ನವದೆಹಲಿ: ಟಿ20 ವಿಶ್ವಕಪ್ 2024 ರಲ್ಲಿ ಬಿರುಗಾಳಿಯ ರೂಪದಲ್ಲಿದ್ದಾರೆ ರೋಹಿತ್ ಶರ್ಮಾ. ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ರೋಹಿತ್ ದಾವಿಸಿದ್ದಾರೆ. ಆದರೆ ವೈಯಕ್ತಿಕ ದಾಖಲೆಗಳ ಬಗ್ಗೆ ಈ ಆಟಗಾರ ತಲೆಕೆಡಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: ‘ಧಕ್-ಧಕ್’ ಬೆಡಗಿಯನ್ನು ‘ದೇಶದ್ರೋಹಿ’ ಎಂದ ನೆಟ್ಟಿಗರು! ಕಾರಣ ಇದೇ ನೋಡಿ..
ರೋಹಿತ್ ಶರ್ಮಾ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ 7 ಪಂದ್ಯಗಳಲ್ಲಿ 248 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 41.33 ಮತ್ತು ಸ್ಟ್ರೈಕ್ ರೇಟ್ 155.97 ಆಗಿದೆ. ಫೈನಲ್‌ನಲ್ಲಿ 72 ರನ್ ಗಳಿಸಿದರೆ, ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ವಿರಾಟ್ ಕೊಹ್ಲಿ 2014 ರ ವಿಶ್ವಕಪ್‌ನಲ್ಲಿ 319 ರನ್ ಗಳಿಸಿದ್ದರು. ನಂತರ 2022 ರ ವಿಶ್ವಕಪ್ ಋತುವಿನಲ್ಲ 296 ರನ್ ಗಳಿಸಿದ್ದರು. 2014 ರಲ್ಲಿ ಅವರು ಗಳಿಸಿದ 319 ರನ್ಗಳು 106.33 ರ ಸರಾಸರಿಯಲ್ಲಿ ಬಂದವು. ಇದು ವಿಶ್ವಕಪ್ ಋತುವಿನಲ್ಲಿ ದಾಖಲೆಯಾಗಿ ಉಳಿದಿದೆ.
ಇನ್ನು ರೋಹಿತ್ ಟಿ20 ವಿಶ್ವಕಪ್ 2024 ಋತುವಿನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ 52 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಬಳಿಕ ಪಾಕಿಸ್ತಾನದ ವಿರುದ್ಧ 13 ರನ್ ಗಳಿಸಿದ್ದರು. ಅಫ್ಘಾನಿಸ್ತಾನ ವಿರುದ್ಧ 8 ರನ್ ಬಾಂಗ್ಲಾ ವಿರುದ್ಧ 23 ರನ್‌ಗಳ ಇನ್ನಿಂಗ್ಸ್, ಆಸ್ಟ್ರೇಲಿಯಾ ವಿರುದ್ಧ 41 ಎಸೆತಗಳಲ್ಲಿ 92 ರನ್ ಗಳಿಸಿ ಬಿರುಸಿನ ಆಟವಾಡಿದರು. ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ 39 ಎಸೆತಗಳಲ್ಲಿ 57 ರನ್ ಗಳಿಸಿದ್ದರು.
ಭೂ ಹಗರಣದಲ್ಲಿ ಹೇಮಂತ್ ಸೊರೇನ್ಗೆ ಜಾಮೀನು: 5ತಿಂಗಳ ನಂತರ ಜೈಲಿನಿಂದ ಬಿಡುಗಡೆ!