More

    ಮುನಿಸು ಮರೆತು ಒಟ್ಟಾಗಿ ಕಾಣಿಸಿಕೊಂಡ ರೋಹಿತ್​-ಹಾರ್ದಿಕ್​; ವಿಡಿಯೋ ವೈರಲ್

    ಮುಂಬೈ: 17ನೇ ಆವೃತ್ತಿ ಐಪಿಎಲ್​ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಬಿಸಿಸಿಐ ಹಾಗೂ ತಂಡಗಳು ಟೂರ್ನಿಗೆ ಸಿದ್ದತೆಗಳನ್ನು ಆರಂಭಿಸಿವೆ. ಆದರೆ, ಮುಂಬೈ ಇಂಡಿಯನ್ಸ್ ಐದು ಬಾರಿಯ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ್ದು, ಈಗ ಮತ್ತೊಂದು ವಿಚಾರಕ್ಕೆ ಎಲ್ಲರ ಗಮನ ಸೆಳೆದಿದೆ.

    ಈ ಹಿಂದೆ ನಾಯಕತ್ವದ ವಿಚಾರವಾಗಿ ವಿವಾದಕ್ಕೀಡಾಗಿದ್ದ ಮುಂಬೈ ಇಂಡಿಯನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಫಾಲೋವರ್ಸ್​ಅನ್ನು ಕಳೆದುಕೊಳ್ಳುವ ಮೂಲಕ ಅದರ ಪರಿಣಾಮವನ್ನು ಎದುರಿಸಿತ್ತು. ತಂಡದ ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್​ ಪಾಂಡ್ಯ ರೋಹಿತ್​ ಶರ್ಮಾರಂತೆ ಯಶಸ್ವಿ ನಾಯಕನಾಗಲಿದ್ದಾರಾ ಎಂದು ಹಲವರು ಫ್ರಾಂಚೈಸಿಯ ಕ್ರಮವನ್ನು ಪ್ರಶ್ನಿಸಿದ್ದರು. ಈ ಎಲ್ಲಾ ವಿವಾದಗಳಿಗೂ ಉತ್ತರ ನೀಡುವ ಸಲುವಾಗಿ ಮುಂಬೈ ಇಂಡಿಯನ್ಸ್​ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಭುಗಿಲೆದಿದ್ದ ಅಸಮಾಧಾನಕ್ಕೆ ಉತ್ತರ ನೀಡಿದೆ.

    ಮುಂಬೈ ಇಂಡಿಯನ್ಸ್​ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಶಾನ್ ಕಿಶನ್ ಟೀಂ ಇಂಡಿಯಾದಿಂದ ತನ್ನ ಹೆಸರನ್ನು ಹಿಂತೆಗೆದುಕೊಂಡ ನಂತರ ರೋಹಿತ್ ಸೇರಿದಂತೆ ಆಡಳಿತ ಮಂಡಳಿ ಈ ಯುವ ವಿಕೆಟ್​ಕೀಪರ್ ಬ್ಯಾಟರ್ ವಿರುದ್ಧ ಕೋಪಗೊಂಡಿದೆ ಎಂದು ವರದಿಯಾಗಿತ್ತು. ಆದರೆ ಈಗ ಈ ಹೊಸ ವಿಡಿಯೋದಲ್ಲಿ ರೋಹಿತ್ ಮತ್ತು ಇಶಾನ್ ಒಟ್ಟಿಗೆ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ.

    ಇದನ್ನೂ ಓದಿ: ಶೋಭಾ ವಿರುದ್ಧ ಆದಷ್ಟು ಗೋಬ್ಯಾಕ್ ಬೇರೆ ಎಲ್ಲಿಯೂ ಆಗಿಲ್ಲ: ಕೆ.ಎಸ್. ಈಶ್ವರಪ್ಪ

    ಅಲ್ಲದೇ ನಾಯಕತ್ವವನ್ನು ತನ್ನಿಂದ ಕಸಿದುಕೊಂಡ ಹಾರ್ದಿಕ್ ವಿರುದ್ಧ ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಕೋಪಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ಇವರೆಲ್ಲರು ಒಟ್ಟಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಮುಂಬೈ ಪೋಸ್ಟ್ ಮಾಡಿರುವ ಈ ವೀಡಿಯೊವನ್ನು ವೀಕ್ಷಿಸಿದ ಬಳಿಕ ನೆಟ್ಟಿಗರು ಹರ್ಷವ್ಯಕ್ತಪಡಿಸಿದ್ದಾರೆ. ಈಗ ತಂಡದೊಳಗಿನ ಎಲ್ಲರೂ ಸಂತೋಷವಾಗಿದ್ದಾರೆಂದು ತೋರುತ್ತದೆ ಎಂದು ಕಮೆಂಟ್​ ಮಾಡಿದ್ದಾರೆ.

    17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಹಾಗೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಮುಖಾಮುಖಿಯಾಗಲಿದ್ದು, ಕ್ರೀಡಾಭಿಮಾನಿಗಳು ಈ ಪಂದ್ಯ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts