ನವದೆಹಲಿ: ಸದ್ಯ ಯಾವುದೇ ಸರಣಿಯಿಲ್ಲದ ಕಾರಣ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಈಗ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರಿ ಅಂತರವಿರುವುದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಹಾಗಂತ ರೋಹಿತ್ ಸುಮ್ಮನೇ ಖಾಲಿ ಕುಳಿತಿಲ್ಲ. ಇತರ ಆಟಗಾರರಂತೆ ರಜೆಯಲ್ಲಿ ಮೋಜು ಮಾಡದೇ ತಮ್ಮ ಫಿಟ್‌ನೆಸ್‌ನತ್ತ ಗಮನಹರಿಸುತ್ತಿದ್ದಾರೆ.
ಹೌದು, ರೋಹಿತ್ ಶೂ ಹಾಕಿಕೊಂಡು ಓಡುತ್ತಿರುವ ಫೋಟೊಗಳು, ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ. ಕೆಲ ಫೋಟೋಗಳಲ್ಲಿ ರೋಹಿತ್ರನ್ನು ನೋಡಿ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಟೀಮ್ ಇಂಡಿಯಾದ ದುಂಡುಮುಖದ ಮತ್ತು ಮುದ್ದಾದ ನಾಯಕ ರೋಹಿತ್, ವೈರಲ್ ಫೋಟೋಗಳಲ್ಲಿ ಹೊಟ್ಟೆಯನ್ನು ಕರಗಿಸಿ ತುಂಬಾ ಸ್ಲಿಮ್ ಹಾಗೂ ಫಿಟ್ ಆಗಿ ಕಾಣುತ್ತಿದ್ದಾರೆ. ಹಿಟ್‌ಮ್ಯಾನ್ ಅವರ ಹೊಸ ಅವತಾರದ ಬಗ್ಗೆ ಎಲ್ಲರೂ ಚರ್ಚಿಸುತ್ತಿದ್ದಾರೆ. ಈ ಬಗ್ಗೆ ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಪ್ರತಿಕ್ರಿಯಿಸಿದ್ದು, ರೋಹಿತ್ ಫಿಟ್ ಆಗುವುದರ ಹಿಂದೆ ದೊಡ್ಡ ಪ್ಲಾನ್ ಇದೆ ಎಂದಿದ್ದಾರೆ.
Captain Rohit Sharma clicked in Mumbai with Abhishek Nayar.📸🔥
The AURA, the swag, the style of @ImRo45 🐐🥶 pic.twitter.com/MdIau9HBGm
— 𝐑𝐮𝐬𝐡𝐢𝐢𝐢⁴⁵ (@rushiii_12) September 2, 2024
ಏನು ಆ ಪ್ಲಾನ್ ಅಂದರೆ, ರೋಹಿತ್ ತಮ್ಮ ವೃತ್ತಿಜೀವನವನ್ನು ದೀರ್ಘಕಾಲದವರೆಗೆ ವಿಸ್ತರಿಸುವತ್ತ ಗಮನಹರಿಸಿದ್ದಾರೆ ಎಂದು ಓಜಾ ಹೇಳಿದ್ದಾರೆ. ರೋಹಿತ್ಗೆ ಸದ್ಯಕ್ಕೆ ನಿವೃತ್ತಿಯಾಗುವ ಯಾವುದೇ ಆಲೋಚನೆಗಳಿಲ್ಲ. ದೀರ್ಘ ಕಾಲ ಆಟದಲ್ಲಿ ಮುಂದುವರಿಯಲು ಫಿಟ್ ಆಗಿರುವುದು ಬಹಳ ಮುಖ್ಯ ಎಂಬುದನ್ನು ಅವರು ಅರಿತುಕೊಂಡಿದ್ದಾರೆ. ಅದಕ್ಕಾಗಿಯೇ ಬಾಂಗ್ಲಾದೇಶ ಸರಣಿಗೂ ಮುನ್ನ ಸಿಕ್ಕ ಅಂತರವನ್ನು ಫಿಟ್ ಆಗಲು ಬಳಸಿಕೊಳ್ಳುತ್ತಿದ್ದಾರೆ ಎಂದು ಕ್ರೀಡಾ ವೆಬ್‌ಸೈಟ್ ಇನ್ಸೈಡ್ ಸ್ಫೋರ್ಟ್ಸ್ಗೆ ನೀಡಿದ ಸಂದರ್ಶನದಲ್ಲಿ ಓಜಾ ಹೇಳಿದರು..
ರೋಹಿತ್ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನೂ ನಾನು ಕೂಡ ನೋಡಿದ್ದೇನೆ. ತನ್ನ ವೃತ್ತಿಜೀವನವನ್ನು ವಿಸ್ತರಿಸಲು ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ಫಿಟ್ನೆಸ್ ಕಾಪಾಡಿಕೊಳ್ಳಲು ಈ 48 ದಿನಗಳ ಗ್ಯಾಪ್ ಅನ್ನು ಬಳಸುತ್ತಿದ್ದಾರೆ. ರೋಹಿತ್ ಅವರು ಚೆನ್ನಾಗಿ ತರಬೇತಿ ಪಡೆಯುತ್ತಿದ್ದಾರೆ ಎಂದರು.
ರೋಹಿತ್ ಟೀಮ್ ಇಂಡಿಯಾವನ್ನು ತುಂಬಾ ಪ್ರೀತಿಸುತ್ತಾರೆ. ತಂಡದ ಆಟಗಾರರನ್ನು ತಮ್ಮ ಕುಟುಂಬದವರಂತೆ ಕಾಣುತ್ತಾರೆ. ಅವರು ಪ್ರತಿ ಆಟಗಾರನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ರೋಹಿತ್ ಬಗ್ಗೆ ಪ್ರಗ್ಯಾನ್ ಓಜಾ ಮೆಚ್ಚುಗೆ ಮಾತುಗಳನ್ನಾಡಿದರು.
🚨INSIDESPORT EXCLUSIVE🚨
“Rohit Sharma knows fitness is the top most important thing if he wants to prolong his career”
“The way Rohit is handling Team India is like he is handling his own family”
– Pragyan Ojha#cricket #rohitsharma #viratkohli #viral pic.twitter.com/fNBYtha3RX
— InsideSport (@InsideSportIND) September 4, 2024
ಈಗಾಗಲೇ ಟಿ-20ಗೆ ವಿದಾಯ ಹೇಳಿರುವ ಹಿಟ್‌ಮ್ಯಾನ್ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ನಂತರ ಏಕದಿನ ಪಂದ್ಯಗಳಿಗೂ ಗುಡ್ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೀಗ ಫಿಟ್‌ನೆಸ್‌ನತ್ತ ಗಮನ ಹರಿಸಿರುವುದನ್ನು ನೋಡಿದರೆ ಓಜಾ ಅವರ ಮಾತಿನಂತೆ ಇನ್ನು ಸ್ವಲ್ಪ ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಮುಂದುವರಿಯಲು ರೋಹಿತ್ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾದರೆ ಟೀಮ್ ಇಂಡಿಯಾಕ್ಕೆ ಒಳ್ಳೆಯದಾಗಲಿದೆ. ಏಕೆಂದರೆ, ಕಿರಿಯರು ತಂಡದಲ್ಲಿ ನೆಲೆಯೂರುವವರೆಗೂ ರೋಹಿತ್ ಹಾಗೂ ಕೊಹ್ಲಿಯಂತಹ ಹಿರಿಯರ ಉಪಸ್ಥಿತಿ ತಂಡಕ್ಕೆ ಅತ್ಯಗತ್ಯ ಎನ್ನುತ್ತಾರೆ ತಜ್ಞರು. (ಏಜೆನ್ಸೀಸ್)
ಸಮಂತಾ SSLC ಮಾರ್ಕ್ಸ್ ಕಾರ್ಡ್ ವೈರಲ್! ಇಷ್ಟು ಅಂಕ ಹೇಗೆ ಸಾಧ್ಯ? ಅಂಕಪಟ್ಟಿಯಲ್ಲೂ ಇಷ್ಟೊಂದು ತಪ್ಪುಗಳಾ?
ಅವನನ್ನ ಬಿಡ್ಬೇಡಿ, ಪಾಠ ಕಲಿಸಿ, ಇವನಂಥವರು ಭೂಮಿ ಮೇಲಿರಬಾರದು! ಪವಿತ್ರಾ ಮಾತಿಗೆ ರೊಚ್ಚಿಗೆದ್ದ ಡಿ-ಗ್ಯಾಂಗ್