

ನವದೆಹಲಿ: ನಾವು ನೋಡಿರುವಂತೆ ಯಾವುದಾದರು ಪ್ರತಿಷ್ಠಿತ ಟೂರ್ನಿ ಅಥವಾ ಸರಣಿ ಅರಂಭಕ್ಕೂ ಮುನ್ನ ಆ ದೇಶದ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಮಾಜಿ ಆಟಗಾರರು ಮಾತನಾಡುವಾಗ ಬೇಕಂತಲೇ ಕೆಲವೊಮ್ಮೆ ಅತಿರೇಕದ ಹೇಳಿಕೆಗಳನ್ನು ಕೊಡುವ ಮೂಲಕ ಎದುರಾಳಿಗಳನ್ನು ಕೆಣಕುವ ಮೂಲಕ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕೋಚ್ ಜಾನ್ ಬುಕಾನನ್ ಟೀಮ್ ಇಂಡಿಯಾ ಕುರಿತು ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.
ಕಳೆದ ಬಾರಿ ಆಸ್ಟ್ರೇಲಿಯಾವು ಭಾರತ ತಂಡದ ವಿರುದ್ಧ ಸೋತ ನಂತರ ನ್ಯಾಥನ್ ಲ್ಯಾನ್ ಜೊತೆಗೆ ಇದೀಗ ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದು, ಬೌಲಿಂಗ್ ವಿಭಾಗ ಶಕ್ತಿಯುತವಾಗಿದೆ. ನಮ್ಮ ಈ ಬೌಲಿಂಗ್ ಲೈನ್ ಅಪ್ ಮುಂದೆ ಭಾರತದ ಅಗ್ರ ಕ್ರಮಾಂಕ ಬ್ಯಾಟ್ಸ್ಮನ್ಗಳು ಚೆನ್ನಾಗಿ ಬ್ಯಾಟ್ ಮಾಡಬೇಕಿದೆ. ಇಲ್ಲಿ ಮೈಂಡ್ಗೇಮ್ಗಳು ಪ್ರಮುಖ ಪಾತ್ರ ವಹಿಸಲಿದ್ದು, ಸರಣಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ.
ಭಾರತ ಹಾಗೂ ಆಸ್ಟ್ರೇಲಿಯಾದಲ್ಲಿರುವ ಆಟಗಾರರು ವೃತ್ತಿಜೀನದ ಹಂತದಲ್ಲಿದ್ದು, ಅವರೆಲ್ಲರೂ ಉತ್ತಮ ಪ್ರದರ್ಶನ ನೀಡಲು ಬಯಸುತ್ತಾರೆ. ಭಾರತ ತಂಡ ನೋಡುವುದಾದರೆ ರೋಹಿತ್ ಶರ್ಮ (37), ವಿರಾಟ್ ಕೊಹ್ಲಿ (35), ಆರ್, ಅಶ್ವಿನ್ (37) ವಯಸ್ಸಾಗಿದ್ದು, ಆಸ್ಟ್ರೇಲಿಯಾ ತಂಡದಲ್ಲಿ 30 ವರ್ಷದವರು ಇಬ್ಬರು ಮಾತ್ರ ಇದ್ದಾರೆ.
ನನ್ನ ಪ್ರಕಾರ ಈ ಸರಣಿ ಅತ್ಯುತ್ತಮವಾಗಲಿದೆ ಎಂದು ಭಾವಿಸುತ್ತೇನೆ. ಏಕೆಂದರೆ ಎರಡು ಕಡೆ ಬೌಲಿಂಗ್ ದಾಳಿ ಉತ್ತಮವಾಗಿದ್ದು, ಅಗ್ರ ಕ್ರಮಾಂಕ ಬ್ಯಾಟ್ಸ್ಮನ್ಗಳ ಮೇಲೆ ಇದು ಪರಿಣಾಮ ಬೀರಲಿದೆ. ನನ್ನ ಪ್ರಕಾರ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ ಗೆಲ್ಲಲಿದ್ದು, ಆತಿಥೇಯರು ಪ್ರಾಬಲ್ಯ ಸಾಧಿಸಲಿದ್ದಾರೆ ಎಂದು ಏಜಾನ್ ಬುಕಾನನ್ ಹೇಳಿದ್ದಾರೆ.