More

    2 ಸರ್ಕಾರಿ ಬ್ಯಾಂಕ್​ ಷೇರುಗಳ ಖರೀದಿಗೆ ಬ್ರೋಕರೇಜ್​ ಸಂಸ್ಥೆ ಸಲಹೆ: ಹೀಗಿದೆ ಟಾರ್ಗೆಟ್​ ಪ್ರೈಸ್​…

    ಮುಂಬೈ: ಕಳೆದ 2 ವರ್ಷಗಳಲ್ಲಿ ಆಕರ್ಷಕ ಆದಾಯವನ್ನು ನೀಡಿದ 2 ಪ್ರಮುಖ ಬ್ಯಾಂಕ್ ಷೇರುಗಳನ್ನು ಖರೀದಿಸಲು ಬ್ರೋಕರೇಜ್​ ಸಂಸ್ಥೆ ಮೋತಿಲಾಲ್ ಓಸ್ವಾಲ್ ಹೂಡಿಕೆದಾರರಿಗೆ ಶಿಫಾರಸು ಮಾಡಿದೆ. ಮಾರಾಟದ ಗುರಿ ಬೆಲೆಯನ್ನು (ಟಾರ್ಗೆಟ್​ ಪ್ರೈಸ್​) ಕೂಡ ಅದು ನಿಗದಿಪಡಿಸಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ ಈ ಎರಡು ಷೇರುಗಳಾಗಿವೆ. ಬ್ಯಾಂಕ್ ಆಫ್ ಬರೋಡಾ ಷೇರುಗಳು ಕಳೆದ 3-ತಿಂಗಳಲ್ಲಿ 40% ಕ್ಕಿಂತ ಹೆಚ್ಚಿನ ಲಾಭವನ್ನು ಹೂಡಿಕೆದಾರರಿಗೆ ನೀಡಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ ಬೆಲೆ ಕಳೆದ 3-ತಿಂಗಳ ಅವಧಿಯಲ್ಲಿ 35% ಕ್ಕಿಂತ ಹೆಚ್ಚಾಗಿದೆ.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ ಬೆಲೆ ಈಗ ರೂ 740 ಆಗಿದೆ. ಮೋತಿಲಾಲ್ ಓಸ್ವಾಲ್ ಸಂಸ್ಥೆಯು ಎಸ್‌ಬಿಐ ಸ್ಟಾಕ್‌ಗೆ ಖರೀದಿ ಸಲಹೆ ನೀಡಿದ್ದು, ಗುರಿ ಬೆಲೆಯನ್ನು 860 ರೂ.ಗೆ ನಿಗದಿಪಡಿಸಿದೆ.

    ಬಿಎಸ್‌ಇಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳ 52 ವಾರಗಳ ಗರಿಷ್ಠ ಬೆಲೆ ಪ್ರತಿ ರೂ 777.50 ಮತ್ತು ಕನಿಷ್ಠ ಬೆಲೆ ರೂ 501.85 ಆಗಿದೆ. ಈ ಬ್ಯಾಂಕ್​ 6,75,994.73 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. SBI ಷೇರುಗಳು ಕಳೆದ 1 ತಿಂಗಳಲ್ಲಿ 23% ಗಳಿಸಿವೆ, ಕಳೆದ 3 ತಿಂಗಳಲ್ಲಿ 35% ರಷ್ಟು ಏರಿಕೆಯಾಗಿವೆ. ಕಳೆದ 1 ವರ್ಷದಲ್ಲಿ 45% ನಷ್ಟು ಲಾಭವನ್ನು ನೀಡಿವೆ. ಕಳೆದ 3 ವರ್ಷಗಳಲ್ಲಿ 93% ಮತ್ತು ಕಳೆದ 5 ವರ್ಷಗಳಲ್ಲಿ 183% ಹೆಚ್ಚಳ ಕಂಡಿವೆ.

    ಬ್ಯಾಂಕ್ ಆಫ್ ಬರೋಡಾ ಷೇರುಗಳ ಪ್ರಸ್ತುತ ಮಾರುಕಟ್ಟೆ ಬೆಲೆ 269 ರೂಪಾಯಿ ಇದೆ. ವಿಶ್ಲೇಷಕರು ಬ್ಯಾಂಕ್ ಆಫ್ ಬರೋಡಾ ಷೇರುಗಳಿಗೆ 310 ರೂ ಗುರಿ ಬೆಲೆಯೊಂದಿಗೆ ಖರೀದಿಗೆ ಸಲಹೆ ನೀಡಿದ್ದಾರೆ.
    1,40,195.63 ಕೋಟಿ ರೂ. ಮಾರುಕಟ್ಟೆ ಬಂಡವಾಳವನ್ನು ಈ ಬ್ಯಾಂಕ್​ ಹೊಂದಿದೆ. ಬ್ಯಾಂಕ್ ಆಫ್ ಬರೋಡಾ ಸ್ಟಾಕ್ ಕಳೆದ 1 ವರ್ಷದಲ್ಲಿ 75% ಗಳಿಸಿದೆ, ಕಳೆದ 2-ವರ್ಷಗಳಲ್ಲಿ 153% ಹೆಚ್ಚಳವಾಗಿದೆ. ಅಲ್ಲದೆ, ಕಳೆದ 3 ವರ್ಷಗಳಲ್ಲಿ 216% ನಷ್ಟು ಲಾಭವನ್ನು ನೀಡಿವೆ.

    ಫಿನ್​ಟೆಕ್​ ಕಂಪನಿಯ ಷೇರು ಒಂದೇ ದಿನದಲ್ಲಿ 15% ಏರಿಕೆ: ಇದಕ್ಕೆ ಕಾರಣವಾದ ಮೂರು ಒಪ್ಪಂದಗಳ ವಿವರ ಹೀಗಿದೆ…

    ರೈಲು ಪ್ರಯಾಣ ದರ ಇಳಿಸುವ ಮೂಲಕ ಪ್ರಯಾಣಿಕರಿಗೆ ಕೊಡುಗೆ ನೀಡಿದ ರೈಲ್ವೆ ಮಂಡಳಿ

    ಸಮಸ್ಯೆಯ ಸುಳಿಯಲ್ಲಿರುವ ಪೇಟಿಎಂ ಷೇರುಗಳಲ್ಲಿ ಹೂಡಿಕೆ ಮಾಡುವುದು ಸೂಕ್ತವೇ?: ಮಾರುಕಟ್ಟೆ ತಜ್ಞರು ಏನು ಹೇಳುತ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts