

ನವದೆಹಲಿ: ತಮಿಳುನಾಡಿನ ಪಾನಿಪುರಿ ಮಾರುವವರೊಬ್ಬರ 2023-24ರ ಒಂದು ವರ್ಷದ ಆಕೌಂಟ್ ಟ್ರಾನ್ಸ್ಕ್ಷನ್ 40 ಲಕ್ಷ ರೂ. ಆಗಿದೆ ಎಂದು ಜಿಎಸ್‌ಟಿ(GST) ಅಧಿಕಾರಿಗಳು ಮಾರಾಟಗಾರನಿಗೆ ಜಿಎಸ್‌ಟಿ ಕಟ್ಟುವಂತೆ ನೋಟಿಸ್ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದು ಹರಿದಾಡುತ್ತಿದೆ.
ಕಳೆದ ಎರಡು ಮೂರು ದಿನಗಳಿಂದ ಇದನ್ನೂ ಗಮನಿಸಿರಬಹುದು. ಸ್ಟಾಂಡ್ ಆಪ್ ಕಾಮಿಡಿಯನ್ ಜಗದೀಶ್ ಚತುರ್ವೇದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪತ್ರವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಈ ಪೋಸ್ಟ್ಗೆ ಒಂದು ಶೀರ್ಷಿಕೆಯೊಂದನ್ನು ಕೊಟ್ಟಿದ್ದಾರೆ. '' ಪಾನಿಪುರು ಮಾರಾಟಗಾರ ವರ್ಷಕ್ಕೆ 40 ಲಕ್ಷ ರೂ.ಗಳಿಸುತ್ತಾನೆ. ಕಾರಣ ಆದಾಯ ತೆರಿಗೆ ನೋಟಿಸ್ ಪಡೆದಿದ್ದಾನೆ'' ಎಂದು ಬರೆದುಕೊಂಡಿದ್ದಾರೆ. ಬಳಿಕ ಇವರ ಪೋಸ್ಟ್ ಭಾರಿ ವೈರಲ್ ಆಗಿದೆ. ಇದು ನಿಜಾನಾ? ಅಥವಾ ಸತ್ಯಾನಾ? ಎಂಬ ಪ್ರಶ್ನೆ ಮೂಡಿದೆ. ಇದೀಗ ಈ ಪತ್ರದ ಅಸಲಿಯತ್ತು ತಿಳಿಯೋಣ ಬನ್ನಿ..
2024ರ ಡಿಸೆಂಬರ್ 17ರಂದು ತಮಿಳುನಾಡು ಸರಕು ಸೇವಾ ಮತ್ತು ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 70ರ ಅಡಿಯಲ್ಲಿ ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಿದೆ. ಜಿಎಸ್‌ಟಿ ನಿಯಮಗಳ ಪ್ರಕಾರ, ವರ್ಷಕ್ಕೆ 40 ಲಕ್ಷ ರೂ. ಅದಾಯಗಳಿಸುವ ಯಾವುದೇ ಮಾರಾಟಗಾರರು ತಮ್ಮ ವ್ಯವಹಾರವನ್ನು ನೊಂದಯಿಸಬೇಕು ಮತ್ತು ತೆರಿಗೆ ಪಾವತಿಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಮುಂದುವರೆದು, ಈ ಕುರಿತು ಮಾರಾಟಗಾರರಿಗೆ ಇದಕ್ಕೂ ಮುಂಚೆ ನೋಟಿಸ್ ನೀಡಲಾಗಿದೆ. ಕಳೆದ ಮೂರು ವರ್ಷಗಳಿಂದ ವಾಹಿವಾಟಿನ ದಾಖಲೆಗಳು ಸಲ್ಲಿಸುವಂತೆ ಮಾರಾಟಗಾರರಿಗೆ ನೋಟಿಸ್ನಲ್ಲಿ ತಿಳಿಸಲಾಗಿದೆ. ಇಲಾಖೆ ಪ್ರತಿ ವರ್ಷದಂತೆ ಸ್ಥಳೀಯ ಎಲ್ಲ ಮಾರಾಟಗಾರರಿಗೆ ಈ ವರ್ಷ ಕಳುಹಿಸಿದೆ. ಆದರೆ, ಸೊಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ನಕಲಿ ಎಂದು ವರದಿಗಳು ಉಲ್ಲೇಖಿಸಿವೆ.
ನಕಲಿ ನೋಟಿಸ್?
ನೋಟಿಸ್ ಅನ್ನು ತಪ್ಪಾಗಿ ನಿರೂಪಿಸಲಾಗಿದೆ. ಮಾರಾಟಗಾರನಿಗೆ ತನ್ನ ನೋಂದಣಿ ಪ್ರಮಾಣಪತ್ರವನ್ನು ಪಡೆಯಲು, ಜಿಎಸ್‌ಟಿ ವ್ಯಾಪ್ತಿಗೆ ಬರಲು ಮತ್ತು ಜಿಎಸ್‌ಟಿ ಸಂಖ್ಯೆಯನ್ನು ಪಡೆದುಕೊಳ್ಳಲು ತಿಳಿಸಲು ಮಾತ್ರ ಮಾರಾಟಗಾರನು ಒಪ್ಪಿದ್ದಾನೆ. ಇದು ಪ್ರಾಥಮಿಕ ಕಾರ್ಯಸೂಚಿಯಾಗಿತ್ತು. ಆದರೆ, ಕೆಲವು ಕಿಡಿಗೇಡಿಗಳು ಅದನ್ನು ಬದಲಾಯಿಸಿ ಸಾಮಾಜಿಕ ಜಾಲತಾಣಲ್ಲಿ ಹರಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)