More

    ಷೇರು ಬೆಲೆ ಕುಸಿತವಾಗಿರುವ ಮಹಾರತ್ನ PSU ಸ್ಟಾಕ್‌ನಲ್ಲಿ ಹೂಡಿಕೆಗೆ ಉತ್ತಮ ಅವಕಾಶ: ವಿದೇಶಿ ಬ್ರೋಕರೇಜ್​ ಸಂಸ್ಥೆಯ ಟಾರ್ಗೆಟ್​ ಪ್ರೈಸ್​, ಕಾರಣಗಳೇನು?

    ಮುಂಬೈ: ಸರ್ಕಾರಿ ಕಂಪನಿಯಾದ (ಪಿಎಸ್​ಯು) ಕೋಲ್ ಇಂಡಿಯಾ ಲಿಮಿಟೆಡ್ (Coal India Ltd) ಷೇರುಗಳ ಬೆಲೆ ಬುಧವಾರದ ವಹಿವಾಟಿನಲ್ಲಿ ಶೇಕಡಾ 7.1 ರಷ್ಟು ಕುಸಿತ ಕಂಡಿತು, ಕೋಲ್​ ಇಂಡಿಯಾ ಲಿಮಿಟೆಡ್​ ಮಹಾರತ್ನ ಪಿಎಸ್‌ಯು ಕಂಪನಿಯಾಗಿದೆ. ಈ ಷೇರುಗಳು ಹೂಡಿಕೆದಾರರಿಗೆ ಒಂದು ವರ್ಷದಲ್ಲಿ 90 ಪ್ರತಿಶತಕ್ಕಿಂತ ಹೆಚ್ಚಿನ ಲಾಭವನ್ನು ನೀಡಿವೆ,

    ವಿದೇಶಿ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್, ಈ ಮಹಾರತ್ನ ಪಿಎಸ್‌ಯುನಲ್ಲಿ ಇತ್ತೀಚಿನ ತಿದ್ದುಪಡಿಯ ನಂತರ ತನ್ನ ಬುಲಿಶ್ ನಿಲುವನ್ನು ಉಳಿಸಿಕೊಂಡಿದೆ. ಈಗ ಈ ಷೇರುಗಳ ಬೆಲೆ ಕುಸಿತವಾಗಿರುವುದು ಉತ್ತಮ ಖರೀದಿ ಅವಕಾಶವನ್ನು ಒದಗಿಸುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಜೆಫರೀಸ್ ಹೇಳಿದೆ.

    ಇದು ಪ್ರತಿ ಷೇರಿಗೆ 520 ರೂ. ಗುರಿ ಬೆಲೆಯನ್ನು ನಿಗದಿಪಡಿಸಿದೆ. ಇದು ಬುಧವಾರದ ಮುಕ್ತಾಯದ ಬೆಲೆಯಿಂದ ಶೇಕಡಾ 24.7 ರಷ್ಟು ಏರಿಕೆಯನ್ನು ಸೂಚಿಸುತ್ತದೆ.

    ಕಳೆದ ತಿಂಗಳಲ್ಲಿ ಕೋಲ್ ಇಂಡಿಯಾ ಷೇರುಗಳ ಬೆಲೆ ಶೇ. 8.5ರಷ್ಟು ಕುಸಿತ ಕಂಡಿದೆ. ಬುಧವಾರವಷ್ಟೇ, ಈ ಷೇರುಗಳ ಬೆಲೆ ಶೇಕಡಾ 7.1 ರಷ್ಟು ಕುಸಿಯಿತು, ಗುರುವಾರದಂದು ಈ ಷೇರುಗಳ ಬೆಲೆ ಶೇ. 2.55ರಷ್ಟು ಏರಿಕೆಯಾಗಿ 427.70 ರೂಪಾಯಿ ತಲುಪಿತು.

    ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್ 7 ರವರೆಗೆ ಕೋಲ್ ಇಂಡಿಯಾದಲ್ಲಿ ಉತ್ಪಾದನೆಯು ದಾಖಲೆಯ 703.91 ಮಿಲಿಯನ್ ಟನ್‌ಗಳನ್ನು ತಲುಪಿದೆ, ಇದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.

    ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕಲ್ಲಿದ್ದಲು ಉತ್ಪಾದನೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದೆ. ಇದು ವಿದ್ಯುತ್ ಮತ್ತು ಉಕ್ಕಿನ ಕ್ಷೇತ್ರಗಳಿಗೆ ಸೇವೆ ಸಲ್ಲಿಸುತ್ತದೆ. ಇದು ಸಿಮೆಂಟ್, ರಸಗೊಬ್ಬರಗಳು ಮತ್ತು ಇಟ್ಟಿಗೆ ಗೂಡುಗಳು ಸೇರಿದಂತೆ ಹಲವಾರು ಕೈಗಾರಿಕೆಗಳಿಗೆ ಕೂಡ ಸೇವೆ ಒದಗಿಸುತ್ತದೆ.

    ಉತ್ಪಾದನೆಯನ್ನು ಹೆಚ್ಚಿಸಲು ಹಲವಾರು ಪ್ರಮುಖ ಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಮಾರ್ಚ್ 7 ರ ವೇಳೆಗೆ ಕೋಲ್ ಇಂಡಿಯಾ 72.70 ಮಿಟಿಯನ್​ ಟನ್​ ದಾಸ್ತಾನು ಹೊಂದಿದೆ.

    ದೇಶದ ಆರ್ಥಿಕ ಬೆಳವಣಿಗೆಯ ಆವೇಗವು ಬಲವಾಗಿ ಉಳಿದಿದ್ದು, ವಿದ್ಯುತ್ ಬೇಡಿಕೆಯು ನಿಯಮಿತವಾಗಿ ಏರುತ್ತಿದೆ, ಇದು ಉಷ್ಣ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬೇಡಿಕೆಯಲ್ಲಿ ಬಲವಾದ ಏರಿಕೆಗೆ ಕಾರಣವಾಗುತ್ತದೆ ಎಂದು ಜೆಫರೀಸ್ ಅಂದಾಜಿಸಿದೆ.

    ಬುಧವಾರದ ಮಹಾಕುಸಿತದ ನಂತರ ಷೇರುಪೇಟೆ ಚೇತರಿಕೆ: ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ 3.11%; ಮಿಡ್‌ಕ್ಯಾಪ್ ಸೂಚ್ಯಂಕ 2.28% ಏರಿಕೆ

    7 ಆರ್ಡರ್​ ಪಡೆದುಕೊಂಡ ಕಂಪನಿ: 20 ರೂಪಾಯಿಯ ಷೇರು ಅಪ್ಪರ್ ಸರ್ಕ್ಯೂಟ್ ಹಿಟ್​

    ಮ್ಯೂಚುವಲ್​ ಫಂಡ್​ಗಳಿಂದ ಷೇರುಗಳ ಶಾಪಿಂಗ್: ಬುಧವಾರದ ಮಹಾಕುಸಿತದ ನಂತರ ಗುರುವಾರ ಅದ್ಭುತ ಚೇತರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts