More

    ವಿಶೇಷ ರೈಲುಗಳ ಸಂಚಾರ

    ಹುಬ್ಬಳ್ಳಿ : ಯಶವಂತಪುರ ಬೈಪಾಸ್ ಮೂಲಕ ಎಸ್​ಎಸ್​ಎಸ್ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ಮಧ್ಯೆ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ.

    ಎಸ್​ಎಸ್​ಎಸ್ ಹುಬ್ಬಳ್ಳಿರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಏಪ್ರಿಲ್ 6 ರಿಂದ ಜೂನ್ 29 ರವರೆಗೆ ಪ್ರತಿ ಶನಿವಾರ ಬೆಳಗ್ಗೆ 6.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 6.15ಕ್ಕೆ ರಾಮೇಶ್ವರಂ ನಿಲ್ದಾಣ ತಲುಪಲಿದೆ.

    ರಾಮೇಶ್ವರಂ- ಎಸ್​ಎಸ್​ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ರೈಲು ಏಪ್ರಿಲ್ 7 ರಿಂದ ಜೂನ್ 30 ರವರೆಗೆ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ರಾಮೇಶ್ವರಂ ನಿಲ್ದಾಣದಿಂದ ಹೊರಟು ಮಾರನೇ ದಿನ ರಾತ್ರಿ 7.25ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

    ಈ ವಿಶೇಷ ರೖಲುಗಳು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಮಕ್ಕಲ್, ಕರೂರ್, ತಿರುಚಿರಾಪಳ್ಳಿ, ಪುದುಕ್ಕೊಟೈ, ಕಾರೈಕುಡಿ, ಮನಮದುರೈ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಇರಲಿವೆ.

    ಸಂತ್ರಾಗಾಚಿ -ಹುಬ್ಬಳ್ಳಿ ವಿಶೇಷ ರೈಲು : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಸಂತ್ರಾಗಾಚಿಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಾಗುತ್ತಿದೆ.

    ಮಾ. 27ರಂದು ಸಂತ್ರಾಗಾಚಿ ನಿಲ್ದಾಣದಿಂದ ಸಂಜೆ 6 ಗಂಟೆಗೆ ಹೊರಡುವ ಈ ರೈಲು, ಮಾ. 29 ರಂದು ಬೆಳಗ್ಗೆ 8 ಗಂಟೆಗೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

    ಮರಳಿ ಮಾ. 30 ರಂದು ಬೆಳಗ್ಗೆ 10.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಏಪ್ರಿಲ್ 1 ರಂದು ಬೆಳಗಿನಜಾವ 4.20ಕ್ಕೆ ಸಂತ್ರಗಾಚಿ ನಿಲ್ದಾಣವನ್ನು ಈ ರೈಲು ತಲುಪಲಿದೆ.

    ಈ ವಿಶೇಷ ರೈಲು ಖರಗ್ಪುರ, ಟಾಟಾನಗರ, ಚಕ್ರಧರಪುರ, ರೂರ್ಕೆಲಾ, ಜಾರ್ಸಗುಡ್, ಬಿಲಾಸ್ಪುರ, ರಾಯಪುರ, ಗೊಂಡಿಯಾ, ಬಲ್ಹಾರ್ಷಾ, ಮಂಚಿರ್ಯುಲ್, ಕಾಜಿಪೇಟೆ, ಸಿಕಂದರಾಬಾದ್, ರಾಯಚೂರು, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ – ಗದಗ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

    ಹೋಳಿ ಹಬ್ಬಕ್ಕಾಗಿ ರೈಲು ಸಂಚಾರ : ಹೋಳಿ ಹಬ್ಬದ ಅಂಗವಾಗಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಎಸ್​ಎಸ್​ಎಸ್ ಹುಬ್ಬಳ್ಳಿ – ಅಹ್ಮದಾಬಾದ್ – ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣಗಳ ಮಧ್ಯೆ ಒಂದು ಟ್ರಿಪ್ ವಿಶೇಷ ರೈಲು ಸಂಚಾರ ಪ್ರಾರಂಭಿಸಲಾಗುತ್ತಿದೆ. ಮಾ. 24ರಂದು ರಾತ್ರಿ 7.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿಯಿಂದ ಹೊರಡುವ ಈ ರೈಲು, ಮಾರನೇ ದಿನ ರಾತ್ರಿ 7.30ಕ್ಕೆ ಅಹ್ಮದಾಬಾದ್ ತಲುಪಲಿದೆ. ಮರಳಿ ಮಾ. 25ರಂದು ರಾತ್ರಿ 9.25ಕ್ಕೆ ಅಹ್ಮದಾಬಾದ್​ನಿಂದ ಹೊರಡುವ ರೈಲು, ಮಾರನೇ ದಿನ ರಾತ್ರಿ 7.45ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts