ನವದೆಹಲಿ: ಇತ್ತೀಚೆಗಷ್ಟೇ ಪಾಕಿಸ್ತಾನದ ತವರಿನಲ್ಲೇ ಎರಡು ಪಂದ್ಯಗಳಲ್ಲಿ ಟೆಸ್ಟ್ ಸರಣಿಯನ್ನು ಭಾರೀ ಅಂತರದಿಂದ ಗೆದ್ದು ಬೀಗಿದ ಬಾಂಗ್ಲಾದೇಶ, 10 ವಿಕೆಟ್ಗಳ ಅಂತರದಲ್ಲಿ ಪಾಕ್ ತಂಡವನ್ನು ಬಗ್ಗುಬಡಿಯಿತು. ಪಾಕಿಸ್ತಾನ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸುವ ಮುಖೇನ ವಿಜಯ ಪತಾಕೆ ಹಾರಿಸಿತು. ಸದ್ಯ ಇದೇ ಉತ್ಸಾಹದಲ್ಲಿ ಟೀಮ್ ಇಂಡಿಯಾವನ್ನು ಟೀಕಿಸುವ ಪ್ರಯತ್ನಕ್ಕೆ ಮುಂದಾದ ಬಾಂಗ್ಲಾ ಆಟಗಾರರಿಗೆ ಇದೀಗ ಕ್ಯಾಪ್ಟನ್ ರೋಹಿತ್ ಶರ್ಮ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಇದನ್ನೂ ಓದಿ: ಅಮೀರ್ಖಾನ್ ಮಗನ ಜತೆ ಖುಷಿ ಕಪೂರ್ ರೊಮ್ಯಾನ್ಸ್; ಈ ಕುರಿತು ಜಾಹ್ನವಿ ಕಪೂರ್ ಹೇಳಿದಿಷ್ಟು..
ಪಾಕ್ ಮಣ್ಣಿನಲ್ಲೇ ಪಾಕಿಸ್ತಾನ ತಂಡಕ್ಕೆ ಸೋಲುಣಿಸಿದ ಬಾಂಗ್ಲಾದೇಶ, ಸದ್ಯ ಗೆದ್ದ ಸಂತೋಷದಲ್ಲಿಯೇ ತೇಲಾಡುತ್ತಿದೆ. ಇದೆಲ್ಲವು ತಂಡದಲ್ಲಿ ಗೆಲುವಿನ ಭರವಸೆ ಹೆಚ್ಚಿಸಿದ್ದು, ಆಟಗಾರರ ಆತ್ಮವಿಶ್ವಾಸ ಹಾಗೂ ದುರಹಂಕಾರದ ಮಾತುಗಳನ್ನು ಹೆಚ್ಚಿಸಿದೆ. ಭಾರತ-ಬಾಂಗ್ಲಾದೇಶದ ಪೈಪೋಟಿಗೆ ಇನ್ನೇನು ಕೆಲವು ದಿನಗಳಷ್ಟೇ ಬಾಕಿ.ಉಳಿದಿದೆ. ಈ ಮಧ್ಯೆ ಬಾಂಗ್ಲಾ ಕ್ಯಾಪ್ಟನ್ ನಜ್ಮುಲ್ ಹೊಸೈನ್ ಶಾಂಟೊ ಮತ್ತು ವೇಗಿ ನಹಿದ್ ರಾಣಾ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡುವ ಮೂಲಕ ಟೀಮ್ ಇಂಡಿಯಾವನ್ನು ಕೆರಳಿಸಿದ್ದರು. ಸದ್ಯ ಟೆಸ್ಟ್ ಪಂದ್ಯಕ್ಕಾಗಿ ಮೈದಾನಕ್ಕಿಳಿದಿರುವ ನಾಯಕ ರೋಹಿತ್, ಇಂತಹ ಹೇಳಿಕೆಗಳಿಗೆ ಬಗ್ಗುವುದಿಲ್ಲ ಎಂಬುದನ್ನು ಖಡಕ್ ಆಗಿ ತಿಳಿಸಿದ್ದಾರೆ.
“ದೇಶಕ್ಕಾಗಿ ಆಡುವ ಪ್ರತಿಯೊಂದು ಮ್ಯಾಚ್ ಕೂಡ ಬಹಳ ಮುಖ್ಯ. ಹಲವರು ನಾವು ಬಾಂಗ್ಲಾ ವಿರುದ್ಧ ಆಡ್ತಿರುವ ಸರಣಿ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ನಡೆಸುತ್ತಿರುವ ಪೂರ್ವಾಭ್ಯಾಸ ಎಂದೇ ಭಾವಿಸಿದ್ದಾರೆ. ನಮ್ಮ ತಂಡ ಬಾಂಗ್ಲಾವನ್ನು ಲಘುವಾಗಿ ಪರಿಗಣಿಸಿಲ್ಲ. ಸದ್ಯದ ಮಟ್ಟಿಗೆ ಅವರು ಚೆನ್ನಾಗಿ ಆಡ್ತಿದ್ದಾರೆ. ಆದ್ರೆ, ನಮ್ಮ ಬಳಿ ಕೂಡ ಕೆಲವು ಅಸ್ತ್ರಗಳಿವೆ. ಬಾಂಗ್ಲಾದೇಶ ಬಗ್ಗುಬಡಿಯಲು ನಮ್ಮ ಬತ್ತಳಿಕೆಯಲ್ಲಿ ಒಂದಷ್ಟು ಪ್ಲ್ಯಾನ್ಗಳು ಇವೆ” ಎಂದು ರೋಹಿತ್ ಗೆಲುವಿನ ಭರವಸೆಯನ್ನು ಬಲವಾಗಿ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
INDvsBAN: ಕೊಹ್ಲಿ ವಿಕೆಟ್ ಕಬಳಿಸಲು ಈ ಮೂವರು ಬೌಲರ್ಗಳಿಗೆ ಮಾತ್ರ ಸಾಧ್ಯ! ಏನಿವರ ವಿಶೇಷತೆ?
ಪ್ರಿಯಕರನ ಆ ಒಂದು ಕಂಡಿಷನ್ಗೆ ಹೆದರಿ ಬ್ರೇಕಪ್ ಮಾಡಿಕೊಂಡ ‘ಸೀತಾ ಮಹಾಲಕ್ಷ್ಮಿ’! 7 ತಿಂಗಳ ಹಿಂದಿನ ರಹಸ್ಯ ಬಯಲು