

ಕಾರ್ಕಳ: ಪ್ರತಿ ಕ್ಷೇತ್ರದಲ್ಲಿ ಮಹಿಳೆಯರೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪಾತ್ರವೂ ಇದೆ. ಮಹಿಳೆಗೆ ಸಮಾಜದಲ್ಲಿ ಸಮಾನ ಸ್ಥಾನ ನೀಡಿದಾಗ ಪುರುಷರಷ್ಟೇ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಗುರುದುರ್ಗಾ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಜೋಯ್ಸ ಟೆಲ್ಲಿಸ್ ಹೇಳಿದರು.
ನಂದಳಿಕೆ ಗೋಳಿಕಟ್ಟೆ ಶ್ರೀ ಗುರುದುರ್ಗಾ ಮಿತ್ರ ಮಂಡಳಿ ಹಾಗೂ ಮಹಿಳಾ ಮಂಡಳಿ ವತಿಯಿಂದ ಬೋರ್ಡು ಶಾಲೆಯ ಸಭಾಂಗಣದಲ್ಲಿ ಭಾನುವಾರ ನಾರಿ ವಿತ್ ಸ್ಯಾರಿ ಎನ್ನುವ ಫ್ಯಾಷನ್ ಶೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಗುರುದುರ್ಗಾ ಮಹಿಳಾ ಮಂಡಳಿಯ ಅಧ್ಯಕ್ಷೆ ಸುನಿತಾ ನೊರೊನ್ಹಾ ಅಧ್ಯಕ್ಷತೆ ವಹಿಸಿದ್ದರು. ಮಿತ್ರ ಮಂಡಳಿ ಅಧ್ಯಕ್ಷ ಅಶ್ವಥ್ ಶೆಟ್ಟಿ, ಕಾರ್ಯದರ್ಶಿ ವಿನೋದ್ ಆಚಾರ್ಯ ಉಪಸ್ಥಿತರಿದ್ದರು. ಸಿಂತಿಯಾ ಬರ್ಬೋಜಾ, ಪ್ರಿಯಾ ಮೆಂಡೋನ್ಸಾ ತೀರ್ಪುಗಾರರಾಗಿದ್ದರು. ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಮಂಡಳಿ ಕಾರ್ಯದರ್ಶಿ ವೀಣಾ ವಂದಿಸಿದರು. ಸ್ಪರ್ಧೆಯಲ್ಲಿ ಅಶ್ವಿನಿ ಪ್ರಥಮ ಸ್ಥಾನ, ರೇಷ್ಮಾ ದ್ವಿತೀಯ ಸ್ಥಾನ ಹಾಗೂ ಮೋನಿಕಾ ಅಂದ್ರಾದೆ ತೃತೀಯ ಸ್ಥಾನ ಪಡೆದರು.