ಪಾನಿಪುರಿ ಮಾರಾಟಗಾರನಿಗೆ ಜಿಎಸ್​ಟಿ ನೋಟಿಸ್​; ಕಾರಣ ತಿಳಿದ್ರೆ ಅಬ್ಬಾ ಅಂತೀರಾ.. | Viral Post

Untitled design - 2025-01-04T182630.736
Published on

ಚೆನ್ನೈ: ಪಾನಿಪುರಿ, ಗೋಲ್ಗಪ್ಪ, ಪಾನಿ ಬಟಾಶೆ ಅಥವಾ ಫುಚ್ಕಾ ಇದನೆಲ್ಲಾ ಕೇಳಿದ್ರೆ ಸಾಕು ತಕ್ಷಣ ಬಾಯಲ್ಲಿ ನೀರೂರುತ್ತದೆ. ಪಾನಿಪುರಿಯನ್ನು ಬೀದಿಬದಿಯಿಂದ ಹೈಫೈ ಮಾಲ್‌ಗಳಲ್ಲೂ ಮಾರಾಟ ಮಾಡಲಾಗುತ್ತದೆ. ಜನರು ಒಣ ಪುರಿಗಿಂತ ಅದರ ಮಸಾಲೆಯುಕ್ತ ನೀರನ್ನು ಹೆಚ್ಚು ಇಷ್ಟಪಡುತ್ತಾರೆ. 'ಪಾನಿ ಪುರಿ’ ಮಾರಾಟ ಮಾಡುವವರು ವರ್ಷಕ್ಕೆ ಎಷ್ಟು ಗಳಿಸುತ್ತಾರೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?(Viral Post)

ಜನರು ಎಂದಿಗೂ ಬೀದಿಬದಿ ವ್ಯಾಪಾರಿಗಳ ಆದಾಯವನ್ನು ಲಕ್ಷಗಳಲ್ಲಿ ಅಂದಾಜಿಸುವುದಿಲ್ಲ. ಆದರೆ ತಮಿಳುನಾಡಿನ ಗೋಲ್ಗಪ್ಪ ಮಾರಾಟ ಮಾಡುವವರ ಗಳಿಕೆಯು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಹೌದು, ತಮಿಳುನಾಡಿನಲ್ಲಿ ಪಾನಿಪುರಿ ಮಾರಾಟ ಮಾಡುವ ವ್ಯಕ್ತಿಯು ಆನ್‌ಲೈನ್ ಪಾವತಿಗಳ ಮೂಲಕ (ಫೋನ್-ಪೇ, ರೋಜರ್-ಪೇ) ಒಂದು ವರ್ಷದಲ್ಲಿ 40 ಲಕ್ಷ ರೂಪಾಯಿ ಗಳಿಸಿದ್ದಾರೆ. ಇದರಿಂದ ಅವರಿಗೆ ಜಿಎಸ್​ಟಿ ನೋಟಿಸ್​​ ನೀಡಲಾಗಿದೆ. ಈ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್ ಆಗುತ್ತಿರುವ ನೋಟಿಸ್‌ನಲ್ಲಿ ಡಿಸೆಂಬರ್ 17, 2024ರ ದಿನಾಂಕವನ್ನು ಬರೆಯಲಾಗಿದೆ. 'ತಮಿಳುನಾಡು ಸರಕು ಮತ್ತು ಸೇವಾ ತೆರಿಗೆ ಕಾಯ್ದೆ' ಮತ್ತು 'ಕೇಂದ್ರ ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 70' ಅಡಿಯಲ್ಲಿ ಈ ಸೂಚನೆ ನೀಡಲಾಗಿದೆ. ಇದರಲ್ಲಿ ಕಳೆದ ಮೂರು ವರ್ಷಗಳ ವಹಿವಾಟಿನ ವಿವರಗಳನ್ನು ಮಾರಾಟಗಾರರಿಂದ ಕೇಳಲಾಗಿದೆ. 2023-24ರ ಆರ್ಥಿಕ ವರ್ಷದಲ್ಲಿ ಗಳಿಸಿದ ದೊಡ್ಡ ಮೊತ್ತದ ಬಗ್ಗೆ ವಿಶೇಷವಾಗಿ ಪ್ರಶ್ನೆಗಳನ್ನು ಎತ್ತಲಾಗಿದೆ?

ಮಾರಾಟಗಾರನು ತನ್ನ ಮಸಾಲೆಯುಕ್ತ ತಿಂಡಿಗಳಿಗೆ ಪಾವತಿಗಳನ್ನು ಸ್ವೀಕರಿಸಿದ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ನೋಟಿಸ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕಾರ್ಪೊರೇಟ್ ಕೆಲಸ ಬಿಟ್ಟು ಪಾನಿಪುರಿ ಮಾರುತ್ತೇವೆ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net