್ಯಾಹ್ನ 1:15 ರ ಹೊತ್ತಿಗೆ ಷೇರುಗಳು ಸುಮಾರು 13 ಪ್ರತಿಶತದಷ್ಟು ಕುಸಿದವು. ಕಂಪನಿಯ ಷೇರುಗಳು ಕಳೆದ ಆರು ತಿಂಗಳಲ್ಲಿ ಶೇಕಡಾ 28 ಕ್ಕಿಂತ ಹೆಚ್ಚು ಆದಾಯವನ್ನು ನೀಡಿವೆ. ಕಳೆದ ಒಂದು ವರ್ಷದಲ್ಲಿ ಶೇಕಡ 45ಕ್ಕಿಂತ ಹೆಚ್ಚಿನ ಲಾಭ ನೀಡಿವೆ.
ಮೂಲಗಳ ಪ್ರಕಾರ, ಕಂಪನಿಯು ಬೋಗಸ್ ಕ್ಲೈಮ್‌ಗಳ ಮೂಲಕ 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ತೆರಿಗೆಯನ್ನು ವಂಚಿಸಿದೆ. ಈ ಕಂಪನಿಯು ವೈದ್ಯರಿಗೆ ಹಣ ಪಾವತಿಸಿ ಔಷಧಿಯನ್ನು ಪ್ರಿಸ್ಕ್ರಿಪ್ಷನ್‌ನಲ್ಲಿ ಬರೆಯುವಂತೆ ಹೇಳುತ್ತಿತ್ತು ಎಂಬುದು ಆದಾಯ ತೆರಿಗೆ ಇಲಾಖೆ ತನಿಖೆಯಿಂದ ತಿಳಿದುಬಂದಿದೆ. ಇದಕ್ಕಾಗಿ ಕಂಪನಿ ವೈದ್ಯರಿಗೆ ನೂರಾರು ಕೋಟಿ ರೂ. ವ್ಯಯಿಸಿದೆ. ಮೂಲಗಳ ಪ್ರಕಾರ ಅಲ್ಕೆಮ್ ಲ್ಯಾಬ್ಸ್ ಭಾರೀ ದಂಡವನ್ನು ಇದಕ್ಕಾಗಿ ತೆರಬೇಕಾಗಬಹುದು.
ಮಧ್ಯಾಹ್ನ 1:00 ಗಂಟೆಗೆ ಕಂಪನಿಯ ಷೇರುಗಳ ಬೆಲೆ ಶೇ. 10 ರಷ್ಟು ಕುಸಿತದೊಂದಿಗೆ 4879.05 ರೂ. ಈ ಷೇರಿನ 52 ವಾರದ ಗರಿಷ್ಠ ಬೆಲೆ ರೂ 5,519.10 ಮತ್ತು ಕನಿಷ್ಠ ಬೆಲೆ ರೂ 3042.30.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಆದಾಯ ತೆರಿಗೆ ಇಲಾಖೆಯು ಅಲ್ಕೆಮ್ ಕಂಪನಿಯಿಂದ ಭಾರಿ ತೆರಿಗೆ ವಂಚನೆಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ನಂತರ ಕಚೇರಿಗಳು ಮತ್ತು ಆವರಣದಲ್ಲಿ ಸಮೀಕ್ಷೆ ನಡೆಸಿತ್ತು. ಇದಾದ ನಂತರ ಹಲವು ತಿಂಗಳುಗಳ ಕಾಲ ಇಲಾಖೆ ಕೂಲಂಕುಷವಾಗಿ ತನಿಖೆ ನಡೆಸಿತ್ತು. ಈ ಅವಧಿಯಲ್ಲಿ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು ಮತ್ತು ಆಯವ್ಯಯವನ್ನು ಪರಿಶೀಲಿಸಲಾಯಿತು.
2 ಸರ್ಕಾರಿ ಬ್ಯಾಂಕ್ ಷೇರುಗಳ ಖರೀದಿಗೆ ಬ್ರೋಕರೇಜ್ ಸಂಸ್ಥೆ ಸಲಹೆ: ಹೀಗಿದೆ ಟಾರ್ಗೆಟ್ ಪ್ರೈಸ್…
ಫಿನ್ಟೆಕ್ ಕಂಪನಿಯ ಷೇರು ಒಂದೇ ದಿನದಲ್ಲಿ 15% ಏರಿಕೆ: ಇದಕ್ಕೆ ಕಾರಣವಾದ ಮೂರು ಒಪ್ಪಂದಗಳ ವಿವರ ಹೀಗಿದೆ…
ರೈಲು ಪ್ರಯಾಣ ದರ ಇಳಿಸುವ ಮೂಲಕ ಪ್ರಯಾಣಿಕರಿಗೆ ಕೊಡುಗೆ ನೀಡಿದ ರೈಲ್ವೆ ಮಂಡಳಿ