More

    ರೈಲು ಪ್ರಯಾಣ ದರ ಇಳಿಸುವ ಮೂಲಕ ಪ್ರಯಾಣಿಕರಿಗೆ ಕೊಡುಗೆ ನೀಡಿದ ರೈಲ್ವೆ ಮಂಡಳಿ

    ಮುಂಬೈ: ರೈಲ್ವೆ ಮಂಡಳಿಯು ಪ್ರಯಾಣಿಕರಿಗೆ ಕನಿಷ್ಠ ದರವನ್ನು ಕಡಿಮೆ ಮಾಡಿದೆ. ಈ ಹಿಂದೆ ರೈಲು ಪ್ರಯಾಣದ ಕನಿಷ್ಠ ದರವನ್ನು 10 ರೂಪಾಯಿಯಿಂದ 30 ರೂಪಾಯಿಗೆ ಹೆಚ್ಚಿಸಿತ್ತು. ಇದೀಗ ಮತ್ತೆ 10 ರೂ.ಗೆ ಇಳಿಸಲಾಗಿದೆ.

    ಪ್ರಯಾಣಿಕರಿಗೆ ಸೌಲಭ್ಯಗಳನ್ನು ಒದಗಿಸಲು ಭಾರತೀಯ ರೈಲ್ವೇ ಒಂದರ ನಂತರ ಒಂದರಂತೆ ಹಲವಾರು ಘೋಷಣೆಗಳನ್ನು ಮಾಡುತ್ತಿದೆ. ಕೆಲವೇ ವರ್ಷಗಳಲ್ಲಿ ರೈಲ್ವೆ ಮೂಲಸೌಕರ್ಯದಲ್ಲಿ ತ್ವರಿತ ಬದಲಾವಣೆಗಳನ್ನು ಮಾಡಲಾಗಿದೆ. ರೈಲುಗಳನ್ನು ತಾಂತ್ರಿಕವಾಗಿ ಬಲಗೊಳಿಸಲಾಗುತ್ತಿದೆ. ಇದೀಗ ರೈಲ್ವೇ ಮಂಡಳಿಯೂ ಪ್ರಯಾಣಿಕರಿಗೆ ಕನಿಷ್ಠ ದರವನ್ನು ಕಡಿತಗೊಳಿಸಿದೆ (ರೈಲ್ವೆ ದರ ಕಡಿತ).

    ಭಾರತದಲ್ಲಿ ರೈಲ್ವೆಯನ್ನು ಅಗ್ಗದ ಸಾರಿಗೆ ಸಾಧನವೆಂದು ಪರಿಗಣಿಸಲಾಗಿದೆ. ಆದರೆ, ಕೋವಿಡ್​ ಅವಧಿಯಲ್ಲಿ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲಾಗಿತ್ತು. 2020ರಲ್ಲಿ ಕೋವಿಡ್​ ಹರಡುವ ಮೊದಲು ಕನಿಷ್ಠ ದರ ಕೇವಲ 10 ರೂ. ಇತ್ತು.

    ರೈಲ್ವೆ ಕನಿಷ್ಠ ಪ್ರಯಾಣ ದರವನ್ನು ಮೂರು ಪಟ್ಟು, ಅಂದರೆ 10 ರಿಂದ 30 ರೂಪಾಯಿ ಹೆಚ್ಚಿಸಲಾಯಿತು. ಇದನ್ನು ವಿರೋಧಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದರು. ಆದರೆ ಇದೀಗ ಮತ್ತೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ರೈಲ್ವೆ ಕನಿಷ್ಠ ದರವನ್ನು 10 ರೂ.ಗೆ ಇಳಿಸಿದೆ.

    ರೈಲ್ವೆಯ ಈ ನಿರ್ಧಾರದಿಂದ ಪ್ರತಿ ದಿನ ರೈಲಿನಲ್ಲಿ ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕನಿಷ್ಠ ಪ್ರಯಾಣ ದರವನ್ನು ಕಡಿತಗೊಳಿಸುವಂತೆ ಪ್ರಯಾಣಿಕರ ಸಂಘಟನೆಗಳು ರೈಲ್ವೇಗೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದವು.

    ಸಮಸ್ಯೆಯ ಸುಳಿಯಲ್ಲಿರುವ ಪೇಟಿಎಂ ಷೇರುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ?: ಮಾರುಕಟ್ಟೆ ತಜ್ಞರು ಏನು ಹೇಳುತ್ತಾರೆ?

    ಟಾಟಾ ಗ್ರೂಪ್‌ನ ಈ ಮೂರು ಷೇರುಗಳನ್ನು ಖರೀದಿಸಲು ಬ್ರೋಕರೇಜ್ ಸಂಸ್ಥೆಗಳ ಸಲಹೆ; ಹೀಗಿದೆ ಟಾರ್ಗೆಟ್​ ಪ್ರೈಸ್​

    ಫಾರ್ಮಾ ಕಂಪನಿಯಿಂದ 5:1 ಸ್ಟಾಕ್ ವಿಭಜನೆ: ಎಕ್ಸ್-ಸ್ಪ್ಲಿಟ್ ಷೇರು ಬೆಲೆ 10% ಅಪ್ಪರ್ ಸರ್ಕ್ಯೂಟ್‌ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts