

ವಿಜಯವಾಣಿ ಸುದ್ದಿಜಾಲ ಅಮಾಸೆಬೈಲು
ನರಸೀಪುರ ಶ್ರೀ ಯೋಗಾರೂಢ ನರಸಿಂಹ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ವತಿಯಿಂದ ನೀಡಿದ ಧನಸಹಾಯ ಪ್ರಯೋಜನವಾಗಲಿದೆ ಎಂದು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅಮಾಸೆಬೈಲು ಸಮೀಪದ ರಟ್ಟಾಡಿ ಗ್ರಾಮದ ನರಸೀಪುರ ಶ್ರೀ ಯೋಗಾರೂಢ ನರಸಿಂಹ ದೇವಸ್ಥಾನಕ್ಕೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ನೀಡಿದ 5 ಲಕ್ಷ ರೂ. ಮೊತ್ತದ ಡಿಡಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ರಟ್ಡಾಡಿ ನವೀನ್‌ಚಂದ್ರ ಶೆಟ್ಟಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ಯೋಜನಾಧಿಕಾರಿ ನಾರಾಯಣ ಪಾಲನ್ ಡಿಡಿಯನ್ನು ಶಾಸಕರಿಗೆ ಹಸ್ತಾಂತರಿಸಿದರು.
ತೊಂಬತ್ತು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ನವೀನ್‌ಚಂದ್ರ ಹೆಗ್ಡೆ, ಅಮಾಸೆಬೈಲು ಗ್ರಾಮ ಪಂಚಾಯಿತಿ ಸದಸ್ಯ ಕಿರಣ ಕುಮಾರ್ ಶೆಟ್ಟಿ, ಕೃಷ್ಣ ಪೂಜಾರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಿತ್ತರಂಜನ್ ರಾವ್ ಮಾವಿನಕಾಡು, ಆಡಳಿತ ಮಂಡಳಿ ಮೊಕ್ತೇಸರ ಶಂಕರನಾರಾಯಣ ಕೊಡ್ಗಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಮಾಸೆಬೈಲು ವಲಯಾಧ್ಯಕ್ಷ ಭೋಜರಾಜ, ಸದಾಶಿವ ಶೆಟ್ಟಿ ಜಡ್ಡಿನಗದ್ದೆ, ರಾಮಣ್ಣ ಹೆಗೆ ್ಡ ಕೆಳಾಸುಂಕ, ವೈ.ಕುಶಲ್ ತೋಳಾರ್ ಬಳ್ಮನೆ, ಕೃಷ್ಣಕುಮಾರ್ ಭಾಗವತ ಅಮಾಸೆಬೈಲು, ಸೇವಾಪ್ರತಿನಿಧಿ ಗಂಗಾಮಣಿ, ಜೀರ್ಣೋದ್ದಾರ ಸಮಿತಿ ಸದಸ್ಯರು ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಶಂಕರ್ ಉಳ್ಳೂರು ಸ್ವಾಗತಿಸಿದರು. ಮೇಲ್ವಿಚಾರಕ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಶಂಕರ ನಾರಾಯಣ ಕೊಡ್ಗಿ ವಂದಿಸಿದರು.