ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧ (ಸೆಪ್ಟೆಂಬರ್ 19) ಇಂದಿನಿಂದ ಆರಂಭವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಭಾರತ ತಂಡವು ಕಳಪೆ ಆರಂಭದ ಹೊರತಾಗಿಯೂ ಮೊದಲ ದಿನದಾಟದಲ್ಲಿ ಉತ್ತಮ ರನ್ಗಳಿಸುವತ್ತ ದಾಪುಗಾಲಿಡುತ್ತಿದ್ದು, ಎದುರಾಳಿಗಳ ಬಿಗಿ ಬೌಲಿಂಗ್ ದಾಳಿಗೆ ದಿಟ್ಟ ಪ್ರತಿರೋಧ ತೋರುತ್ತಿದೆ. ಮುಂಬರುವ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ತಂಡವನ್ನು ಸಜ್ಜುಗೊಳಿಸಬೇಕಾಗಿರುವ ನಿಟ್ಟಿನಲ್ಲಿ ಕೋಚ್ ಗೌತಮ್ ಗಂಭೀರ್ಗೆ ದೊಡ್ಡ ಅಗ್ನಿಪರೀಕ್ಷೆ ಎದುರಾಗಿದ್ದು, ತಮ್ಮ ಹಾಗೂ ರೋಹಿತ್ ಶರ್ಮ ನಡುವಿನ ಬಂಧವನ್ನು ಹಂಚಿಕೊಂಡಿದ್ದಾರೆ.
ಜಿಯೋ ಸ್ಪೋರ್ಟ್ಸ್ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಗಂಭೀರ್, ತಂಡವು ನಾಯಕನಿಗೆ ಸೇರಿದ್ದು, ಅಂತಿಮವಾಗಿ ತಂಡವನ್ನು ಮೈದಾನದಲ್ಲಿ ಆತನೇ ಮುಂದುವರೆಸುತ್ತಾನೆ. ರೋಹಿತ್ ಶರ್ಮ ನಡವಳಿಕೆ ಬಗ್ಗೆ ನಮಗೆ ಹೆಚ್ಚಿನ ಗೌರವವಿದ್ದು, ಅದು ನಾಯಕನ ಅಗ್ರಗಣ್ಯ ಗುಣವಾಗಿದೆ. ನಾನು ಮತ್ತು ಆತ ಒಟ್ಟಿಗೆ ಆಟವಾಡಿದ್ದು, ಆಗ ಹೇಗಿದ್ದನೋ ಈಗಲೂ ಹಾಗೆಯೇ ಇದ್ದಾನೆ.

ಇದನ್ನೂ ಓದಿ: ವಿರಾಟ್ ನನ್ನ ನಾಯಕತ್ವದಡಿಯಲ್ಲಿ ಆಡಿದ್ದಾರೆ, ಟೀಮ್ ಇಂಡಿಯಾದಲ್ಲಿರುವ ಅನೇಕರು… ತೇಜಸ್ವಿ ಯಾದವ್ ಹೇಳಿಕೆ ವೈರಲ್
ನಮ್ಮ ನಡುವೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಅಂತಿಮ ನಿರ್ಧಾರವು ನಾಯಕನ ಮೇಲಿದೆ. ಹನ್ನೊಂದು ಆಟಗಾರರನ್ನು ಆಯ್ಕೆ ಮಾಡುವುದು ಎಂದರೆ ಇತರರು ತಮ್ಮ ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ತಂಡದ ಅಗತ್ಯಗಳನ್ನು ಉತ್ತಮವಾಗಿ ಪೂರೈಸಬಲ್ಲವರನ್ನು ಆಯ್ಕೆ ಮಾಡುವುದು ನಾಯಕನ ಆದ್ಯತೆಯಾಗಿರುತ್ತದೆ. ಹೊರಗುಳಿದ ಅಥವಾ ಕೈಬಿಡಲಾದ ಆಟಗಾರರ ದುರ್ಬಲತೆಯನ್ನು ಅರ್ಥಮಾಡಿಕೊಳ್ಳುವುದು, ಪ್ರಕ್ರಿಯೆಯ ಮೂಲಕ ಅವರಿಗೆ ಸಹಾಯ ಮಾಡಲು ಸರಿಯಾದ ಬೆಂಬಲ ಮತ್ತು ಸಂವಹನವನ್ನು ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಜಿಯೋ ಸ್ಪೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಟೀಮ್ ಇಂಡಿಯಾ ನೂತನ ಕೋಚ್ ಗೌತಮ್ ಗಂಭೀರ್ ಅಧಿಕಾರ ವಹಿಸಿಕೊಂಡ ನಂತರ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲಿ ತಂಡಕ್ಕೆ ಸಹಿ-ಕಹಿ ಲಭಿಸಿದ್ದು, ಅವರ ಮೇಲೆ ಒತ್ತಡ ನಿರ್ಮಾಣವಾಗಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಬಾಂಗ್ಲಾ ವಿರುದ್ಧ ಸರಣಿ ನಂತರ ಅವರು ತಂಡವನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ, ಚಾಂಪಿಯನ್ಸ್ ಟ್ರೋಪಿ ಸೇರಿದಂತೆ ಅನೇಕ ಟೂರ್ನಿಗಳಿಗೆ ತಂಡವನ್ನು ಅಜ್ಜುಗೊಳಿಸಬೇಕಿದೆ. ಈ ಕಾರಣಕ್ಕಾಗಿ ಬಾಂಗ್ಲಾ ವಿರುದ್ಧದ ಸರಣಿ ಕೋಚ್ ಗೌತಮ್ ಗಂಭೀರ್ಗೆ ಮಹತ್ವದಾಗಿದೆ.