ರೋಟರಿ ಅಧ್ಯಕ್ಷ ಸತೀಶ್‌ಕುಮಾರ್ ಪದಗ್ರಹಣ

nitte
ನಿಟ್ಟೆ ರೋಟರಿ ಕ್ಲಬ್ ಪದಗ್ರಹಣ ಇತ್ತೀಚೆಗೆ ನಡೆಯಿತು. ಶೇಖರ ಶೆಟ್ಟಿ, ಅಧ್ಯಕ್ಷ ಸತೀಶ್ ಕುಮಾರ್ ಕೆ.ಮೊದಲಾದವರಿದ್ದರು
Published on

ಕಾರ್ಕಳ: ಪ್ರಸಕ್ತ ಸಾಲಿನ ನಿಟ್ಟೆ ರೋಟರಿ ಕ್ಲಬ್ ಪದಗ್ರಹಣ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಶೇಖರ ಶೆಟ್ಟಿ ಪದಗ್ರಹಣ ಅಧಿಕಾರಿಯಾಗಿದ್ದರು. ಅಧ್ಯಕ್ಷರಾಗಿ ಸತೀಶ್ ಕುಮಾರ್ ಕೆ. ಪ್ರಮಾಣವಚನ ಸ್ವೀಕರಿಸಿದರು.
ಅನಿಲ್ ಡೇಸಾ, ಶೈಲೇಂದ್ರ ರಾವ್, ಸುದೀಪ್ ಕೆ.ಬಿ, ಸುರೇಶ್ ನಾಯಕ್ ಉಪಸ್ಥಿತರಿದ್ದರು. ಶಶಿಕಲಾ ಶೆಟ್ಟಿ ವರದಿ ವಾಚಿಸಿದರು. ನಿರ್ಗಮಿತ ಅಧ್ಯಕ್ಷ ಕೃಷ್ಣಪ್ರಸಾದ್ ಎಸ್.ಸ್ವಾಗತಿಸಿದರು. ಕಾರ್ಯದರ್ಶಿ ಡಾ.ರಘುನಂದನ್ ವಂದಿಸಿದರು. ತುಕಾರಾಮ ಶೆಟ್ಟಿ ಮತ್ತು ಶಶಿಕಾಂತ್ ಕರಿಂಕ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net