ರೋಜರಿ ಮಾತಾ ಚರ್ಚ್‌ನಲ್ಲಿ ಬಲಿದಾನ ಆಚರಣೆ

gan-3
Published on

ಕುಂದಾಪುರ: ಇತ್ತೀಚೆಗೆ ನಿಧನರಾದ ಕ್ಯಾಥೊಲಿಕ್ ಕ್ರೈಸ್ತ ಸಮುದಾಯದ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಸ್ಮರಣಾರ್ಥವಾಗಿ ಕುಂದಾಪುರದ ಹೋಲಿ ರೋಜರಿ ಮಾತಾ ಚರ್ಚ್‌ನಲ್ಲಿ ಶ್ರದ್ಧಾಂಜಲಿಯ ಪವಿತ್ರ ಬಲಿದಾನ ಆಚರಿಸಲಾಯಿತು. ಚರ್ಚ್ ಧರ್ಮಗುರು ಪಾವ್ಲ್ ರೇಗೊ, ಪೋಪ್ ಫ್ರಾನ್ಸಿಸ್ ಅವರ ಆತ್ಮಕ್ಕೆ ಶಾಂತಿ ಲಭಿಸಲು ಚರ್ಚ್‌ನ ಭಕ್ತರೊಂದಿಗೆ ಬಲಿದಾನ ಅರ್ಪಿಸಿದರು.

ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್, ಚರ್ಚ್ ಪಾಲನಾ ಮಂಡಳಿಉಪಾಧ್ಯಕ್ಷ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನಾ ಮಂಡಳಿ ಸದಸ್ಯರು, ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net