ಈತ ಏನಾದರೂ IPL Mega Auctionನಲ್ಲಿ ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಬಿಡ್ಬೇಡಿ; RCBಗೆ ಮಹತ್ವದ ಸಲಹೆ ನೀಡಿದ ಮಾಜಿ ಸ್ಟಾರ್​ ಆಟಗಾರ

Team India
Published on

ಮುಂಬೈ: 18ನೇ ಆವೃತ್ತಿಯ ಐಪಿಎಲ್ (IPL)​ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಅದಕ್ಕೆ ಸಂಬಂಧಿಸಿದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ. ಈಗಾಗಲೇ ರಿಟೇನ್​ಗೆ ಸಂಬಂಧಿಸಿದ ನಿಯಮಗಳನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲಾ 10 ಫ್ರಾಂಚೈಸಿಗಳು ಅಕ್ಟೋಬರ್​ 31ರ ಒಳಗಾಗಿ ಪಟ್ಟಿಯನ್ನು ಸಲ್ಲಿಸಬೇಕಿದೆ. ಪ್ರತಿ ತಂಡಕ್ಕೆ ಆರು (5+1) ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು, ಫ್ರಾಂಚೈಸಿಗಳು ಯಾವ ಆಟಗಾರರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.

ರಿಟೇನ್​ ನಿಯಮ ಹೊರಬೀಳುತ್ತಿದ್ದಂತೆ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಐಪಿಎಲ್​ನ ಪ್ರಸಿದ್ಧ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (Royal Challengers Bengaluru) ಬಗ್ಗೆಯೂ ಮಾತನಾಡುತ್ತಿದ್ದಾರೆ. ಇದೀಗ ಟೀಮ್​ ಇಂಡಿಯಾದ (Team India) ಮಾಜಿ ಆಟಗಾರ ಮೊಹಮ್ಮದ್​ ಕೈಫ್​ (Mohammed kaif) ಆರ್​ಸಿಬಿ ಕುರಿತು ಮಾತನಾಡಿದ್ದು, ಅವಕಾಶ ಸಿಕ್ಕರೆ ಆ ಒಬ್ಬ ಆಟಗಾರನನ್ನು ಖರೀದಿಸುವಂತೆ ಸಲಹೆ ನೀಡಿದ್ದಾರೆ.

ಮೆಗ ಹರಾಜಿನಲ್ಲಿ ರೋಹಿತ್​ ಶರ್ಮರನ್ನು (Rohit Sharma) ಖರೀದಿಸಲು ಅವಕಾಶ ಸಿಕ್ಕರೆ ಆರ್​ಸಿಬಿಯವರು ಒಂದು ಕ್ಷಣ ಯೋಚಿಸದೆ ಅವರನ್ನು ಖರೀದಿಸುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಈಗಾಗಲೇ ಆರ್​ಸಿಬಿ ಕೊಹ್ಲಿಯನ್ನು (Kohli) ರಿಟೇನ್​ ಮಾಡಿಕೊಳ್ಳುವುದು ಖಚಿತವಾಗಿದ್ದು, ಒಂದು ವೇಳೆ ರೋಹಿತ್​ನನ್ನು ಖರೀದಿಸಿದರೆ ಇಲ್ಲೂ ಕೂಡ ಹಿಟ್​ಮ್ಯಾನ್​ ವಿರಾಟ್​ ಇರುವ ತಂಡವನ್ನ ಮುನ್ನಡೆಸಲಿದ್ದಾರೆ.

ನನ್ನ ಪ್ರಕಾರ ರೋಹಿತ್​ ಶರ್ಮ ಉತ್ತಮ ನಾಯಕನಾಗಿದ್ದು, ಆತ ಯಾವಾಗ ಏನು ಮಾಡಿದರೆ ಸೂಕ್ತ ಎಂಬುದು ಚೆನ್ನಾಗಿ ಅರತಿದ್ದಾನೆ. ತಂಡವನ್ನು ಹೇಗೆ ನಡೆಸಬೇಕು ಎಂಬುದು ಆತನಿಗೆ ತಿಳಿದಿದ್ದು, ಒಂದು ವೇಳೆ ಆತ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಆರ್​ಸಿಬಿ ಆತನನ್ನು ಖರೀದಿಸುವುದು ಸೂಕ್ತ ಎಂದು ಮೊಹಮ್ಮದ್​ ಕೈಫ್​ ಅಭಿಪ್ರಾಯಪಟ್ಟಿದ್ದಾರೆ. ಈ ಬಗೆಗಿನ ಸಂಪೂರ್ಣ ಚಿತ್ರಣ ಅಕ್ಟೋಬರ್​ 31ರಂದು ಹೊರಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net