

ಕೋಟ: ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ವತಿಯಿಂದ ಪಾಂಡೇಶ್ವರ ಹೈನಬೆಟ್ಟು ಹಾಲು ಡೇರಿ ಸಮೀಪದ ವಿಶಾಲಾಕ್ಷಿ ರಾವ್ ಮನೆಯ ಗದ್ದೆಯಲ್ಲಿ ರೈತಮಿತ್ರ ಯಾಂತ್ರೀಕೃತ ಕೃಷಿ ನಾಟಿ ಪ್ರಾತ್ಯಕ್ಷಿಕೆ ಭಾನುವಾರ ನಡೆಯಿತು.
ಯಾಂತ್ರೀಕೃತ ನಾಟಿ ಬಗ್ಗೆ ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ ಮಾಹಿತಿ ನೀಡಿದರು. ಪ್ರಗತಿಪರ ರೈತ ವಿಶಾಲಾಕ್ಷಿ ರಾವ್‌ಗೆ ಆರ್ಥಿಕ ನೆರವು ಮತ್ತು ಕೃಷಿ ಸಲಕರಣೆ ನೀಡಲಾಯಿತು. ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಸದಸ್ಯರಾದ ಚಂದ್ರಶೇಖರ ಹೊಳ್ಳ, ಬಾಲಕೃಷ್ಣ ಪೂಜಾರಿ, ಚಂದ್ರ ನಾಯರಿ, ಸುವಾಸಿನಿ ಶೆಟ್ಟಿ, ಕುಸುಮಾ ಮನೋಜ್, ಮನೋಜ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಅರವಿಂದ ಶರ್ಮ, ರಾಜಾರಾಮ ಐತಾಳ್, ಕಾರ್ಯದರ್ಶಿ ಸುಲತಾ ಎಸ್. ಹೆಗ್ಡೆ, ಕೃಷಿಕರು ಭಾಗವಹಿಸಿದ್ದರು.