More

    3ರಂದು ಆಂಜನೇಯ ದೇಗುಲ ಕಳಸಾರೋಹಣ

    ಕಡೂರು: ತಾಲೂಕಿನ ಬಿಳುವಾಲ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ಮತ್ತು ಪರಿವಾರ ದೇವರುಗಳ ನೂತನ ದೇವಸ್ಥಾನ ಮತ್ತು ವಿಗ್ರಹ ಪ್ರತಿಷ್ಠಾಪನೆ ಹಾಗೂ ಕಳಸ ಸ್ಥಾಪನೆ ಸೇರಿದಂತೆ ಶ್ರೀ ಆಂಜನೇಯ ಸ್ವಾಮಿಯ ಗೋಪುರದ ಕಳಸ ಸ್ಥಾಪನೆಯ ಧಾರ್ಮಿಕ ಕಾರ್ಯಕ್ರಮ ಏ.30ರಿಂದ ಮೇ 3ರ ವರೆಗೆ ನಡೆಯಲಿದೆ ಎಂದು ಶ್ರೀ ಕಲ್ಲೇಶ್ವರಸ್ವಾಮಿ ಸೇವಾ ಸಂಘದ ಅಧ್ಯಕ್ಷ ಬಿ.ಕೆ.ಪ್ರಕಾಶ್ ತಿಳಿಸಿದರು.
    ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಹಾಗೂ ಬಿಳುವಾಲ ಗ್ರಾಮಸ್ಥರ ಸಹಯೋಗದೊಂದಿಗೆ ಲೋಕಾರ್ಪಣೆಗೆ ದೇವಸ್ಥಾನ ಸಿದ್ಧಗೊಂಡಿದೆ. ಏ.30ರ ಸಂಜೆ 6ಕ್ಕೆ ಧ್ವಜಾರೋಹಣ, ಮೇ 1ರಂದು ಗ್ರಾಮ ದೇವತೆಗಳ ಆಗಮನ, ಸಂಜೆ ಮೀಸಲು ಅಳೆಯುವುದು, ರಾತ್ರಿ ಭಜನೆ ನಡೆಯಲಿದೆ. 2ರಂದು ಗಣಯೋಗ, ಆಶ್ಲೇಷ ಬಲಿಪೂಜೆ, ದೇವರ ಆವಾಸ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂದರು.
    3ರಂದು ಮುಂಜಾನೆ 4ರಿಂದ 6ರ ತನಕ 108 ಪೂರ್ಣಕುಂಭದೊಂದಿಗೆ ಹೊಳೆ ಪೂಜೆ, ಕಳಸಾರೋಹಣ, ಪ್ರಾಣ ಪ್ರತಿಷ್ಠಾಪನೆ ಹಾಗೂ ಆಂಜನೇಯಸ್ವಾಮಿ ದೇವಾಲಯದ ಕಳಸಾರೋಹಣ ನೆರವೇರಲಿದೆ. 11 ಗಂಟೆಗೆ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಶ್ರೀ ವೀರೇಂದ್ರ ಹೆಗ್ಗಡೆ, ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ, ಹೊಸದುರ್ಗ ಕನಕಗುರು ಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಜ್ಞಾನಪ್ರಭು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಡಿ.ಸುರೇಂದ್ರ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts