ಆತ ನನಗಾಗಿ ಒಂದು ತಿಂಗಳು… ಕ್ಯಾಪ್ಟನ್​ ಕೂಲ್​ ಕುರಿತು ಕೇಳದ ಕಥೆಯನ್ನು ಬಹಿರಂಗಪಡಿಸಿದ ಮಾಜಿ ಆಟಗಾರ

DK MSD

ನವದೆಹಲಿ: ಮಹೇಂದ್ರ ಸಿಂಗ್​ ಧೋನಿ ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಅವರ ನಾಯಕತ್ವದಲ್ಲಿ ಟೀಮ್​ ಇಂಡಿಯಾವು 2007ರ ಟಿ20 ವಿಶ್ವಕಪ್​, 2011ರ ಏಕದಿನ ವಿಶ್ವಕಪ್​, 2013ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಗೆದ್ದು ಬೀಗಿತ್ತು. ಇದಲ್ಲದೆ ಧೋನಿ ನಾಯಕತ್ವದಲ್ಲೇ ತಂಡವು ಎಲ್ಲಾ ಮಾದರಿಗಲಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು. ಎಷ್ಟೇ ಒತ್ತಡದ ಪರಿಸ್ಥಿತಿಯಿದ್ದರೂ ಕೋಪಗೊಳ್ಳದೆ ಎಂತಹ ಸಂದರ್ಭವಾದರೂ ಶಾಂತ ರೀತಿಯಿಂದಲೇ ಹ್ಯಾಂಡಲ್​ ಮಾಡುವ ಮೂಲಕ ಕ್ಯಾಪ್ಟನ್​ ಕೂಲ್​ ಎಂದೇ ಹಸರುವಾಸಿಯಾಗಿರುವ ಧೋನಿ ಬಗ್ಗೆ ಮಾಜಿ ಸಹ ಆಟಗಾರ ಆಕಾಶ್​ ಚೋಪ್ರಾ ವಿಚಾರ ಒಂದನ್ನು ಹಂಚಿಕೊಂಡಿದ್ದು, ಧೋನಿ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಪಾಡ್​ಕಾಸ್ಟ್​ನಲ್ಲಿ ಈ ಕುರಿತು ಮಾತನಾಡಿರುವ ಆಕಾಶ್​ ಚೋಪ್ರಾ, 2004ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ನಾನು ಅದಾಗಲೇ ಭಾರತ ತಂಡದ ಪರ ಆಡುತ್ತಿದ್ದೆ. ಅದೇ ವರ್ಷ ಜಿಂಬಾಬ್ವೆ ಮತ್ತು ಕೀನ್ಯಾ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು. ನಾನು ಹಾಗೂ ಧೋನಿ ಇಬ್ಬರು ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದೆವು. ಜಿಂಬಾಬ್ವೆ, ಕೀನ್ಯಾ ಪ್ರವಾಸಕ್ಕಾಗಿ ಬೆಂಗಳೂರಿನಲ್ಲಿ ಅಭ್ಯಾಸ ಶಿಬಿರವನ್ನು ಏರ್ಪಡಿಸಲಾಗಿತ್ತು.

Akash Chopra

ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಬೆಂಬಲಿಸುವುದಾಗಿ ಆಫರ್​​ ಕೊಟ್ಟಿದ್ರು, ರಿಜೆಕ್ಟ್​ ಮಾಡಿದೆ: ನಿತಿನ್​ ಗಡ್ಕರಿ

ಶಿಬಿರ ಮುಗಿಸಿಕೊಂಡು ಹೋಟೆಲ್​ ತಲುಪಿದಾಗ ಧೋನಿ ನಿನ್ನ ರೂಮ್​ಮೇಟ್​ ಎಂದು ಹೇಳಿದರು. ಆಗ ಆತ ಯಾರೆಂಬುದೆ ನನಗೆ ತಿಳಿದಿರಲಿಲ್ಲ. ಒಂದೆರಡು ಬಾರಿ ಹೆಸರು ಕೇಳಿದ್ದೆ ಅಷ್ಟೇ. ಒಂದು ತಿಂಗಳ ಕಾಲ ಆತ ರೂಮ್​ಮೇಟ್​ ಆಗಿದ್ದ. ಆತನ ಜೊತೆ ಕಳೆದ ಸಮಯ ವಿಭಿನ್ನವಾಗಿತ್ತು. ಆತನಿಗೆ ಅನೇಕ ಕರೆಗಳು ಬರುತ್ತಿದ್ದವು ಆದರೆ, ಆತ ಯಾವುದನ್ನು ಸ್ವೀಕರಿಸುತ್ತಿರಲಿಲ್ಲ. ನಿಮಗೆ ಯಾವಾಗ ಸರಿ ಅನಿಸುತ್ತದೆಯೋ ಆಗಲೇ ಲೈಟ್​ ಆಫ್​ ಮಾಡಿ ಎಂದು ಹೇಳುತ್ತಿದ್ದ.

ಆಹಾರದ ವಿಚಾರಕ್ಕೆ ಬರುವುದಾದರೆ ನಾನು ಶುದ್ಧ ಸಸ್ಯಾಹಾರಿ ಮತ್ತು ಆತ ಮಾಂಸಹಾರಿ. ಆತ ನಾನು ಮಾಡುತ್ತಿದ್ದ ಊಟವನ್ನೇ ತಿನ್ನುತ್ತಿದ್ದ. ಒಂದು ತಿಂಗಳ ಕಾಲ ಆತ ಮಾಂಸಹಾರವನ್ನು ಸೇವಿಸಿರಲಿಲ್ಲ. ಇದಾದ ಬಳಿಕ ಆತ ಬ್ಯಾಟಿಂಗ್​ ಮಾಡುವುದನ್ನು ನಾನು ನೋಡಿ ಬೆರಗಾದೆ. ಏಕೆಂದರೆ ಆತ ಚೆಂಡನ್ನು ಬೌಂಡರಿ ದಾಟಿಸುತ್ತಿದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು,. ಏಕೆಂದರೆ ಆತ ಒಂದು ದಿನವೂ ನೆಟ್ಸ್​ನಲ್ಲಿ ಅಭ್ಯಾಸ್ ಮಾಡಿದ್ದನ್ನು ನಾನು ನೋಡಲಿಲ್ಲ. ದಿನೇಶ್​ ಕಾರ್ತಿಕ್​​ಗೆ ಬೌಲಿಂಗ್​ ಮಾಡುವುದನ್ನು ಅನೇಕ ಬಾರಿ ನೋಡಿದ್ದೆ. ಆತನ ಪ್ರತಿಸ್ಫರ್ಧಿ ಎಂದು ತಿಳಿದಿದ್ದರು ಸಹ ಆತ ಯಾವುದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಇರುವುದರಲ್ಲೇ ಆನಂದಿಸುತ್ತಿದ್ದ ಎಂದು ಮಾಜಿ ಕ್ರಿಕೆಟಿಗ ಆಕಾಶ್​ ಚೋಪ್ರಾ ಧೋನಿಯನ್ನು ಹಾಡಿಹೊಗಳಿದ್ದಾರೆ.

Share This Article

Curry Leaf Juice ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ರಸ ಕುಡಿಯಿರಿ..ಬೊಜ್ಜು ಕಡಿಮೆಯಾಗುತ್ತದೆ..

Curry Leaf Juice : ಕರಿಬೇವಿನ ಎಲೆಗಳನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಇಷ್ಟೆಲ್ಲಾ…

Health Tips : ನೀವು ಮಧ್ಯರಾತ್ರಿ ಎಚ್ಚರಗೊಳ್ಳುತ್ತೀರಾ? ಆರೋಗ್ಯ ಸಮಸ್ಯೆ ಇರೋದು ಪಕ್ಕಾ…

Health Tips : ಮನುಷ್ಯನಿಗೆ ಆಹಾರ ಮತ್ತು ನೀರು ಎಷ್ಟು ಮುಖ್ಯವೋ ನಿದ್ರೆಯೂ ಅಷ್ಟೇ ಮುಖ್ಯ…

‘ಗೋಲ್ಡನ್ ಮಿಲ್ಕ್’ ಮಾಡುವ ಸರಿಯಾದ ವಿಧಾನ ಇಲ್ಲಿದೆ; ಉತ್ತಮ ಆರೋಗ್ಯಕ್ಕಾಗಿ ಈ Recipe

ಒಂದು ಚಮಚ ಅರಿಶಿನವನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಅದು ದೇಹಕ್ಕೆ ವರದಾನವಾಗಿದೆ. ಅರಿಶಿನ ಹಾಲು ಅನೇಕ…