More

    ಮತ್ತೆ ಹಳಿಗೆ ಬಂದ ರೈಲ್ವೆ ಸಂಬಂಧಿ ಷೇರುಗಳು: ಬುಧವಾರ ಕುಸಿತ ಕಂಡಿದ್ದ ಸ್ಟಾಕ್​ಗಳಲ್ಲಿ ಬಂಪರ್ ಏರಿಕೆ

    ಮುಂಬೈ: ಗುರುವಾರದ ವಹಿವಾಟಿನಲ್ಲಿ ರೈಲ್ವೆ ಸಂಬಂಧಿತ ಷೇರುಗಳಲ್ಲಿ ಬಂಪರ್ ಏರಿಕೆ ಕಂಡುಬಂದಿದೆ. ಮುಖ್ಯವಾಗಿ ರೈಲ್ವೇ ಸಂಬಂಧಿತ ಸ್ಟಾಕ್‌ಗಳಾದ ಐಆರ್‌ಎಫ್‌ಸಿ, ಆರ್‌ವಿಎನ್‌ಎಲ್, ಐಆರ್‌ಕಾನ್ ಇಂಟರ್‌ನ್ಯಾಶನಲ್, ಟ್ಯಾಕ್ಸ್‌ಮಾಕೊ ರೈಲ್, ರೈಲ್‌ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಟಿಟಾಗಢ್ ರೈಲ್ವೇ ಸಿಸ್ಟಮ್ ಕಂಪನಿಯ ಷೇರುಗಳ ಬೆಲೆ ಅಂದಾಜು 12 ಪ್ರತಿಶತದಷ್ಟು ಏರಿಕೆ ಕಂಡಿದೆ.

    ಈ ರೈಲ್ವೇ ಸ್ಟಾಕ್‌ಗಳ ಪೈಕಿ ಐಆರ್‌ಎಫ್‌ಸಿ ಮುಂಚೂಣಿಯಲ್ಲಿದೆ, ಇದು ಅಂದಾಜು 12 ಪ್ರತಿಶತದಷ್ಟು ಏರಿಕೆಯನ್ನು ದಾಖಲಿಸಿದೆ, ಈ ಮೂಲಕ ಈ ಸ್ಟಾಕ್ ಬೆಲೆ ರೂ 141 ರ ಮಟ್ಟವನ್ನು ತಲುಪಿದೆ.

    ಇದರ ಹೊರತಾಗಿ, ಇಂದು ಆರ್​ವಿಎನ್​ಎಲ್​ ಸ್ಟಾಕ್‌ನಲ್ಲಿ ಅಂದಾಜು 9 ಪ್ರತಿಶತದಷ್ಟು ಏರಿಕೆ ಕಂಡುಬಂದಿದೆ. ಆರ್‌ವಿಎನ್‌ಎಲ್ ಷೇರುಗಳ ಏರಿಕೆಗೆ ಪ್ರಮುಖ ಕಾರಣವೆಂದರೆ ಕಂಪನಿಯು 280 ಕೋಟಿ ರೂಪಾಯಿ ಮೌಲ್ಯದ ಆರ್ಡರ್ ಬುಕ್ ಪಡೆದಿರುವುದು ಎಂದು ಪರಿಗಣಿಸಲಾಗಿದೆ.

    RVNL ಕಂಪನಿಯು 32 kW ಮತ್ತು 220 kW ಟ್ರಾನ್ಸ್ಮಿಷನ್ ಲೈನ್ ಮತ್ತು ಅದರ ಸಂಯೋಜಿತ ಫೀಡರ್ ಬೇಸ್​ಗಾಗಿ ಮಧ್ಯಪ್ರದೇಶ ಪವರ್ ಕಾರ್ಪೊರೇಷನ್, ಜಬಲ್ಪುರದಿಂದ 173.98 ಕೋಟಿ ರೂಪಾಯಿಯ ಆರ್ಡರ್​ ಪಡೆದುಕೊಂಡಿದೆ.

    ಆರ್​ವಿಎನ್​ಎಲ್​ ಮತ್ತು ಸಲಸರ್​ ಟೆಕ್ನೋ ಜಂಟಿ ಉದ್ಯಮವಾಗಿ ಈ ಆದೇಶವನ್ನು ಸ್ವೀಕರಿಸಿವೆ. ಇದರಲ್ಲಿ RVNL ಕಂಪನಿಯು 51 ಪ್ರತಿಶತ ಮತ್ತು ಸಲಾಸರ್ ಟೆಕ್ನೋ ಕಂಪನಿಯು 49 ಪ್ರತಿಶತವನ್ನು ಹೊಂದಿದೆ. ಈ ಒಪ್ಪಂದವನ್ನು 18 ತಿಂಗಳಲ್ಲಿ ಪೂರ್ಣಗೊಳಿಸಬೇಕು.

    ಇದಲ್ಲದೆ, ಎಂಪಿ ವೆಸ್ಟ್ ರೀಜನ್ ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಷನ್ ಕಂಪನಿಯಿಂದ ಆರ್​ವಿಎನ್​ಎಲ್​ 106.37 ಕೋಟಿ ರೂ.ಗಳ ಆರ್ಡರ್ ಪಡೆದಿದ್ದು, 24 ತಿಂಗಳಲ್ಲಿ ಪೂರ್ಣಗೊಳಿಸಬೇಕಿದೆ.

    ಇದಲ್ಲದೆ, ರೈಲ್ ಟೈಲ್ ಸ್ಟಾಕ್ ನಲ್ಲಿ ಶೇ. 10ರಷ್ಟು ಏರಿಕೆ ಕಂಡುಬಂದಿದೆ. ಈ ಮೂಲಕ ಈ ಷೇರು ಬೆಲೆ 339 ರ ಮಟ್ಟವನ್ನು ತಲುಪಿದೆ. ಬುಧವಾರ ಈ ಸ್ಟಾಕ್ ಶೇ. 20 ರಷ್ಟು ಕುಸಿದು ಲೋವರ್ ಸರ್ಕ್ಯೂಟ್ ತಲುಪಿತ್ತು.

    IRCON ಇಂಟರ್ನ್ಯಾಷನಲ್ ಷೇರುಗಳ ಬೆಲೆ ಗುರುವಾರ ಅಂದಾಜು 10 ಪ್ರತಿಶತದಷ್ಟು ಏರಿಕೆ ಕಂಡಿವೆ.

    “ರೈಲ್ವೆಗೆ ಸಂಬಂಧಿಸಿದಂತೆ, ಕಥೆಯು ಬಹುಮಟ್ಟಿಗೆ ಒಂದೇ ಆಗಿರುತ್ತದೆ. ಯಾರಾದರೂ ರೈಲು ಸಂಬಂಧಿತ ಕಂಪನಿಗಳ ಷೇರುಗಳನ್ನು ಖರೀದಿಸಿದರೆ, ಪ್ರಸ್ತುತ ಭಾರತೀಯ ರೈಲ್ವೆಯಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಅವರು ತಪ್ಪಾಗಲು ಸಾಧ್ಯವಿಲ್ಲ” ಎಂದು ಇಂಡಿಟ್ರೇಡ್ ಕ್ಯಾಪಿಟಲ್​ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದಾರೆ.

    ರೂ 1,886 ರಿಂದ 20ಕ್ಕೆ ಕುಸಿದಿರುವ ಖಾಸಗಿ ಬ್ಯಾಂಕ್​ ಷೇರು ಬೆಲೆ: ಈಗ ಒಂದೇ ದಿನದಲ್ಲಿ 12% ಏರಿಕೆ ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts