ಸಿನಿಮಾ

ಮೈಸೂರಲ್ಲಿ ನಡುರಸ್ತೆಯಲ್ಲೇ ಅವ್ವ ಮಾದೇಶ್ ಆಪ್ತನ ಹತ್ಯೆ: ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮತ್ತೆ ಗ್ಯಾಂಗ್​ವಾರ್​ ಶುರುವಾಗಿದ್ದು, ನಡುರಸ್ತೆಯಲ್ಲೇ ರೌಡಿಶೀಟರ್​ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನಗರದ ಒಂಟಿಕೊಪ್ಪಲಿನ ನಿವಾಸಿ ಚಂದ್ರಶೇಖರ್ ಅಲಿಯಾಸ್ ಚೆಂದು ಕೊಲೆಯಾದ ವ್ಯಕ್ತಿ. ಈತ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ ಆಪ್ತ. ದ್ವಿಚಕ್ರ ವಾಹನದಲ್ಲಿ ಬಂದ 6 ಜನ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಬಸ್ಸಿನಲ್ಲಿ ಮಹಿಳೆಯರಿಬ್ಬರ ಮಧ್ಯೆ ಕುಳಿತು ಕಾಮಚೇಷ್ಟೆ: ವಿಡಿಯೋ ಹರಿಬಿಟ್ಟು ಘಟನೆ ವಿವರಿಸಿದ ನಟಿ

ಕೊಲೆಯಾದ ಚಂದ್ರಶೇಖರ್​ ಹುಣಸೂರು ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಳೆದ ಕೆಲ ದಿನಗಳಿಂದಷ್ಟೇ ಪ್ರಕರಣದಲ್ಲಿ ಖುಲಾಸೆಯಾಗಿ ಜೈಲಿನಿಂದ ಹೊರ ಬಂದಿದ್ದ. ಪಡುವಾರಳ್ಳಿಯ ದೇವು ಕೊಲೆಗೆ ಪ್ರತೀಕಾರವಾಗಿ ಚಂದ್ರಶೇಖರ್​ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಬರ್ಬರ ಹತ್ಯೆಯಿಂದಾಗಿ ಒಂಟಿಕೊಪ್ಪಲಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ರಾಜ್ಯದಲ್ಲಿ ಬಿಸಿಗಾಳಿ ಆತಂಕ; ಬಿಸಿಲಿನ ಝಳಕ್ಕೆ ಸುಸ್ತಾದ ಜನ

ಚಿಗುರೊಡೆದ ಏಮ್ಸ್ ಸ್ಥಾಪನೆಯ ಕನಸು- ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ

ವಸತಿ ನಿಲಯ ಹೆಚ್ಚಳಕ್ಕಿಲ್ಲ ಆಸಕ್ತಿ, ಅಧಿಕವಿದೆ ವಿದ್ಯಾರ್ಥಿಗಳ ಸಂಖ್ಯೆ

Latest Posts

ಲೈಫ್‌ಸ್ಟೈಲ್